ನರ್ಮ್ ಬಸ್ ಸೇವೆಯನ್ನು ತಕ್ಷಣವೇ ಆರಂಭಿಸಿ: ಖಾಸಗಿ ಬಸ್ ಗಳ ಒತ್ತಡಕ್ಕೆ ಮಣಿದು ಜನರನ್ನು ಸಂಕಷ್ಟಕ್ಕೆ ತಳ್ಳಬೇಡಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿ ಹಾಗೂ ನೌಕರರಿಗೆ ನರ್ಮ್ ಬಸ್ ನ ವ್ಯವಸ್ಥೆ ಮಾಡಲಾಗಿದೆ. ಆದರೆ ಖಾಸಗಿ ಕಂಪೆನಿಗಳಿಗೆ ದುಡಿಯುವ ನೌಕರರಿಗೆ ನರ್ಮ್ ಬಸ್ ಗಳನ್ನು ಒದಗಿಸದಿರುವುದು ಜಿಲ್ಲಾಡಳಿತದ ದ್ವಿಮುಖ ನೀತಿಯನ್ನು ತಿಳಿಸುತ್ತದೆ. ಜಿಲ್ಲೆಯಲ್ಲಿ ತಕ್ಷಣವೇ ನರ್ಮ್ ಬಸ್ ಗಳ ಸೇವೆಯನ್ನು ಆರಂಭಿಸಬೇಕು. ಖಾಸಗಿ ಬಸ್ ಗಳ ಒತ್ತಡಕ್ಕೆ ಮಣಿದು ಜನರನ್ನು ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮಾಡಬಾರದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ನಾನು ಶಾಸಕನಾಗಿ, ಮಂತ್ರಿಯಾಗಿ ಉಡುಪಿ […]

ಇವನೇ ನೋಡಿ ನಿಜವಾದ ಡ್ರೋನ್ ಮ್ಯಾನ್ : ಹಠ ಹಿಡಿದು ಡ್ರೋನ್ ಹಾರಿಸಿದ ಉಡುಪಿಯ ಈ ಹುಡುಗನ ಕತೆ ಕೇಳಿ!

ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಕೇಳಲ್ಪಡುತ್ತವೆ. ಅದಕ್ಕೆ ಪರ್ಯಾಯ ವಸ್ತುವಾಗಿ ಬೆಳೆದದ್ದು ಇದೇ ಡ್ರೋನ್. ಈಗ ಹೇಳ್ತೇವೆ ಕೇಳಿ ಡ್ರೋನ್ ತಯಾರಿಸಿದ ಉಡುಪಿಯ ಹದಿಹರೆಯದ ಹುಡುಗನ ಕಥೆ. ಇವನು ಮಾಡಿದ ಕಾರ್ಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಇವನ ಹೆಸರು ಗ್ಲೆನ್ ರೆಬೆಲ್ಲೊ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ. 2016 […]

ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ವನಮಹೋತ್ಸವ

ಉಡುಪಿ: ಇಲ್ಲಿನ ಸಂಸ್ಕ್ರತ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಅರಣ್ಯರಕ್ಷಕ ದೇವರಾಜ್ ಪಾಣರ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವಾಡಿ ಭಾಗವಹಿಸಿದ್ದರು. ಸಂಸ್ಕ್ರತ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್ ಲಕ್ಷ್ಮೀನಾರಾಯಣ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿಯಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ […]

ರೈಲ್ವೆ ಖಾಸಗೀಕರಣ ವಿರೋಧಿಸಿ ಉಡುಪಿಯಲ್ಲಿ ನಡೀತು ಪ್ರತಿಭಟನೆ: ರೈಲ್ವೆ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

ಉಡುಪಿ: ರೈಲ್ವೆ ಖಾಸಗೀಕರಣವನ್ನು ವಿರೋಧಿಸಿ ಸಿಐಟಿಯು ಉಡುಪಿ ತಾಲ್ಲೂಕು ಸಮಿತಿಯ ವತಿಯಿಂದ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ಸಂಪತ್ತುಗಳನ್ನು ಸದ್ದಿಲ್ಲದೆ ಖಾಸಗಿ ಕಂಪೆನಿಗಳಿಗೆ ಹಾಗೂ ವಿದೇಶಿ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ. ಈಗಾಗಲೇ ಕಲ್ಲಿದ್ದಲು ಗಣಿ, ರಕ್ಷಣಾ ವಲಯ, ವಿದ್ಯುಚ್ಛಕ್ತಿ ನಿಗಮ, ಎಪಿಎಂಸಿ ಮಾರುಕಟ್ಟೆಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಇದೀಗ ದೇಶದ ಅತೀ ದೊಡ್ಡ ಸಾರಿಗೆ ಸಂಪರ್ಕವಾದ ರೈಲ್ವೆಯನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಅದರ ಭಾಗವಾಗಿ ದೇಶದ 109 ರೈಲ್ವೆ […]

ಉಡುಪಿಯಲ್ಲಿ ಇಂದು 84 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ  ಕೊರೊನಾ ಸೋಂಕು ಮತ್ತಷ್ಟು ವ್ಯಾಪಿಸುತ್ತಿದ್ದು, ಇಂದು 84 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1979ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ