ದೋಣಿ ಮೂಲಕ 7 ಮಂದಿ ಕೇರಳದಿಂದ ಅಕ್ರಮ ಪ್ರವೇಶ: ಎಲ್ಲರನ್ನು ವಶಕ್ಕೆ ಪಡೆದು ಆಸ್ಪತ್ರೆ ದಾಖಲಿಸಿದ ಪೊಲೀಸರು
ಮಂಗಳೂರು: ದೋಣಿ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರು ಪ್ರವೇಶ ಮಾಡಿದ 7 ಮಂದಿಯನ್ನು ಮಂಗಳೂರು ಬಜ್ಪೆ ಪೊಲೀಸರು ವಶಕ್ಕೆ ಪಡೆದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೊನಾ ಆತಂಕದಿಂದ ದಕ್ಷಿಣ ಜಿಲ್ಲೆ ಹಾಗೂ ಕೇರಳ ನಡುವೆ ತಲಪಾಡಿ ಗಡಿ ಬಂದ್ ಆಗಿದ್ದು, ಕೇವಲ ಆಂಬ್ಯುಲೆನ್ಸ್ ಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಈ ನಡುವೆ ಮಂಗಳೂರಿನ ಹೊರ ವಲಯದ ಅಡ್ಡೂರಿನ ಯಾಕೂಬ್ ಮತ್ತು ಆತನ ಕುಟುಂಬದ ೬ ಮಂದಿ ದೋಣಿ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿನ […]
ಬೆಳ್ತಂಗಡಿಯ ಕೊರೊನಾ ಸೋಂಕಿತ ಗುಣಮುಖ: 7 ಮಂದಿಗೆ ಚಿಕಿತ್ಸೆ ಮುಂದುವರಿಕೆ
ಮಂಗಳೂರು; ದ.ಕ ಜಿಲ್ಲೆಯಲ್ಲಿ ಓರ್ವ ಕೊರೊನಾ ಪಾಸಿಟಿವ್ ಬಂದಿದ್ದ ವ್ಯಕ್ತಿ ಗುಣಮುಖರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21 ವರ್ಷದ ಯುವಕ ಗುಣಮುಖವಾದವರು. ಈ ಯುವಕ ಮಾ.21 ರಂದು ದುಬೈ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಕೆಎಸ್ ಆರ್ ಟಿ ಸಿ ಬಸ್ ಮೂಲಕ ಕರಾಯಕ್ಕೆ ಬಂದಿದ್ದರು. ಮಾ. 24ಕ್ಕೆ ಜ್ವರದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ, ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ […]
ಕೊರೊನ ಭಯದ ಮಧ್ಯೆ ತಮಿಳುನಾಡಿಂದ ಮಂಗಳೂರಿಗೆ ಬೈಕ್ಕಲ್ಲಿ ಬಂದ ಕುಟುಂಬ: ಸ್ಥಳೀಯರಲ್ಲಿ ಆತಂಕ
ಮಂಗಳೂರು: ಸದ್ಯ ಕೊರೊನಾ ಭೀತಿಯಿಂದ ಯಾರಾದರೂ ಹೊಸಬರು ಅಥವಾ ತಮ್ಮದೇ ಊರವರು ದೂರದ ಊರಿನಿಂದ ಬಂದ್ರೆ ಜನರಿಗೆ ಸಹಜವಾಗಿಯೇ ಹೆದರಿಕೆ ಉಂಟಾಗುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮಕ್ಕೆ ತಮಿಳುನಾಡಿನಿಂದ ಒಂದು ಕುಟುಂಬ ಬೈಕ್ ಮೂಲಕ ಬಂದಿದ್ದು, ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ. ಇಲ್ಲಿನ ಓಟಕಜೆ ಸಿ.ಆರ್.ಸಿ ಕಾಲೋನಿಗೆ ತಂದೆ, ತಾಯಿ ಮತ್ತು 2 ಮಕ್ಕಳು ತಮಿಳುನಾಡಿನ ಕೋಯಂಮುತ್ತೂರಿನಿಂದ ಕರ್ನಾಟಕಕ್ಕೆ ಬೈಕ್ ನಲ್ಲಿ ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿದ್ದು, ಆಗಮಿಸುವಾಗ ಪೊಲೀಸರು ಎಲ್ಲೂ […]
ಬೀಜಾಡಿ:ಶಾಸಕರ ದಿನಸಿ ಕಿಟ್ ವಿತರಣೆ
ಕುಂದಾಪುರ: ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದವರಿಗೆ ಕೊಡಮಾಡಿದ ೨೫ ಪಡಿತರ ಕಿಟ್ನ್ನು ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ಮಂಜುನಾಥ ಕುಂದರ್, ಬಸವ ಕುಂದರ್, ಮನೀಷ್ ಶಿರಿಯಾನ್, ಸತ್ಯ ತಿಂಗಳಾಯ, ನಾಗೇಶ್, ಪ್ರವೀಣ್, ಉದಯ ಕಾಂಚನ್, ಸಚಿನ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮ ನೆರವಿಗೆ ದೇವರಂತೆ ಬರುತ್ತಾರೆ ಕೊರೊನಾ ಸೈನಿಕರು: ಉಡುಪಿ ಜಿಲ್ಲೆಯಲ್ಲಿ ಸೇವೆ ನೀಡಲು ರೆಡಿಯಾದ್ರು ಈ ಆಪತ್ಬಾಂಧವರು!
ಬ್ರಹ್ಮಾವರದಲ್ಲಿನ ಮನೆಯಲ್ಲಿ ಇಬ್ಬರೇ ಇರುವ ವೃಧ್ದ ದಂಪತಿ, ಲಾಕ್ ಡೌನ್ ಕಾರಣ ಅಂಗಡಿಗಳು ಕ್ಲೋಸ್, ಮನೆಯಿಂದ ಹೊರ ಹೋಗುವ ಹಾಗಿಲ್ಲ, ಗಂಡನಿಗೆ ಸಕ್ಕರೆ ಕಾಯಿಲೆ ಜೊತೆಗೆ ಹೃದಯ ಸಂಬಂದಿ ಸಮಸ್ಯೆ, ದಂಪತಿಗೆ ಬ್ರೆಡ್ ಮತ್ತು ರಸ್ಕ್ ಅವಶ್ಯಕತೆಯಿದೆ, ಈ ಬಗ್ಗೆ ಸಮಸ್ಯೆ ಕೋರಿದ ದಂಪತಿಗೆ 20 ನಿಮಿಷದಲ್ಲಿ ಬ್ರೆಡ್ ಮತ್ತು ರಸ್ಕ್ ನೊಂದಿಗೆ ಅವರು ಕೋರಿದ ಇತರೆ ಅಗತ್ಯ ವಸ್ತುಗಳು ಯುವತಿಯೊಬ್ಬರಿಂದ ಪೂರೈಕೆಯಾಗುತ್ತದೆ. ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿನ ರೋಗಿಗೆ ಅಗತ್ಯ ಔಷಧಿಗಳು ತುರ್ತಾಗಿ ಬೇಕಿದೆ, ಆ ಔಷದಗಳು […]