udupixpress
Home Trending ದೇಶದಲ್ಲಿ ಕೊರೊನಾ ಹರಡಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ದೇಶದಲ್ಲಿ ಕೊರೊನಾ ಹರಡಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ದೇಶದಲ್ಲಿ ಕೊರೊನಾ ಸೋಂಕನ್ನು  ತಬ್ಲಿಘಿಗಳು ಉದ್ದೇಶ ಪೂರ್ವಕವಾಗಿ ಹರಡಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ ಹೊಸದಿಲ್ಲಿ ಮತ್ತು ಮಹಾರಾಷ್ಟ್ರದಿಂದ ಇಡೀ ದೇಶಕ್ಕೆ ಕೋವಿಡ್ ಹಬ್ಬಿಕೊಂಡಿದೆ.
ಬೆಂಗಳೂರಿನ ಪಾದರಾಯನಪುರ, ಸಿದ್ಧಿಕ್‌ ಲೇಔಟ್‌ನಲ್ಲಿ ತಬ್ಲಿಘಿಗಳು ಉದ್ದೇಶ ಪೂರ್ವಕವಾಗಿ ಸೋಂಕು ಹಂಚಿದ್ದಾರೆ.
ಇವರ ಈ ನಡತೆ ನೋಡಿದರೆ ಉದ್ದೇಶ ಪೂರ್ವಕವಾಗಿದ್ದಂತೆ ಕಾಣುತ್ತಿದೆ. ಭಾರತದಲ್ಲಿ ಕೊರೊನಾ ಹರಡಲು ತಬ್ಲಿಘಿಗಳಿಂದ ವ್ಯವಸ್ಥಿತವಾಗಿ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ‌ ನಡೆಯಬೇಕು ಎಂದು ಅವರು ಹೇಳಿದರು.
error: Content is protected !!