Home Trending ಪಾದರಾಯನಪುರ ಗಲಭೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಯಶ್ ಪಾಲ್ ಸುವರ್ಣ ಆಗ್ರಹ

ಪಾದರಾಯನಪುರ ಗಲಭೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ಬೆಂಗಳೂರಿನ ಪಾದರಾಯನಪುರ ದುರ್ಘಟನೆ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನು  ನಾಶಮಾಡಿದೆ. ಮತಾಂಧ ಗಲಭೆಕೋರರು ಕೊರೊನ ವೈರಸ್ಸಿಗಿಂತಲೂ ಅಪಾಯಕಾರಿಗಳಾಗಿದ್ದು, ರಾಜ್ಯ ಸರಕಾರ  ಓಲೈಕೆ ರಾಜಕಾರಣವನ್ನು ಬಿಟ್ಟು  ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮುಖಂಡ ಯಶ್ ಪಾಲ್ ಸುವರ್ಣ  ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳ ಮತ್ತು ವೈದ್ಯಕೀಯ ಸಿಬ್ಬಂದಿಗಳ  ಮೇಲೆ ಮೂಲಭೂತವಾದಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಖಾಕಿ ತೊಟ್ಟ ಪೊಲೀಸರಿಗೆ ತಲವಾರು ತೋರಿಸಿ ಸರಕಾರಿ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿದ್ದಾರೆ. ಗೃಹಇಲಾಖೆಯ ಈ ವೈಫಲ್ಯ ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ಕರೋನಾ ವೈರಸ್ ವಿರುದ್ಧ ರಾಜ್ಯವೇ ಸಂಘರ್ಷದಲ್ಲಿ ತೊಡಗಿರುವಾಗ ಈ ಮೂಲಭೂತವಾದಿಗಳು ವ್ಯವಸ್ಥೆಯ ಜೊತೆ ಕೈಜೋಡಿಸುವುದನ್ನು ಬಿಟ್ಟು ಪೊಲೀಸರ ಮೇಲೆಯೇ ಮಾರಕಾಸ್ತ್ರಗಳನ್ನು ಪ್ರಯೋಗಿಸುವ ಮೂಲಕ  ಸರಕಾರಕ್ಕೆ ಸಡ್ಡು ಹೊಡೆಯುತ್ತಿದ್ದಾರೆ.ಇದಕ್ಕೆ ಸರಕಾರದ ಮೃದುಧೋರಣೆಯೇ ಮುಖ್ಯ ಕಾರಣ. ದುಷ್ಕರ್ಮಿ ಗಳ  ಜೊತೆ ಸರಕಾರ ದುರ್ಬಲ ರೀತಿಯಲ್ಲಿ ವ್ಯವಹರಿಸುವುದನ್ನು ಬಿಟ್ಟು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲಿ ಕಾರ್ಯಾಚರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾದರಾಯನ ಪುರಕ್ಕೆ  ಜಮೀರ್ ಅಹಮದ್ ಶಾಸಕನಾಗಿದ್ದಾನೆ. ಈತನ ಕುಮ್ಮಕ್ಕಿನಿಂದಲೇ ಜಿಹಾದಿ ಮಾನಸಿಕತೆಯ ಶಕ್ತಿಗಳು ವಿಜೃಂಭಿಸುತ್ತಿವೆ. ಈ ಪ್ರದೇಶದಲ್ಲಿ ನಡೆದ ಸಮಾವೇಶವೊಂದರಲ್ಲಿ ಪಾಕಿಸ್ತಾನ ಪರ ಘೋಷಣೆಗಳು ಮೊಳಗಿದವು ಜಮೀರ್ ಅಹ್ಮದ್ ನಂತಹ  ಮತಾಂದ ರಾಜಕಾರಣಿಗಳ ಜೊತೆ ಮುಖ್ಯಮಂತ್ರಿಗಳು ಮಾತುಕತೆ ನಡೆಸುವುದನ್ನು ಬಿಟ್ಟು ಗಲಭೆಕೋರರಿಗೆ ಬೆಂಬಲ ನೀಡಿದ ದೂರಿನಡಿಯಲ್ಲಿ ಆತನನ್ನು ಬಂಧಿಸಬೇಕು. ಈ ದುಷ್ಕರ್ಮಿಗಳನ್ನು ಹೆಡೆಮುರಿಕಟ್ಟಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು ಗಲಭೆಕೋರರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವುದರ ಜೊತೆಗೆ ಅವರ ವಿರುದ್ಧ ರೌಡಿಶೀಟ್  ತೆರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
error: Content is protected !!