ಕುಂದಾಪುರ: ಸಾಮಾಜಿಕ ಅಂತರಕ್ಕೆ ಡೋಂಟ್‌ಕೇರ್: ಕೊನೆಗೂ ತಾತ್ಕಾಲಿಕ ಮಾರುಕಟ್ಟೆ ಸುವ್ಯವಸ್ಥೆಗೆ

ಕುಂದಾಪುರ: ಇಲ್ಲಿನ ಸಂಗಮ್ ಜಂಕ್ಷನ್‌ನ ರಾಷ್ಟೀಯ ಹೆದ್ದಾರಿ ಸಮೀಪದಲ್ಲೇ ಕಳೆದ ಕೆಲ ದಿನಗಳಿಂದ ಕಾರ್ಯಾಚರಿಸುತ್ತಿರುವ ತಾತ್ಕಾಲಿಕ ಮೀನು ಮಾರುಕಟ್ಟೆ ಸುವ್ಯವಸ್ಥೆಗೆ ತರುವಲ್ಲಿ ಕೊನೆಗೂ ತಾಲೂಕು ಆಡಳಿತ ಯಶಸ್ವಿಯಾಗಿದೆ. ಲಾಕಡೌನ್ ಆದೇಶ ಜಾರಿಯಾದ ಬೆನ್ನಲ್ಲೇ ಕುಂದಾಪುರದ ಮೀನು ಮಾರ್ಕೆಟ್‌ನಲ್ಲಿ ಮೀನು ಮಾರಾಟಕ್ಕೆ ನಿರ್ಬಂದ ಹೇರಲಾಗಿತ್ತು. ಆದರೆ ಸಮಾಜಿಕ ಅಂತರ ಕಾಯ್ದುಕೊಂಡು ಬೇರೆಡೆ ಮೀನು ವ್ಯಾಪಾರ ನಡೆಸಲು ಅನುಮತಿ ನೀಡಿದ್ದರಿಂದ ಮೀನು ವ್ಯಾಪಾರಸ್ಥರು ಸಂಗಮ್ ಸಮೀಪದಲ್ಲಿ ಮೀನು ವ್ಯಾಪಾರಕ್ಕೆ ಮುಂದಾಗಿದ್ದರು. ಮೀನು ಮಾರಾಟ ಸಂದರ್ಭ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ನಿರ್ದೇಶನಗಳಿಲ್ಲದೆ ಹೆದ್ದಾರಿ […]

ಧಾರ್ಮಿಕ ದತ್ತಿ ಇಲಾಖೆಯಿಂದ ಕಾರ್ಕಳ ವಿಧಾನ ಸಭಾಕ್ಷೇತ್ರಕ್ಕೆ 1200 ಆಹಾರ ಸಾಮಗ್ರಿ ಕಿಟ್ ವಿತರಣೆ

ಉಡುಪಿ: ಕೋವಿಡ್ 19 ನಿಂದ ಸಂಕಷ್ಟಕ್ಕೆ ಒಳಗಾದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಸಂತ್ರಸ್ತರಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 1200 ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಇಂದು ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳ ಮತ್ತು ಹೆಬ್ರಿ ತಾಲ್ಲೂಕಿನ ತಹಶಿಲ್ದಾರರಿಗೆ ಕಿಟ್ ಗಳನ್ನು ಹಸ್ತಾಂತರಿಸಿದರು. ದೇವಳದ ಮುಕ್ತೇಸರರಾದ ಧನಂಜಯ ಶೆಟ್ಟ ಇದ್ದರು.

ಪಾದರಾಯನಪುರ ಗಲಭೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ಬೆಂಗಳೂರಿನ ಪಾದರಾಯನಪುರ ದುರ್ಘಟನೆ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನು  ನಾಶಮಾಡಿದೆ. ಮತಾಂಧ ಗಲಭೆಕೋರರು ಕೊರೊನ ವೈರಸ್ಸಿಗಿಂತಲೂ ಅಪಾಯಕಾರಿಗಳಾಗಿದ್ದು, ರಾಜ್ಯ ಸರಕಾರ  ಓಲೈಕೆ ರಾಜಕಾರಣವನ್ನು ಬಿಟ್ಟು  ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮುಖಂಡ ಯಶ್ ಪಾಲ್ ಸುವರ್ಣ  ಒತ್ತಾಯಿಸಿದ್ದಾರೆ. ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳ ಮತ್ತು ವೈದ್ಯಕೀಯ ಸಿಬ್ಬಂದಿಗಳ  ಮೇಲೆ ಮೂಲಭೂತವಾದಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಖಾಕಿ ತೊಟ್ಟ ಪೊಲೀಸರಿಗೆ ತಲವಾರು ತೋರಿಸಿ ಸರಕಾರಿ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿದ್ದಾರೆ. ಗೃಹಇಲಾಖೆಯ ಈ […]

ಮಹಾನಗರ ಮುಂಬೈನಲ್ಲಿ 6 ಮಂದಿ ಪತ್ರಕರ್ತರಿಗೆ ಕೊರೊನ: ಪತ್ರಕರ್ತರೇ ಜಾಗೃತರಾಗೋಣ

ಮಂಗಳೂರು: ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕಿದೆ. ಪತ್ರಕರ್ತರು ಕೊರೊನಾ ಜಾಗೃತಿ ಮೂಡಿಸಲು ಮತ್ತು ಸುದ್ದಿಯ ಧಾವಂತದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಇದರ ಪರಿಣಾಮ ಜನರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿರುವುದು ಒಪ್ಪತಕ್ಕಂತಹ ಸತ್ಯ. ಅದೇ ರೀತಿ ಪತ್ರಕರ್ತರು ತಮ್ಮ ಬಗ್ಗೆಯೂ ಎಚ್ಚರವಹಿಸಬೇಕಾಗಿದೆ. ಮುಂಬಯಿಯಲ್ಲಿ 6 ಮಂದಿ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಧ್ಯಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು, ಕಾಸರಗೋಡಿನಲ್ಲೂ ಪತ್ರಕರ್ತರು ತೀವ್ರ […]

ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಆಹಾರ ಸಾಮಗ್ರಿ ವಿತರಣೆ

ಕಾರ್ಕಳ: ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಬಿ.ಪಿ.ಲ್., ಎ.ಪಿ.ಲ್. ರಹಿತ ಅರ್ಹ 150 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು, ಕುಕ್ಕುಂದೂರಿನ, ಪೂರ್ಣಿಮಾ ಸಿಲ್ಕ್ಸ್ ಹಾಗೂ ಇತರ ದಾನಿಗಳ ಸಹಕಾರದಿಂದ ಪೂರ್ಣಿಮಾ ಸಿಲ್ಕ್ಸ್ ಮಾಲಿಕರಾದ ಕೆ. ರವಿಪ್ರಕಾಶ್ ಪ್ರಭು ಅವರು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವಿ. ಸುನೀಲ್ ಕುಮಾರ್‌, ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ರಮೆಶ್‌, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ರಾವ್, ಉಪಾಧಕ್ಷ ರಾಜೇಶ್ ರಾವ್, ಹಾಗೂ ಪಂಚಾಯತ್ ಸದಸ್ಯರಾದ, ಅಂಥೊನಿ ಡಿ’ಸೋಜ, ಕರುಣಾಕರ ಪೂಜಾರಿ, ರವೀಂದ್ರ ಶೆಟ್ಟಿ, ರವೀ […]