ಬೈಂದೂರು: ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ

ಕುಂದಾಪುರ: ಹೊಟೇಲ್ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಇನ್ನೊಂದು ಯುವಕರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ಸಂಜೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಜಂಕ್ಷನ್ ಬಳಿ ನಡೆದಿದೆ. ಬೈಂದೂರು ಯಡ್ತರೆ ಬಾಳೆಹಿತ್ಲು ನಿವಾಸಿ ಬಾಬು ದೇವಾಡಿಗರ ಪುತ್ರ ದಿಲೀಪ್ ಕುಮಾರ್ (24) ಗಂಭೀರ ಗಾಯಗಳೊಂದಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಮೇ.6  ಸಂಜೆ ದಿಲೀಪ್ ಕುಮಾರ್ ಹಾಗೂ ಆತನ ತಂದೆ ಹೋಟೆಲ್ […]

ಕಂಬಳ ಕೋಣಕೆ ಇವರು ತಯಾರಿಸೋ ಅಲಂಕಾರಿಕ ಹಗ್ಗಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳಿಗೆ ಅಲಂಕಾರಿಕವಾಗಿ ಹಗ್ಗಗಳನ್ನು ಹೆಣೆಯುತ್ತಾರೆ. ಕಂಬಳ ಕೋಣಗಳ ಜೋಡಿಯನ್ನು ಅಲಂಕರಿಸಲು  ಈ ಬಣ್ಣದ ಹಗ್ಗಗಳೇ ಆಧಾರ. ಈ ಚಂದದ  ಹಗ್ಗ ನೇಯುವ ಕಲೆಯು ಅನೇಕರಿಗೆ ತಿಳಿದಿಲ್ಲ . ನೆತ್ತಿಯ ಮೇಲೆ ಕೋಡಿಗೆ ಕಟ್ಟಿದ ಹಗ್ಗ, ಗೊಂಡೆ, ಬೆಳ್ಳಿ ಪದಕದೊಂದಿಗೆ […]

ಕರೊನಾ ಸೋಂಕಿತ ರೋಗಿಗಳಿಗೆ ಜೀವ ರಕ್ಷಕ ಸಾಧನ: ಮಂಗಳೂರಲ್ಲಿ ಹೊಸ ಪ್ರಯೋಗ

ಮಂಗಳೂರು: ಗಂಭೀರ ಸ್ಥಿತಿಯಲ್ಲಿರುವ ಕರೊನಾ ಸೋಂಕಿತ ರೋಗಿಗಳಿಗೆ ಜೀವ ರಕ್ಷಕ ಸಾಧನವೊಂದು ಮಂಗಳೂರಿನಲ್ಲಿ ತಯಾರಾಗಿದೆ. ನಗರದ ಮಂಗಳಾ ಹಾಸ್ಪಿಟಲ್‌ನ ಮೆಡಿಕಲ್ ಡೈರೆಕ್ಟರ್ ಡಾ. ಗಣಪತಿ ಅವರ ತಂಡ ಆಕ್ಸಿಜನ ಬಬ್ಬಲ್ ಹೆಲ್ಮೆಟ್‌ನ್ನು ರೆಡಿ ಮಾಡಿದ್ದಾರೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾದ ರೋಗಿಗಳಿಗೆ ಈ ಸಾಧನ ಬಹಳಷ್ಟು ಉಪಯೋಗಕಾರಿಯಾಗಲಿದೆ. ಕರೊನಾ ಸೋಂಕಿನಿಂದ ರೋಗಿಯ ಆರೋಗ್ಯ ಸ್ಥಿತಿ ಗಂಭೀರ ಆಗಿ ಉಸಿರಾಟ ಸಮಸ್ಯೆ ಎದುರಾದಾಗ ಕೃತಕ ಉಸಿರಾಟದ ವ್ಯವಸ್ಧೆ ಮಾಡಬೇಕಾಗುತ್ತದೆ. ಈ ಸಂದರ್ಭ ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ವೆಂಟಿಲೇಟರ್ […]

ಈ ದಕ್ಷ, ಅರಣ್ಯಾಧಿಕಾರಿಗೆ ನೀವೂ ಬೆಂಬಲ ನೀಡಿ: ಪ್ರಾಮಾಣಿಕ ಅಧಿಕಾರಿ ಮುನಿರಾಜು ವರ್ಗಾವಣೆಗೆ ತಡೆ ಕೋರಿ ಅಭಿಯಾನ ಶುರು

ಮಂಗಳೂರು/ಉಡುಪಿ: ಹೆಬ್ರಿಯ ದಕ್ಷ ವಲಯ ಅರಣ್ಯಾಧಿಕಾರಿ ಮುನಿರಾಜು ಅವರ ವರ್ಗಾವಣೆ ತಡೆಕೋರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಮುನಿರಾಜ್, ದಕ್ಷ ಅರಣ್ಯಾಧಿಕಾರಿಯಾಗಿ ಪರಿಸರಕ್ಕೆ ಕಂಟಕವಾಗಿರುವ ಪ್ರಭಾವಿ ರಾಜಕಾರಣಿಗಳನ್ನು ಯಾವ ಮುಲಾಜು ಇಲ್ಲದೇ ಮಟ್ಟ ಹಾಕಿದ್ದರು. ತಾಲೂಕಿನಲ್ಲಿ ಪ್ರಾಮಾಣಿಕವಾಗಿ, ಪರಿಸರದ ಪರ ಹೋರಾಡಿದ ಈ ಯುವ ಅಧಿಕಾರಿಗೀಗ ಉಡುಪಿ ಜಿಲ್ಲೆಯ ಶಾಸಕರುಗಳು ಸೇರಿ ವರ್ಗಾವಣೆ ಮಾಡಿಸಿದ್ದಾರೆ ಎನ್ನುವುದು ವಿವಿಧ ಮೂಲಗಳಿಂದ ಸಾಬೀತಾಗಿದೆ. ಈ ಅಧಿಕಾರಿಯ  ಕಾರ್ಯ ದಕ್ಷತೆ ಮತ್ತು ಕರ್ತವ್ಯ […]

ಕರಾವಳಿ ಮೀನುಗಾರರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿ: ಯಶ್‍ಪಾಲ್ ಸುವರ್ಣ ಆಗ್ರಹ

ಉಡುಪಿ: ಕರಾವಳಿ ಕರ್ನಾಟದ 360 ಕಿಲೋ ಮೀಟರ್ ವ್ಯಾಪ್ತಿಯ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಭಾಗದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿರುವ ಮೀನುಗಾರಿಕೆ ಇದೀಗ ಕೊರೋನ ಮಹಾಮಾರಿಯಿಂದ ಉಂಟಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡು ತೀರ ಸಂಕಷ್ಟಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರಕಾರ ಮೀನುಗಾರರಿಗೆ ಗರಿಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ  ಯಶ್‍ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಮೀನುಗಾರಿಕಾ ಋತುವಿನ […]