ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜು ಶೇ.99.8 ಫಲಿತಾಂಶ
ಕಾರ್ಕಳ: ಗಣಿತನಗರ ಜ್ಞಾನಸುಧಾ ಪದವಿಪೂರ್ವ ಕಾಲೇಜು 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 99.8 ಪಲಿತಾಂಶಗಳು ಗಳಿಸಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಜಾಗೃತಿ ಕೆ.ಜೆ.(591), ಬಿ. ಸಾತ್ವಿಕ್ ಶೆಣೈ(589), ಅಕ್ಷತ ನಾಯಕ್(588) ಮತ್ತು ಸಾಧಿಕ್ ಪೀರ್ ಸಾಬ್ ನಡಾಫ್(588) ಅಂಕಗಳೊಂದಿಗೆ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬಿ. ರಿತಿಕಾ ಕಾಮತ್(594), ರಕ್ಷಿತಾ(592) ಮತ್ತು ನಾಗರಾಜ ಪ್ರಭು ಕೆ.(589) ಅಂಕಗಳೊಂದಿಗೆ ಕ್ರಮವಾಗಿ ಪ್ರಥಮ […]
ಜಿಲ್ಲಾಧಿಕಾರಿ ಕಚೇರಿಗೆ ಬರುವ ಸರ್ಕಾರಿ ನೌಕರರಿಗೆ ಬಸ್ ಸೌಲಭ್ಯ
ಉಡುಪಿ: ಜಿಲ್ಲೆಯಲ್ಲಿ ಜುಲೈ 16ರ ಗುರುವಾರ ಬೆಳಿಗ್ಗೆಯಿಂದ 14 ದಿನಗಳ ಕಾಲ ಸೀಲ್ ಡೌನ್ ಇರುವುದರಿಂದ ಬಸ್ ಸಂಚಾರ ಇಲ್ಲದೆ ಸರಕಾರಿ ನೌಕರರಿಗೆ ಕಚೇರಿಗೆ ಬರಲು ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಅವರು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಲ್ಲಿ ಸಾರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಬೈಂದೂರು – ಕುಂದಾಪುರ – ರಜತಾದ್ರಿ ಹಾಗೂ ಹೆಜಮಾಡಿ – ಕಾಪು – ಉಡುಪಿ – ರಜತಾದ್ರಿ ಮಾರ್ಗವಾಗಿ […]
ನಾಳೆಯಿಂದ ದ.ಕ. ಜಿಲ್ಲೆ ಸಂಪೂರ್ಣ ಲಾಕ್ ಡೌನ್; ಸಾರ್ವಜನಿಕ-ಖಾಸಗಿ ಸಾರಿಗೆ ಸಂಚಾರ ಬಂದ್
ಮಂಗಳೂರು: ಜುಲೈ 16ರಿಂದ ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದ್ದು, ಜು. 23ರ ಬೆಳಗ್ಗೆ 5 ಗಂಟೆವರೆಗೂ ಲಾಕ್ ಡೌನ್ ನಡೆಯಲಿದೆ. ಜಿಲ್ಲಾಡಳಿತ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ದಿನಸಿ, ಹಣ್ಣು, ತರಕಾರಿ ಮಾಂಸದ ಅಂಗಡಿಗಳು ಲಭ್ಯವಿರಲಿದೆ. ಬಾರ್, ಮಾಲ್, ವೈನ್ ಶಾಪ್ ಗಳು ಸಂಪೂರ್ಣ ಬಂದ್ ಆಗಲಿವೆ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳೂ ಕೂಡ ಬಂದ್ ಆಗಲಿದೆ. ಕಂಟೈನ್ಮೆಂಟ್ ಝೋನ್ ಸಂಪೂರ್ಣ ಬಂದ್ ಇರಲಿದ್ದು, […]
ಅಗತ್ಯ ಇದ್ದವರು ಗಮನಿಸಿ: ಸವಿತಾ ಸಮಾಜ ಯೋಜನೆಯಡಿ ಲಭ್ಯವಿದೆ ಸಾಲ ಸೌಲಭ್ಯ
ಉಡುಪಿ : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ(ನಿ)ದಿಂದ ಸವಿತಾ ಸಮಾಜಕ್ಕೆ ಸೇರಿದ (ಪರಿಯಾಳ, ಅಂಬಟ್ಟನ್, ಬಜಂತ್ರಿ, ಭಂಡಾರಿ, ಚೌರಿಯ, ಹಡಪದ, ಕವುಟಿಯನ್, ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ನಾಡಿಗ್, ಕ್ಷೌರಿಕ್, ಕ್ಷೌರಿಕ) ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರಾದಾಯಿಕ ವೃತ್ತಿದಾರರ ಸಾಲ ಯೋಜನೆ ಹಾಗೂ ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸುವವರು ಉಚಿತವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಇಚ್ಛಿಸುವವರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ […]
ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜು ಶೇ.96 ಫಲಿತಾಂಶ
ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಶೇ.96ಕ್ಕೂ ಫಲಿತಾಂಶ ದಾಖಲಿಸಿದೆ. 318 ರಲ್ಲಿ 304 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 78ಮಂದಿ ವಿಶಿಷ್ಟ ಶ್ರೇಣಿ, 191 ವಿದ್ಯಾರ್ಥಿಗಳು ಪ್ರಥಮ ಹಾಗೂ 25 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದ 5 ಹಾಗೂ ವಿಜ್ಞಾನ ವಿಭಾಗದ 4 ವಿದ್ಯಾರ್ಥಿಗಳು ಶೇ.96 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಶಮಿ ಎನ್.(587) ಶಶಾಂಕ್ ಭಟ್ ಕೆಜಿ(581), ಮೇಧಿನಿ ಮಹಾಬಲೇಶ್ವರ್ ದೇಸಾಯಿ(575), ಜಾಸ್ಮಿನ್(573), ಅಮಿತ್ ಅಮಿತ್ ಗೌಡ […]