ದ.ಕ. ಜಿಲ್ಲೆಯಲ್ಲಿ ಇಂದು 196 ಮಂದಿಗೆ ಕೊರೊನಾ ಪಾಸಿಟಿವ್

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಮತ್ತೆ 196 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1308 ಸಕ್ರೀಯ ಪ್ರಕರಣಗಳಿದ್ದು, 94 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 876 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ನನ್ನೊಳಗಿನ ನೋವು ನಿನಗೂ, ಯಾರಿಗೂ ಗೊತ್ತಿಲ್ಲ…!!!

♣ ಅಶೋಕ್ ಕುಂದರ್ ಉಡುಪಿ ರೆಂಬೆ ತುದಿಯ ನೋಟವದು. ಸುತ್ತಲೂ ನೂರಾರು ಕಣ್ಣುಗಳು ಆ ರೆಂಬೆ ತುದಿಯನ್ನೇ ದಿಟ್ಟಿಸುತ್ತಿರಬಹುದು. ಪ್ರತಿದಿನ ವಿಹರಿಸುವಂತೆ ಹಾರುತ್ತಿರುವಾಗ ಲಕ್ಷಾಂತರ ಕಣ್ಣುಗಳು ನನ್ನನ್ನು ನೋಡುತ್ತಿರಬಹುದು. ನಾ ಬಡಿಯುವ ರೆಕ್ಕೆಗಳಿಗೆ ಅದು ತಿಳಿದಿಲ್ಲ. ಕಣ್ಣುಗಳಿಗಂತು ತಾನ್ ತಲುಪುವ ಗುರಿಯದ್ದೇ ಚಿಂತೆಯಾಗಿತ್ತು. ಆದರೂ ನನ್ನನು ನನ್ನದೇ ರೆಕ್ಕೆಗಳು ಈ ರೆಂಬೆ ತುದಿಯಲ್ಲಿ ತಂದು ನಿಲ್ಲಿಸಿತ್ತು. ಎಷ್ಟೋ ತಿಂಗಳುಗಳಿಂದ ನಾ ಇಲ್ಲಿ ಬಂದು ಕೂರುತ್ತಿದ್ದೆ. ಪ್ರತಿ ಸಲ ಬರುವಾಗ ಒಂದೊಂದು ನೋಟ. ಮಳೆ ಬಿದ್ದಾಗ, ಬಿಸಿಲಿದ್ದಾಗ, ಚಳಿಯಲ್ಲಿ […]

ಉಡುಪಿಯಲ್ಲಿ ಇಂದು ಕೂಡ 41 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮುಂದುವರಿದಿದ್ದು, ಇಂದು ಕೂಡ 41 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1608ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿದ್ದಾರೆ. ಉಡುಪಿ ತಾಲ್ಲೂಕಿನ 26, ಕುಂದಾಪುರದ 11 ಮತ್ತು ಕಾರ್ಕಳದ 4 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 41 ಮಂದಿ ಸೋಂಕಿತರ ಪೈಕಿ 26 ಪುರುಷರು, 11 ಮಹಿಳೆಯರು ಮತ್ತು ನಾಲ್ಕು ಮಕ್ಕಳು ಇದ್ದಾರೆ. ಹಾಗೆಯೇ ಇಬ್ಬರು ಮುಂಬೈ, ಓರ್ವ ಸೌದಿ ಮತ್ತು […]

ಸೂರ್ಯ ಶಿಕಾರಿ : ಅರುಣ್ ಫೋಟೋ ಫಿಕ್ಸ್ ಕ್ಲಿಕ್ಕಿಸಿದ ಚಿತ್ರ

♦ ಯುವಕನೊಬ್ಬ ಸಂಜೆಯ ಸೂರ್ಯನನ್ನು ನುಂಗುವಂತಿರುವ ಈ ಚೆಂದದ ಚಿತ್ರ ತೆಗೆದದ್ದು ಕೋಟದ ಅರುಣ್ ಫೋಟೋ ಫಿಕ್ಸ್ ಅವರು. ವೃತ್ತಿಪರ ಛಾಯಾಗ್ರಹಣ ಕ್ಷೇತ್ರದಲ್ಲಿ ನುರಿತರಾಗಿರುವ ಇವರು ಆಗಾಗ ನಿಸರ್ಗದ ವಿವಿಧ ಭಂಗಿಗಳನ್ನೂ ಸೆರೆ ಹಿಡಿಯುತ್ತಾರೆ. ಇವರ ಸಂಪರ್ಕ:9945543012 (ಪ್ರತೀ ಭಾನುವಾರ ಪ್ರಕಟಗೊಳ್ಳುವ ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರತೀ ಭಾನುವಾರ  ಪ್ರಕಟಿಸುತ್ತೇವೆ. ಇಲ್ಲಿಗೆ ಕಳಿಸಿ- ಮೇಲ್: newsudupixpress@gmail.com, ನಮ್ಮ […]

ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟ: ಬಿಜೆಪಿಯತ್ತ ಸಚಿನ್ ಪೈಲೆಟ್?

ಜೈಪುರ: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್ನ ಇಬ್ಬರು ಪ್ರಮುಖ ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಮಧ್ಯಪ್ರದೇಶದಲ್ಲಿ ಭಿನ್ನಮತ ಉಂಟಾಗಿ ಸರಕಾರ ಪತನಗೊಂಡ ಅನಂತರ ಈಗ ರಾಜಸ್ಥಾನದಲ್ಲಿ ಭಿನ್ನಮತ ಭುಗಿಲೆದ್ದಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಎಲ್ಲವೂ ಸರಿಹೋಗದಿರುವುದು ಅಲ್ಲಿನ‌ ಕೆಲವೊಂದು ಬೆಳವಣಿಗೆಗಳಿಂದ ತಿಳಿದುಬಂದಿದೆ. ಈ ಮಧ್ಯೆ ತನ್ನ 8 ಬೆಂಬಲಿತ ಶಾಸಕರೊಂದಿಗೆ ಪೈಲೆಟ್ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನಿರ್ಧಾರದ ಬಿಕ್ಕಟ್ಟಿನ ಬಗ್ಗೆ ತಿಳಿಸಲಾಗುವುದು ಎಂದಿದ್ದಾರೆ. ಅಲ್ಲದೇ ಪ್ರಭಾವಿ ನಾಯಕರಾಗಿರುವ […]