ನಾಳೆಯಿಂದ ದ.ಕ. ಜಿಲ್ಲೆ ಸಂಪೂರ್ಣ ಲಾಕ್ ಡೌನ್; ಸಾರ್ವಜನಿಕ-ಖಾಸಗಿ ಸಾರಿಗೆ ಸಂಚಾರ ಬಂದ್

ಮಂಗಳೂರು: ಜುಲೈ 16ರಿಂದ ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದ್ದು, ಜು. 23ರ ಬೆಳಗ್ಗೆ 5 ಗಂಟೆವರೆಗೂ ಲಾಕ್ ಡೌನ್ ನಡೆಯಲಿದೆ.

ಜಿಲ್ಲಾಡಳಿತ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ.
ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ದಿನಸಿ, ಹಣ್ಣು, ತರಕಾರಿ ಮಾಂಸದ ಅಂಗಡಿಗಳು ಲಭ್ಯವಿರಲಿದೆ.
ಬಾರ್, ಮಾಲ್, ವೈನ್ ಶಾಪ್ ಗಳು ಸಂಪೂರ್ಣ ಬಂದ್ ಆಗಲಿವೆ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳೂ ಕೂಡ ಬಂದ್ ಆಗಲಿದೆ.
ಕಂಟೈನ್ಮೆಂಟ್ ಝೋನ್ ಸಂಪೂರ್ಣ ಬಂದ್ ಇರಲಿದ್ದು, ಹೆದ್ದಾರಿಗಳಲ್ಲಿ ಸರಕು ಸಾಗಾಟ ವಾಹನಗಳಿಗೆ ಮಾತ್ರ ಅವಕಾಶ ಇರಲಿದೆ.
ಆರೋಗ್ಯ ಸೇರಿದಂತೆ ತುರ್ತು ಸೇವೆಗಳು ಲಭ್ಯವಿದ್ದು, ಅಗತ್ಯ ಸರ್ಕಾರಿ ಕಚೇರಿಗಳು ಓಪನ್ ಇರಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಆದೇಶ ನೀಡಿದ್ದಾರೆ.