ದೋಣಿ‌ ಮೂಲಕ 7 ಮಂದಿ‌ ಕೇರಳದಿಂದ ಅಕ್ರಮ‌ ಪ್ರವೇಶ: ಎಲ್ಲರನ್ನು ವಶಕ್ಕೆ ಪಡೆದು ಆಸ್ಪತ್ರೆ ದಾಖಲಿಸಿದ ಪೊಲೀಸರು

ಮಂಗಳೂರು: ದೋಣಿ ಮೂಲಕ‌ ಅಕ್ರಮವಾಗಿ ಕೇರಳದಿಂದ ಮಂಗಳೂರು ಪ್ರವೇಶ ಮಾಡಿದ 7 ಮಂದಿಯನ್ನು ಮಂಗಳೂರು ಬಜ್ಪೆ ಪೊಲೀಸರು ವಶಕ್ಕೆ ಪಡೆದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊರೊನಾ ಆತಂಕದಿಂದ ದಕ್ಷಿಣ ಜಿಲ್ಲೆ ‌ಹಾಗೂ ಕೇರಳ ನಡುವೆ ತಲಪಾಡಿ ಗಡಿ ಬಂದ್ ಆಗಿದ್ದು, ಕೇವಲ ಆಂಬ್ಯುಲೆನ್ಸ್ ಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಈ ನಡುವೆ ಮಂಗಳೂರಿನ ಹೊರ ವಲಯದ ಅಡ್ಡೂರಿನ ಯಾಕೂಬ್ ಮತ್ತು ಆತನ ಕುಟುಂಬದ ೬ ಮಂದಿ ದೋಣಿ ಮೂಲಕ‌ ಅಕ್ರಮವಾಗಿ ಕೇರಳದಿಂದ ಮಂಗಳೂರಿನ ಅಡ್ಡೂರಿಗೆ ಕೇರಳದಿಂದ ಎಂಟು ಜನ ಬಂದಿದ್ದರು.‌
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಂಗಳೂರಿಗೆ ಬಂದಂತಹ ಎಂಟು ಮಂದಿ ಬಂಧಿಸಿ, ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಡ್ಡೂರಿನ ಯಾಕೂಬ್ ಪತ್ನಿಯ ತವರೂರು ಕೇರಳದ ಮಂಜೇಶ್ವರಕ್ಕೆ ಕೆಲ ದಿನಗಳ ಹಿಂದೆ ಹೋಗಿ ಲಾಕ್‌ಡೌ‌ನ್‌ನಿಂದ ಅಲ್ಲೇ ಉಳಿದಿದ್ದರು, ನಂತರ ತವರೂರಿಗೆ ಹೇಗಾದರೂ ಮಾಡಿ ಬರಬೇಕು ಅಂತ ಶಾಕಿರ್ ಎನ್ನುವವನ ಸಹಾಯ ಪಡೆದು ಮಂಗಳೂರಿನ ಅಡ್ಡೂರನ್ನು ದೋಣಿ ಮೂಲಕ ತಲುಪಿದ್ದರು. ನಂತರ ಇಂದು ಪಡಿತರ ಸಾಲಿನಲ್ಲಿ ನಿಂತದನ್ನು ಗಮನಿಸಿ ಸ್ಥಳೀಯರು ಮಾಹಿತಿ ನೀಡಿ ಪೊಲೀಸರು ಆಗಮಿಸಿ ವಶಕ್ಕೆ ಪಡೆದರು. ನಂತರ ಕೇರಳದ ಕಾಸರಗೋಡಿನಲ್ಲಿ ಕೊರೊನಾ ಹೆಚ್ಚಿದ ಕಾರಣ ಆರೋಗ್ಯ ಇಲಾಖೆ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.