udupixpress
Home Trending ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆ

ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆಯಾಗಿದೆ. ಎ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿ ನಿವಾಸಿಯ ಪತ್ನಿಗೆ ಸೋಂಕು ಇರುವುದು ಕಂಡುಬಂದಿದೆ.
ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾ.21 ರಂದು ದೆಹಲಿಯಿಂದ ಬಂದಿದ್ದ ಉಪ್ಪಿನಂಗಡಿ ನಿವಾಸಿ ಎ.1ರಂದು ಪತ್ತೆ ಮಾಡಿ ಜಿಲ್ಲಾಡಳಿತದಿಂದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಈ ಮಧ್ಯೆ ‌ಪತ್ನಿ ಮತ್ತು ಮನೆಯವರ ಜೊತೆ ಸಂಪರ್ಕದಲ್ಲಿದ್ದರು.
ದ.ಕ ಜಿಲ್ಲೆಯಲ್ಲಿ ಒಟ್ಟು 15 ಮಂದಿಗೆ ಕೊರೊನಾ ತಗುಲಿದ್ದು, ಇದರಲ್ಲಿ 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಇಂದು ಸಾವನ್ನಪ್ಪಿದ್ದು,  ಸದ್ಯ ಇಬ್ಬರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
error: Content is protected !!