udupixpress
Home Trending ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಆಹಾರ ಸಾಮಗ್ರಿ ವಿತರಣೆ

ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಆಹಾರ ಸಾಮಗ್ರಿ ವಿತರಣೆ

ಕಾರ್ಕಳ: ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಬಿ.ಪಿ.ಲ್., ಎ.ಪಿ.ಲ್. ರಹಿತ ಅರ್ಹ 150 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು, ಕುಕ್ಕುಂದೂರಿನ, ಪೂರ್ಣಿಮಾ ಸಿಲ್ಕ್ಸ್ ಹಾಗೂ ಇತರ ದಾನಿಗಳ ಸಹಕಾರದಿಂದ ಪೂರ್ಣಿಮಾ ಸಿಲ್ಕ್ಸ್ ಮಾಲಿಕರಾದ ಕೆ. ರವಿಪ್ರಕಾಶ್ ಪ್ರಭು ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ವಿ. ಸುನೀಲ್ ಕುಮಾರ್‌, ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ರಮೆಶ್‌, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ರಾವ್, ಉಪಾಧಕ್ಷ ರಾಜೇಶ್ ರಾವ್, ಹಾಗೂ ಪಂಚಾಯತ್ ಸದಸ್ಯರಾದ, ಅಂಥೊನಿ ಡಿ’ಸೋಜ, ಕರುಣಾಕರ ಪೂಜಾರಿ, ರವೀಂದ್ರ ಶೆಟ್ಟಿ, ರವೀ ಶೆಟ್ಟಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!