ದ.ಕ. ಜಿಲ್ಲೆ: 6 ಮಂದಿ ಕೊರೊನಾ ಸೋಂಕಿತರು ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ (ಜು.10) ಕೊರೊನಾ ಸೋಂಕಿತ 6 ಮಂದಿ ಮೃತಪಟ್ಟಿದ್ದಾರೆ. ಒಂದೇ ದಿನ ಆರು ಮಂದಿ ಕೋವಿಡ್ 19 ಸೋಂಕಿತರು ಸಾವನ್ನಪ್ಪಿದ್ದು, ಮಂಗಳೂರಿನ ಕೋವಿಡ್ ವೆನ್ಲಾಕ್ ಆಸ್ಪತ್ರೆಯಲ್ಲಿ ನಾಲ್ವರು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳೂರಿನ ತೊಕ್ಕೊಟ್ಟುವಿನ 58 ವರ್ಷದ ಮಹಿಳೆ, ಫಳ್ನೀರ್ ನ 65 ವರ್ಷದ ಪುರುಷ, ಉಳ್ಳಾಲದ 67 ವರ್ಷದ ಪುರುಷ, ಹೊಸ ಬೆಟ್ಟುವಿನ 35 ವರ್ಷದ ಯುವಕ ಸಾವನ್ನಪ್ಪಿದವರು. ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಉಡುಪಿಯಲ್ಲಿ ಇಂದು ಕೂಡ 34 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಮುಂದುವರಿದಿದ್ದು, ಇಂದು ಕೂಡ 34 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1477ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕ್ರೀಡಾ ಇಲಾಖೆ ಪ್ರಶಸ್ತಿ: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
ಉಡುಪಿ ಜುಲೈ 10: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ಸೇವೆಗಳಿಗಾಗಿ ಸೇವಾ ಸಿಂಧು ವೆಬ್ ಸೈಟ್ನಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಯುವಕ, ಯುವತಿ, ಸಂಘ, ಕ್ಲಬ್ ಗಳ ನೊಂದಣಿಗಾಗಿ ಅರ್ಜಿ,ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ, ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಾಗಿ ಸೇವಾ ಸಿಂಧುವೆಬ್ ಸೈಟ್ https://sevasindhu.karnataka.gov.in ನಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ರೋಶನ್ಕುಮಾರ್ ಶೆಟ್ಟಿ ,ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ […]
ಒಂದಷ್ಟು ಪ್ರಶ್ನೆಗಳ ಜೊತೆಗೆ ಕಾಡುವ ಮೋಹಕ ಕಿರುಚಿತ್ರ “ಯಕ್ಷ ಪ್ರಶ್ನೆ”:ಅಂತದ್ದೇನಿದೆ ಈ ಸಿನಿಮಾದಲ್ಲಿ?
ನೂರಾರು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸುತ್ತ,ಪ್ರತಿಯೊಂದು ಪಾತ್ರವನ್ನು ಕಾಡಿಸುತ್ತ ತುಳುನಾಡಿನ ಸೊಗಡು,ಪರಂಪರೆ, ಪ್ರಾಕೃತಿಕ ವೈಭವಗಳನ್ನು ಕಣ್ಣೊಳಗೆ ಶಾಶ್ವತವಾಗಿ ಮೂಡಿಸುವ ಕಿರುಚಿತ್ರ “ಯಕ್ಷಪ್ರಶ್ನೆ”. ಸಂತೋಷ್ ಎಂ ಪುಚೇರ್ ಅವರು ನಿರ್ದೇಶಿಸಿರುವ “ಯಕ್ಷಪ್ರಶ್ನೆ ಜು.9 ರಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದೆ.ಆ ಕಿರುಚಿತ್ರದ ಕುರಿತು ಉಡುಪಿXPRESS ನ ಕಿರುನೋಟ ಈ ಹೊಸ ಕಾಲಘಟ್ಟದಲ್ಲಿ ಹೊಸ ಹೊಸ ಕನಸುಗಳನ್ನು ಹೊತ್ತು ಒಂದಷ್ಟು ಹೊಸ ಮನಸ್ಸುಗಳು ಸೇರಿ ನಿರ್ಮಿಸಿದ ಕಿರುಚಿತ್ರಗಳು ರಾಶಿ ರಾಶಿಯಾಗಿ ಬರುತ್ತಲೇ ಇದೆ.ಅವುಗಳಲ್ಲಿ ಒಂದಷ್ಟು ಕಿರುಚಿತ್ರಗಳು ಹಾಗೆ ಒಂದು ಹೀಗೆ […]
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ, ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು
ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದ್ದು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಪದವಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸರಕಾರ ತೀರ್ಮಾನಿಸಲಾಗಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ ಶುಕ್ರವಾರ ಈ ಕುರಿತು ಮಾಹಿತಿ ನೀಡಿದರು. ‘2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ […]