ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜು ಶೇ.96 ಫಲಿತಾಂಶ

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಶೇ.96ಕ್ಕೂ ಫಲಿತಾಂಶ ದಾಖಲಿಸಿದೆ.

318 ರಲ್ಲಿ 304 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 78ಮಂದಿ ವಿಶಿಷ್ಟ ಶ್ರೇಣಿ, 191 ವಿದ್ಯಾರ್ಥಿಗಳು ಪ್ರಥಮ ಹಾಗೂ 25 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದ 5 ಹಾಗೂ ವಿಜ್ಞಾನ ವಿಭಾಗದ 4 ವಿದ್ಯಾರ್ಥಿಗಳು ಶೇ.96 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಶಮಿ ಎನ್.(587) ಶಶಾಂಕ್ ಭಟ್ ಕೆಜಿ(581), ಮೇಧಿನಿ ಮಹಾಬಲೇಶ್ವರ್ ದೇಸಾಯಿ(575), ಜಾಸ್ಮಿನ್(573), ಅಮಿತ್ ಅಮಿತ್ ಗೌಡ ಎನ್.(570), ವಿಜ್ಞಾನ ವಿಭಾಗದಲ್ಲಿ ಪಿ. ಅಶ್ವಿನಿ ಆಚಾರ್ಯ(583), ಆದರ್ಶ ಎಸ್. ಕೆಟಾಲಿ(575), ಭಾರ್ಗವ್(573), ಇನ ಗ್ಲಾಡ್ ಸಿನ್ ಆಳ್ವ(571) ಅಂಕ ಪಡೆದಿದ್ದಾರೆ.