ಹೊರ ರಾಜ್ಯದಿಂದ ಬಂದಲ್ಲಿ ಕಡ್ಡಾಯ ಸರ್ಕಾರಿ ಕ್ವಾರಂಟೈನ್: ಜಿಲ್ಲಾಧಿಕಾರಿ
ಉಡುಪಿ, ಮೇ 2: ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ಗೆ ಒಳಪಡುವ ಷರತ್ತಿನೊಂದಿಗೆ, ಉಡುಪಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಗೆ ಅಂತರ್ ಜಿಲ್ಲೆ, ರಾಜ್ಯದಿಂದ ಜನರನ್ನು ಕರೆತರುವ ಮತ್ತು ಕಳುಹಿಸಿ ಕೊಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಾಗರೀಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದು, ಹೊರರಾಜ್ಯದಿಂದ ಬರುವವರು ಮತ್ತು ಹೊರ ಜಿಲ್ಲೆಯಿಂದ ಬರುವವರು ಕಡ್ಡಾಯವಾಗಿ […]
ಕೂಲಿ ಕಾರ್ಮಿಕರು ಮತ್ತು ಪ್ರವಾಸಿಗರಿಗೆ ಮಾತ್ರ ಬೇರೆ ರಾಜ್ಯಗಳಿಗೆ ತೆರಳಲು ಅವಕಾಶ: ಉಡುಪಿ ಜಿಲ್ಲಾಧಿಕಾರಿ
ಉಡುಪಿ: ರಾಜ್ಯ ಸರ್ಕಾರ ಕೂಲಿ ಕಾರ್ಮಿಕರು ಹಾಗೂ ಪ್ರವಾಸಿಗರಿಗೆ ಮಾತ್ರ ಅವರವರ ರಾಜ್ಯಗಳಿಗೆ ತೆರಳಲು ಅವಕಾಶ ಕಲಿಸಿದ್ದು, ಇನ್ಯಾರಿಗೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಅವಕಾಶವಿಲ್ಲ. ಹಾಗಾಗಿ ಯಾರು ಪಾಸ್ ಗಾಗಿ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಬರಬಾರದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆ ಇರುವವರಿಗೆ ಬೇರೆ ರಾಜ್ಯಗಳಿಗೆ ತೆರಳಲು ತಾಲ್ಲೂಕು ಕಚೇರಿ ಮೂಲಕ ಮಂಜೂರು ಮಾಡಲಾಗುವ ಪಾಸ್ ಪಡೆಯಬೇಕು. ಲಾಕ್ ಡೌನ್ ಮೇ 17 ರ ವರೆಗೆ ಮುಂದುವರಿಯುವುದರಿಂದ ಯಾರಿಗೂ […]
ಈ ಅಜ್ಜಿಯ ಕೈಯಲ್ಲರಳುವ ಮಣ್ಣಿನ ಪಾತ್ರೆ ನೋಡಿದ್ರೆ ಬೆರಗಾಗ್ತೀರಿ : ಕಡಾರಿಯ ಮೀನಜ್ಜಿಯ ಮಣ್ಣಿನ ಪಾತ್ರೆಗಳನ್ನೊಮ್ಮೆ ಕೊಂಡು ನೋಡಿ
ಕುಂಬಾರಿಕೆಯ ಕಾಯಕ ಧನಿಕನಾಗಿಸುವ ಬದಲು ಧರಿದ್ರನಾಗಿಸುವುದೇ ಹೆಚ್ಚು. ಇಷ್ಟಕ್ಕೂ ನಂಬಿದ ಕುಲ ಕಸುಬು ಬಿಡಲಾಗದೇ ತಂತ್ರಜ್ಞಾನಯುಗದಲ್ಲೂ ಮಣ್ಣಿಗೆ ಮಣ್ಣಿನದೇ ಗುಣಗಳಿವೆ ಎಂದು ಮಣ್ಣಿನ ಜೊತೆಗಿನ ಹೋರಾಟ ಜಾರಿಯಲ್ಲಿಟ್ಟುಕೊಂಡಿರುವುದು ಕೆಲವೇ ಕೆಲವು ಜನರು. ಅದರಲ್ಲೂ 70 ರ ಇಳಿವಯಸ್ಸಿನ ವೃದ್ಧೆಯಲ್ಲಿ ಇಂತಹ ಛಲ ಇದೆ ಎಂದರೆ ನಾವು ಆಭಿಮಾನದ ಸೆಲ್ಯೂಟ್ ಕೊಡಲೇಬೇಕು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ-ರಾಷ್ಟ್ರೀಯ ಹೆದ್ದಾರಿಯ ಸುಮ್ಮ ಕಡಾರಿ ಎಂಬಲ್ಲಿನ ವಯೋವೃದ್ಧೆ ಮೀನಾ ಕುಲಾಲ್(70) ಅವರು ಬಡತನದ ಬೇಗೆಯ ನಡುವೆ ಬಾಲ್ಯದಿಂದಲೇ ಈ ಕಸುಬು […]