udupixpress
Home Trending ಬೆಳ್ತಂಗಡಿಯ ಕೊರೊನಾ ಸೋಂಕಿತ ಗುಣಮುಖ: 7 ಮಂದಿಗೆ ಚಿಕಿತ್ಸೆ ಮುಂದುವರಿಕೆ

ಬೆಳ್ತಂಗಡಿಯ ಕೊರೊನಾ ಸೋಂಕಿತ ಗುಣಮುಖ: 7 ಮಂದಿಗೆ ಚಿಕಿತ್ಸೆ ಮುಂದುವರಿಕೆ

ಮಂಗಳೂರು; ದ.ಕ ಜಿಲ್ಲೆಯಲ್ಲಿ ಓರ್ವ ಕೊರೊನಾ ಪಾಸಿಟಿವ್ ಬಂದಿದ್ದ ವ್ಯಕ್ತಿ ಗುಣಮುಖರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21 ವರ್ಷದ ಯುವಕ ಗುಣಮುಖವಾದವರು. ಈ ಯುವಕ ಮಾ.21 ರಂದು ದುಬೈ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಕೆಎಸ್ ಆರ್ ಟಿ ಸಿ ಬಸ್ ಮೂಲಕ ಕರಾಯಕ್ಕೆ ಬಂದಿದ್ದರು.
ಮಾ. 24ಕ್ಕೆ ಜ್ವರದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ, ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಯುವಕನ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಎರಡು ಬಾರಿಯು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುಣಮುಖ ಎಂದು ಘೋಷಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
error: Content is protected !!