ಮನೆ ಮನೆ ಮುದ್ದು ಮನೆ: ಸಂದೀಪ್ ಚಿಪ್ಲೂಂಕರ್ ಕ್ಲಿಕ್ಕಿಸಿದ ಚಿತ್ರ

“ಮನೆ ಮನೆ ಮುದ್ದು ಮನೆಯ” ಸುಂದರ ಚಿತ್ರವನ್ನು ಸೆರೆಹಿಡಿದವರು ಸಂದೀಪ್ ಚಿಪ್ಲೂಂಕರ್ . ಕಾರ್ಕಳ ತಾಲೂಕಿನ ಮೂಡಾರು ಗ್ರಾಮದ ನಿವಾಸಿಯಾಗಿರುವ ಸಂದೀಪ್ ಡ್ರೈವಿಂಗ್ ವೃತ್ತಿನಿರತರು, ಯುವ ಕೃಷಿಕರು ಕೂಡ. ಫೋಟೋಗ್ರಫಿ ಹವ್ಯಾಸವೆಂದರೆ ಇವರಿಗಿಷ್ಟ. ಕಂಡದ್ದನ್ನು ಬೇರೆಯವರಿಗೂ ಕಾಡಿಸೋದು, ಚಾರಣ ಮಾಡೋದು ಇವರ ಇತರ ಹವ್ಯಾಸಗಳು. ಇವರ ಸಂಪರ್ಕ 9901769648 ♥ (ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ನಮಗೂ ಕಳಿಸಿ.ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರಕಟಿಸುತ್ತೇವೆ.ನಮ್ಮ ವಾಟ್ಸಾಪ್: 7483419099  ಇಮೇಲ್:newsudupixpress@gmail.com)

ಉಡುಪಿಯಲ್ಲಿ ಭಾನುವಾರ ಒಂದೇ ದಿನ 45 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ  ಮುಂದುವರಿದಿದ್ದು, ಇಂದು ಒಂದೇ ದಿನ 45 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1322ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುಡ್ಡ ಕುಸಿದು ಎರಡು ಮನೆಗಳು ಜಖಾಂ: ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳು ಧರೆಶಾಯಿಯಾದ ಘಟನೆ ನಡೆದಿದೆ. ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಬಂಗ್ಲಗುಡ್ಡೆಯಲ್ಲಿ ಮಧ್ಯಾಹ್ನದ ವೇಳೆಗೆ ಉಂಟಾದ ಗುಡ್ಡ ಕುಸಿತದಿಂದ ಮನೆಯೊಂದು ಧರೆಶಾಯಿಯಾಗಿದೆ. ಒಂದು‌ ಮನೆ ಕುಸಿತದ ಬಳಿಕ ಆ ಮನೆಯ ಮೇಲಿನ ಭಾಗದಲ್ಲಿ ಇದ್ದ ಮತ್ತೊಂದು‌ ಮನೆಯೂ ಕುಸಿದಿದೆ. ಮೊದಲು ಧರೆಶಾಯಿಯಾದ ಮನೆಯಲ್ಲಿದ್ದ ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ. ಕರಾವಳಿಯಲ್ಲಿ ಮೂರು ದಿನಗಳಿಂದ  ಮಳೆಯಾಗಿದ್ದು ಪರಿಣಾಮ ಗುಡ್ಡಕುಸಿತ ಉಂಟಾಗಿದೆ. ಮೊದಲು […]

ಲಾಕ್‌ಡೌನ್‌ ನಿರ್ಧಾರ ಸಿಎಂಗೆ ಬಿಟ್ಟ ವಿಚಾರ: ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಬೇಕೆ , ಬೇಡವೇ ಎನ್ನುವುದರ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೋವಿಡ್‌ 19 ನಿಗ್ರಹ ಕಾರ್ಯಪಡೆ ಸಭೆಯ ಬಳಿಕ ಮಾತನಾಡಿದ ಅವರು, ‘ಸಭೆಯಲ್ಲಿ ಲಾಕ್‌ಡೌನ್‌ ವಿಷಯ ಕುರಿತಂತೆ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲವೆಂದು ನಾನು ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮುಖ್ಯಮಂತ್ರಿಗೆ ಮನದಟ್ಟು ಮಾಡಿದ್ದೇವೆ […]

ಎಲ್ಲಾ ಮುಗೀತು ಅಂದುಕೊಳ್ಳಲೇಬೇಡಿ, ಕನಸು ಇನ್ನೇನು ಶುರುವಾಗುತ್ತೆ !

♠ ಆರ್.ಜೆ.ಅಚ್ಲಾಡಿ ನಾವು ಜೀವನದಲ್ಲಿ ಎರಡು ವಿಚಾರಕ್ಕಾಗಿ  ಹೋರಾಟ ನಡೆಸುತ್ತಲೇ ಇರುತ್ತೇವೆ. ಒಂದು ಬದುಕಿಗಾಗಿ, ಮತ್ತೊಂದು ಬದುಕುವುದಕ್ಕಾಗಿ. ಸಣ್ಣಗೆ ಹುಷಾರ್ ತಪ್ಪಿ ಜೀವಕ್ಕೇನಾದರು ಆದರೂ ವೈದ್ಯರ ಬಳಿ ದೌಡಾಯಿಸಿ ಸಮಸ್ಯೆ ವಾಸಿಯಾಗುವ ತನಕ ಪ್ರಪಂಚವೇ ತಲೆಕೆಳಗಾದಂತೆ ಚಡಪಡಿಸುತ್ತೇವೆ, ಇದು ನಾವು ಬದುಕುವುದಕ್ಕಾಗಿ ನಡೆಸುವ ಹೋರಾಟ. ಸಣ್ಣ ಸಂಬಳದ ನೌಕರಿಯಿಂದ ಹಿಡಿದು, ಕೋಟಿ-ಕೋಟಿ ಸಂಪಾದಿಸುತ್ತಾ ಇನ್ನಷ್ಟು-ಮತ್ತಷ್ಟು ಸಂಪಾದಿಸಬೇಕು ಎಂದು ಜೀವನಪೂರ್ತಿ ಹೋರಾಟದಲ್ಲಿರುತ್ತಾನೆ. ಇದು ಬದುಕಿಗಾಗಿ ನಡೆಸುವ ಹೋರಾಟ. ಬದುಕು ಮತ್ತು ಬದುಕುವುದು ಎನ್ನುವ ಎರಡು ವಿಚಾರಗಳು ಸಂಪೂರ್ಣವಾಗಿ ಮಾನವ […]