ಉಡುಪಿಯಲ್ಲಿ ಇಂದು 213 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು 213 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4356ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಡುಪಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಂಭ್ರಮ
ಉಡುಪಿ: ಕೊರೊನಾ ಭೀತಿಯ ಮಧ್ಯೆ ಉಡುಪಿ ಜಿಲ್ಲೆಯಾದ್ಯಂತ ಈದುಲ್ ಅಝಾ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸರಕಾರದ ಮಾರ್ಗಸೂಚಿಯಂತೆ ಇಂದು ಆಚರಿಸಲಾಯಿತು. ಬೆಳಗ್ಗೆ ಆರು ಗಂಟೆಯಿಂದ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದುಲ್ ಅಝಾ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಅನ್ನು ನೆರವೇರಿಸಲಾಯಿತು ಒಂದು ಬಾರಿಗೆ ಐವತ್ತು ಮಂದಿಗೆ ಮಾತ್ರ ಅವಕಾಶ ನೀಡಲಾಯಿತು. ಅದಕ್ಕಿಂತ ಹೆಚ್ಚು ಜನರಿರುವ ಮಸೀದಿಗಳಲ್ಲಿ ಎರಡು ಹಾಗೂ ಇನ್ನು ಕೆಲವು ಮಸೀದಿಗಳಲ್ಲಿ ಮೂರು ಬ್ಯಾಚ್ಗಳಾಗಿ ನಮಾಝ್ ನೆರವೇರಿಸಲಾಯಿತು ನಮಾಜ್ ಗೆ ಆಗಮಿಸುವವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ […]
1,026 ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ
ಉಡುಪಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ 60 ವರ್ಷ ತುಂಬಿದ ಉಡುಪಿಯ ಹಿರಿಯ ದಸ್ತಾವೇಜು ಬರೆಹಗಾರ ರತ್ನಕುಮಾರ್ ಉಡುಪಿ ಜಿಲ್ಲೆಯ ಎಲ್ಲ 1,026 ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ಸಾಂಕೇತಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮಾತನಾಡಿ, ಕೊರೊನಾ ವಾರಿಯರ್ಸ್ಗಳನ್ನು ಬಾಯಿ ಮಾತಿನಲ್ಲಿ ಹೊಗಳುವುದಕ್ಕಿಂತ ಕಾರ್ಯರೂಪದಲ್ಲಿ ಹೊಗಳುವುದು ಮುಖ್ಯ. ಇಂತಹ ಆದರ್ಶಗಳನ್ನು ಕೇವಲ ಕೆಲವೇ ದಿನಗಳಿಗೆ ಮೀಸಲಿಡುವ ಬದಲು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವುದು ಮತ್ತು ನಾವು ಏನನ್ನು ಹೇಳುತ್ತೇವೋ ಅವುಗಳನ್ನು ಕಾರ್ಯರೂಪದಲ್ಲಿ […]
ತ್ರಿವಳಿ ತಲಾಖ್ ನಿಷೇಧದಿಂದ ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ಬಲವರ್ಧನೆಯಾಗಿದೆ: ಕೇಂದ್ರ ಸಚಿವ ನಖ್ವಿ
ನವದೆಹಲಿ: ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಿದ್ದರಿಂದ ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸುವುದರ ಜತೆಗೆ ಸ್ವಾವಲಂಬನೆಯಲ್ಲೂ ಬಲವರ್ಧನೆಗೊಂಡಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದರು. ‘ಮುಸ್ಲಿಂ ಮಹಿಳಾ ಕಾಯ್ದೆ, 2019ರ (ಮದುವೆ ಹಕ್ಕುಗಳ ರಕ್ಷಣೆ)’ ಮೊದಲ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶದ ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಹಿಂದೆ ತ್ರಿವಳಿ ತಲಾಖ್ ಅನ್ನು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಬಳಸುತ್ತಿದ್ದರು. ಆದರೆ ಇದೀಗ ಪ್ರಧಾನಿ ಮೋದಿ ಸರ್ಕಾರವು ತ್ರಿವಳಿ ತಲಾಖ್ […]
ಮೊಬೈಲ್ ಪ್ರಿಯರ ಕಣ್ಣೀಗ ಗೂಗಲ್ ಪಿಕ್ಸೆಲ್ ಮೇಲೆ! : ಆ.3 ಕ್ಕೆ ಬಿಡುಗಡೆಯಾಗಲಿದೆಯಾ ಬಹುನಿರೀಕ್ಷಿತ ಪಿಕ್ಸೆಲ್ 4 A ಫೋನ್?
ಉಡುಪಿ XPRESS ಟೆಕ್ ಲುಕ್ ಗೂಗಲ್ ಕಂಪೆನಿಯ ಬಹುನಿರೀಕ್ಷಿತ ಪಿಕ್ಸೆಲ್ 4 A ಫೋನ್ ಇದೀಗ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಮೊಬೈಲ್ ಪ್ರಿಯರ ಕಣ್ಣು ಪಿಕ್ಸೆಲ್ ಫೋನ್ ಮೇಲೆ ನೆಟ್ಟಿದೆ. ಕೊರೋನಾ ಪೂರ್ವದಲ್ಲೇ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೆ ಲಾಕ್ ಡೌನ್ ಇತ್ಯಾದಿ ಕಾರಣಗಳಿಂದ ಮಾರುಕಟ್ಟೆಗೆ ಬರಲು ತಡವಾಗಿತ್ತು.ಆದರೆ ಇದೀಗ ಗೂಗಲ್ ತನ್ನ ಪೇಜ್ ನ ಟೀಸರ್ ನಲ್ಲಿ ಆ.3 ಕ್ಕೆ ಪಿಕ್ಸೆಲ್ ಫೊನ್ ಬಿಡುಗಡೆಯಾಗಲಿದೆ ಎನ್ನುವ ಸುಳಿವು […]