udupixpress
Home Trending ಉಡುಪಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಂಭ್ರಮ

ಉಡುಪಿಯಲ್ಲಿ ಈದುಲ್ ಫಿತ್ರ್ ಹಬ್ಬದ ಸಂಭ್ರಮ

ಉಡುಪಿ: ಕೊರೊನಾ ಭೀತಿಯ ಮಧ್ಯೆ ಉಡುಪಿ ಜಿಲ್ಲೆಯಾದ್ಯಂತ ಈದುಲ್ ಅಝಾ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸರಕಾರದ ಮಾರ್ಗಸೂಚಿಯಂತೆ ಇಂದು ಆಚರಿಸಲಾಯಿತು.
ಬೆಳಗ್ಗೆ ಆರು ಗಂಟೆಯಿಂದ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದುಲ್ ಅಝಾ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಅನ್ನು ನೆರವೇರಿಸಲಾಯಿತು
ಒಂದು ಬಾರಿಗೆ ಐವತ್ತು ಮಂದಿಗೆ ಮಾತ್ರ ಅವಕಾಶ ನೀಡಲಾಯಿತು. ಅದಕ್ಕಿಂತ ಹೆಚ್ಚು ಜನರಿರುವ ಮಸೀದಿಗಳಲ್ಲಿ ಎರಡು ಹಾಗೂ ಇನ್ನು ಕೆಲವು ಮಸೀದಿಗಳಲ್ಲಿ ಮೂರು ಬ್ಯಾಚ್ಗಳಾಗಿ ನಮಾಝ್ ನೆರವೇರಿಸಲಾಯಿತು
ನಮಾಜ್ ಗೆ ಆಗಮಿಸುವವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿತ್ತು. ಸುರಕ್ಷಿತ ಅಂತರ ಕಾಯ್ದುಕೊಂಡು ನಮಾಜ್ ಮಾಡಲಾಯಿತು

error: Content is protected !!