ದ.ಕ. ಜಿಲ್ಲೆ: 6 ಮಂದಿ ಕೊರೊನಾ ಸೋಂಕಿತರು ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ (ಜು.10) ಕೊರೊನಾ ಸೋಂಕಿತ 6 ಮಂದಿ ಮೃತಪಟ್ಟಿದ್ದಾರೆ.

ಒಂದೇ ದಿನ ಆರು ಮಂದಿ ಕೋವಿಡ್ 19 ಸೋಂಕಿತರು ಸಾವನ್ನಪ್ಪಿದ್ದು, ಮಂಗಳೂರಿನ ಕೋವಿಡ್ ವೆನ್ಲಾಕ್ ಆಸ್ಪತ್ರೆಯಲ್ಲಿ ನಾಲ್ವರು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮಂಗಳೂರಿನ ತೊಕ್ಕೊಟ್ಟುವಿನ 58 ವರ್ಷದ ಮಹಿಳೆ, ಫಳ್ನೀರ್ ನ 65 ವರ್ಷದ ಪುರುಷ, ಉಳ್ಳಾಲದ 67 ವರ್ಷದ ಪುರುಷ, ಹೊಸ ಬೆಟ್ಟುವಿನ 35 ವರ್ಷದ ಯುವಕ ಸಾವನ್ನಪ್ಪಿದವರು. ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.