ಲಾಕ್ ಡೌನ್ ನಿಯಮ ಉಲ್ಲಂಘಿಸಿ ವಿವಾಹ: 11 ಮಂದಿ ವಿರುದ್ದ ಪ್ರಕರಣ ದಾಖಲು

ಉಡುಪಿ: ಲೌಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಯಾವುದೇ ಅನುಮತಿ ಪಡೆಯದೆ ಇಂದು ಅಲೆವೂರಿನ ಗ್ರಾಮದ ಮಂಚಿ ದುಗ್ಲಿಪದವು ಎಂಬಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಂಬಂಧಿಸಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಚಿ ದುಗ್ಲಿಪದವಿನ ಯುವಕ ಹಾಗೂ ಮಂಗಳೂರು ಬೋರುಗುಡ್ಡೆಯ ಯುವತಿಗೆ ಲೌಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಮದುವೆ ನಡೆಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿಯಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ , ಕಂದಾಯ ನಿರೀಕ್ಷಕ ಶ್ರೀನಿವಾಸ್ ಜತೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ತಿಳಿದುಬಂದಿದೆ. ವಧುವನ್ನು […]

ಚಿಣ್ಣರ ಮೊಗದಲ್ಲಿ ನಗು ಉಕ್ಕಿಸಿದ “ಟಾಮ್ ಅಂಡ್ ಜೆರ್ರಿ” ನಿರ್ದೇಶಕ ಜೆನಿ ಡಿಚ್ ಇನ್ನಿಲ್ಲ

ಚಿಣ್ಣರ ಮೊಗದಲ್ಲಿ ನಗು ಉಕ್ಕಿಸಿದ “ಟಾಮ್ ಅಂಡ್ ಜೆರ್ರಿ” ನಿರ್ದೇಶಕ ಜೆನಿ ಡಿಚ್ ಅಮೇರಿಕಾದಲ್ಲಿ ನಿಧನರಾಗಿದ್ದಾರೆ. ಇವರು 1962 ರಿಂದ ನಿರ್ಮಿಸಿದ್ದ ಕಾಮಿಕ್ಸ್ ಮಕ್ಕಳ ಧಾರವಾಹಿಯನ್ನು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ಮಂದಿ ಮುಗಿಬಿದ್ದು ನೋಡುತ್ತಿದ್ದರು. ಈಗಲೂ ಟಾಮ್ ಅಂಡ್ ಜೆರ್ರಿ ನೋಡುವವರಿಗೂ ಏನೂ ಕಮ್ಮಿ ಇಲ್ಲ. ಈ ಧಾರಾವಾಹಿ  ಜೆನಿ ಡಿಚ್ ಅವರ ಕನಸಿನ ಕೂಸಾಗಿತ್ತು. ಜಗತ್ತಿನಲ್ಲೇ ಈ ಧಾರಾವಾಹಿ ಮೆಚ್ಚುಗೆ ಗಳಿಸಿತ್ತು.  ಇದೀಗ ಆ ಕನಸು ಹುಟ್ಟಿಸಿದ್ದ ಡಿಚ್ ಅವರು ನಿಧನರಾಗಿದ್ದಾರೆ.

ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆಯಾಗಿದೆ. ಎ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿ ನಿವಾಸಿಯ ಪತ್ನಿಗೆ ಸೋಂಕು ಇರುವುದು ಕಂಡುಬಂದಿದೆ. ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾ.21 ರಂದು ದೆಹಲಿಯಿಂದ ಬಂದಿದ್ದ ಉಪ್ಪಿನಂಗಡಿ ನಿವಾಸಿ ಎ.1ರಂದು ಪತ್ತೆ ಮಾಡಿ ಜಿಲ್ಲಾಡಳಿತದಿಂದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಮಧ್ಯೆ ‌ಪತ್ನಿ ಮತ್ತು ಮನೆಯವರ ಜೊತೆ ಸಂಪರ್ಕದಲ್ಲಿದ್ದರು. ದ.ಕ ಜಿಲ್ಲೆಯಲ್ಲಿ ಒಟ್ಟು 15 ಮಂದಿಗೆ ಕೊರೊನಾ ತಗುಲಿದ್ದು, ಇದರಲ್ಲಿ 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. […]

ಬಂಟ್ವಾಳದ ಮಹಿಳೆ ಸಾವು ಪ್ರಕರಣ: ಅತ್ತೆಯ ಸ್ಥಿತಿ ಗಂಭೀರ ಐಸಿಯುನಲ್ಲಿ ‌ಚಿಕಿತ್ಸೆ: ಬಂಟ್ವಾಳದಲ್ಲಿ ತೀವ್ರ ನಿಗಾ

ಮಂಗಳೂರು: ಮಂಗಳೂರಿನಲ್ಲಿ ಕೊರೊನ ಸೋಂಕಿನಿಂದ ಸಾವು ವಿಚಾರ ಮೃತರ ಅತ್ತೆಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪತಿ, ಮಗ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಮೂವರ ಥ್ರೋಟ್ ಸ್ವ್ಕಾಬ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮೃತ ಮಹಿಳೆಯ ಮಗ ಮಾ.16 ರಂದು ದುಬೈನಿಂದ ಬಂದಿದ್ದ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ತೀವ್ರ ನಿಗಾವಹಿದಿದ್ದು, ಬಂಟ್ವಾಳ ಕೆಳಗಿನ ಪೇಟೆ ಸೀಲ್ ಡೌನ್ ಮಾಡಲಾಗಿದೆ. ಯಾರು ಮನೆಯಿಂದ ಹೊರಬರಬೇಡಿ ಎಂದು ಬಂಟ್ವಾಳ ನಗರ ಪೊಲೀಸರಿಂದ ಜೀಪ್ ನಲ್ಲಿ […]

ಕೊರೊನಾಗೆ ದ.ಕ. ಜಿಲ್ಲೆಯಲ್ಲಿ ಮೊದಲ ಬಲಿ: ಬಂಟ್ವಾಳದ ಮಹಿಳೆ ಸಾವು

ಮಂಗಳೂರು: ಕೊರೋನ ಮಾಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಬಂಟ್ವಾಳ ಮೂಲದ ಮಹಿಳೆ ಇಂದು ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ 45 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ನಿನ್ನೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಥ್ರೋಟ್ ಸ್ಕ್ವಾಬ್ ನ್ನು ನಿನ್ನೆಯೇ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬೆಳಗ್ಗೆ ತೀವ್ರ ಉಸಿರಾಟದ ತೊಂದರೆಯಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಸ್ಯಾಂಪಲ್ ಟೆಸ್ಟ್ ವರದಿ ಬರುವ ಮೊದಲೇ ಸಾವನ್ನಪ್ಪಿದ್ದು, […]