ಜೂನ್ 4ರ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ

ಉಡುಪಿ, ಮೇ 28:  ಭಾರತೀಯ ಹವಾಮಾನ ಇಲಾಖೆಯಿಂದ ಮೇ 29  ರಂದು ಅರೇಬಿಯನ್ ಸಮುದ್ರದ ಪಶ್ಚಿಮ ಮತ್ತು ನೈಋತ್ಯ ಕೇಂದ್ರ ಭಾಗದ ಸುತ್ತಮುತ್ತ ಹಾಗೂ ಮೇ 31 ರಂದು ಅರೇಬಿಯನ್ ಸಮುದ್ರದ ಆಗ್ನೇಯ ಭಾಗದ ಸುತ್ತಮುತ್ತ ನಿಮ್ನ ಒತ್ತಡ ಉಂಟಾಗುವ ಸಂಭವವಿರುವುದಾಗಿ ಮಾಹಿತಿ ಲಭಿಸಿರುತ್ತದೆ. ಆದ್ದರಿಂದ ಮೀನುಗಾರರು ಸಮುದ್ರದ ಈ ಭಾಗಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಭಾರತ ಸರಕಾರದ ಮೆಟಿಯಾರೊಲಾಜಿಕಲ್ ಡಿರ್ಪಾಟ್‌ಮೆಂಟ್ (ಮಿನಿಷ್ಟ್ರಿ ಆಫ್ ಅರ್ಥ್ ಸೈನ್ಸ್), ಹವಾಮಾನ ಕೇಂದ್ರ, ತಿರುವನಂತಪುರಂ ರವರಿಂದ ಪಡೆದ ಅಧಿಕೃತ ಮಾಹಿತಿ […]

ಉಡುಪಿ ಶ್ರೀ ಕೃಷ್ಣಮಠದಲ್ಲಿ 15 ದಿನಗಳ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

ಉಡುಪಿ: ಈಗಾಗಲೇ ರಾಜ್ಯದ ಇತರೆ ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದ್ದರೂ, ಉಡುಪಿ ಶ್ರೀ ಕೃಷ್ಣಮಠದಲ್ಲಿ 10-15 ದಿನಗಳ ನಂತರ ಕೊರೊನಾ ಪರಿಣಾಮ ಗಮನಿಸಿ, ಇತರ ಮಠಾಧೀಶರ ಸಲಹೆ-ಸೂಚನೆಗಳನ್ನು ಅನುಸರಿಸಿ ಮುಕ್ತವಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಶ್ರೀ ಕೃಷ್ಣಭಕ್ತರಿಗೆ ಹೊರಗಿನಿಂದಲೇ ದರ್ಶನ ವ್ಯವಸ್ಥೆ: ಕೊರೊನಾ ಸೋಂಕು ಹಿನ್ನಲೆ ದೇಶಾದ್ಯಂತ ಲಾಕ್ ಡೌನ್ ಜಾರಿಗೊಲಿಸಿದ್ದು, ಭಕ್ತರಿಗೆ ಮಠದ ಒಳಗೆ ಪ್ರವೇಶ […]

ದ.ಕ. ಜಿಲ್ಲೆ: 24 ಮಂದಿಗೆ ಕೊರೊನಾ ಪಾಸಿಟಿವ್

ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟವಾಗಿದ್ದು, ಒಟ್ಟು 24 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಂಜೆ ಬುಲೆಟಿನ್ ನಲ್ಲಿ ಒಟ್ಟು 18 ಜನರಿಗೆ ಪಾಸಿಟಿವ್, 18 ಕೂಡ ಮಹಾರಾಷ್ಟ್ರದಿಂದ ಬಂದವರಿಗೆ ಕೊರೋನಾ ಸೋಂಕು ಬಂದಿದೆ. ಒಟ್ಟು 24 ರಲ್ಲಿ 1 ಕೇರಳದಿಂದ ಮತ್ತು 23 ಮಹಾರಾಷ್ಟ್ರದಿಂದ ಬಂದವರು. ಎಲ್ಲರು ಮಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದರು.

ಉಡುಪಿ: ಮುಂಬೈನಿಂದ ಬಂದ ಇಬ್ಬರಲ್ಲಿ ಕೊರೊನಾ ಪಾಸಿಟಿವ್: ಒಂದೇ ದಿನ 29 ಸೋಂಕಿತರು ಪತ್ತೆ

ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂದು ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಬೈನಿಂದ ಬಂದ ಇಬ್ಬರು ಪುರುಷರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಜಿಲ್ಲೆಯಲ್ಲಿ ಇಂದು 29 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ: ಸಚಿವ ಕೋಟ ಸಭೆ

ಬೆಂಗಳೂರು: ರಾಜ್ಯದಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿ ಬೆಳೆಯಲು ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ ಮತ್ತು ಜಲಕೃಷಿಯ ಅಭಿವೃದ್ಧಿಯ ಕುರಿತು ನೀಲನಕ್ಷೆ ತಯಾರಿಸಲು ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ವಿಕಾಸಸೌಧದಲ್ಲಿ ಪರಿಣಿತರ ಸಭೆ ನಡೆಸಿದರು. ಮೀನುಗಾರರ ಕಲ್ಯಾಣಕ್ಕಾಗಿ 1957 ರಲ್ಲಿ ಸ್ಥಾಪನೆಯಾದ ಮೀನುಗಾರಿಕೆ ಇಲಾಖೆ 1993ರಲ್ಲಿ ತಂದ ಪೂರಕ ಕಾಯ್ದೆ, 2003ರಲ್ಲಿ ತಂದಿರುವ ತಿದ್ದುಪಡಿಗಳು ಸಂಬಂಧಿಸಿದಂತೆ ಸೂಕ್ತ ನಿಯಮಗಳು ರೂಪಿಸಲಾಗದಿರುವ ಕುರಿತು ಸುದೀರ್ಘ ಚರ್ಚೆ […]