ಉಡುಪಿಯ ಮೂರು ಕೊರೊನಾ ಸೋಂಕಿತರು ಗುಣಮುಖ, ಸದ್ಯದಲ್ಲೇ ಡಿಸ್ಚಾರ್ಜ್: ಡಿಸಿ ಜಗದೀಶ್

ಉಡುಪಿ: ಜಿಲ್ಲೆಯ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಅವರನ್ನು ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಹಾಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ದೂರ ಆಗಿದೆ ಎಂದಿದ್ದಾರೆ. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಸೋಂಕು ಹರಡುವ ಆತಂಕವಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗಗಳನ್ನು ಸಂಪೂರ್ಣವಾಗಿ ಬಂದ್  ಮಾಡಲಾಗಿದೆ. ಯಾವುದೇ ಕಾರಣಕ್ಕೂ ಉಡುಪಿ ಜಿಲ್ಲೆಗೆ ಬೇರೆ ಜಿಲ್ಲೆ ಹಾಗೂ ರಾಜ್ಯದ ಜನರ […]

ಕುಂದಾಪುರ: ಸುಖಾಸುಮ್ಮನೆ ರಸ್ತೆಗೆ ಬಂದವರ 41 ದ್ವಿಚಕ್ರ ವಾಹನ, 5 ಕಾರುಗಳು ವಶಕ್ಕೆ:

ಕುಂದಾಪುರ: ಕೊರೋನಾ ತಡೆಗಟ್ಟುವ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಜನರು ಸುಖಾಸುಮ್ಮನೆ ರಸ್ತೆಗಿಳಿಯುವುದು ನಿಂತಿಲ್ಲ. ಇದೀಗ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ನೋಟಿಸ್ ನೀಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಕುಂದಾಪುರ ಪೊಲೀಸ್ ಉಪವಿಭಾಗದ ಎಲ್ಲಾ ಠಾಣೆಗಳಲ್ಲೂ ಪೊಲೀಸರು ವಾಹನ ವಶಕ್ಕೆ ಪಡೆಯುವ ಕಾರ್ಯ ನಡೆಸುತ್ತಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪಿಎಸ್‌ಐ ಹರೀಶ್ ಆರ್. ನಾಯ್ಕ್ ನೇತೃತ್ವದ ತಂಡ ಕಳೆದ ಮೂರು ದಿನಗಳಿಂದ ಠಾಣಾ ವ್ಯಾಪ್ತಿಯ ವಿವಿದೆಡೆ ಕಾರ್ಯಾಚರಣೆ ನಡೆಸುತ್ತಿದ್ದು ಒಟ್ಟು ೧೩ ದ್ವಿಚಕ್ರ […]

ಮದ್ಯದಂಗಡಿಯಲ್ಲಿ ಕಳ್ಳತನ‌ ನಡೆದರೆ ಗಮನಕ್ಕೆ ತನ್ನಿ: ಅಬಕಾರಿ ಉಪ ಆಯುಕ್ತರು

ಉಡುಪಿ ಏ.10: ಕೋವಿಡ್-19 ತಡೆಗಟ್ಟಲು ಜಿಲ್ಲೆಯಾದ್ಯಂತ ಈಗಾಗಲೇ ಎಲ್ಲಾ ಮದ್ಯದಂಗಡಿಗಳನಮ್ನು ಮುಚ್ಚಲಾಗಿದ್ದು,  ಏಪ್ರಿಲ್ 14 ರ ವರಗೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನ ಸಂಚಾರ ಇಲ್ಲವಾಗಿದ್ದು ಮದ್ಯದ ಅಂಗಡಿಗಳಲ್ಲಿ ಕಳ್ಳತನ ನಡೆಯುವ ಸಾದ್ಯತೆಗಳಿದ್ದು, ಈಗಾಗಲೇ ಕುಂದಾಪುರ ತಾಲೂಕಿನ ಕನಕ ಬಾರ್ ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ಮತ್ತು ಕಾಪು ತಾಲೂಕಿನ ಶಕ್ತಿ ಬಾರ್ ನಲ್ಲಿ ಕಳ್ಳತನ ನಡೆದಿದೆ. ಆದ್ದರಿಂದ ಜಿಲ್ಲೆಯಲ್ಲಿ ಮದ್ಯದಂಗಡಿಗಳ ಕಳ್ಳತನ ತಡೆಯಲು , ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗಳ ಮೇಲೆ ಗಸ್ತು ಸಮಯದಲ್ಲಿ ಸೂಕ್ತ ನಿಗಾವಹಿಸಲಾಗುತ್ತಿದ್ದು, […]

ಅನಾವಶ್ಯಕ ಅನುಮತಿ ಪತ್ರಕ್ಕೆ ಬರಬೇಡಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಏ.10: ಕೋವಿಡ್-19 ತಡೆಗಟ್ಟಲು ಜಿಲ್ಲೆಯಾದ್ಯಂತ ಈಗಾಗಲೇ ಸೆಕ್ಷನ್ 144(3) ಆದೇಶ ಜಾರಿಯಲ್ಲಿದೆ. ಅದರಂತೆ ಸಾರ್ವಜನಿಕರು ಹೊರಗಡೆ ಸಂಚರಿಸುವುದುನ್ನು ನಿಷೇಧಿಸಲಾಗಿದೆ. ಆದರೆ ಸಣ್ಣಪುಟ್ಟ ಕಾರಣಕ್ಕೆ ಅನುಮತಿ ಪತ್ರ ಕೋರಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಪ್ರತಿದಿನ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸರ್ಕಾರದ ಅದೇಶದ ಉಲ್ಲಂಘನೆಯಾಗಿದೆ. ಆದ್ದರಿಂದ ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಅನಾವಶ್ಯಕವಾಗಿ ಅನುಮತಿ ಪಡೆಯಲು ಏಪ್ರಿಲ್ 14 ರ ವರೆಗೆ ಬರುವುದನ್ನು ನಿಷೇಧಿಸಲಾಗಿದೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೆಲೆಯಲ್ಲಿ, ಬೇರೆ ಜಿಲ್ಲೆಯ […]

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರ ನೀಡಿ: ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

ಬೆಂಗಳೂರು:ಕೊರೋನಾ ಲಾಕ್ ಡೌಟ್ ಜೊತೆ ಜೊತೆಗೆ ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆಯೂ ಹೆಚ್ಚಿದೆ.ಪ್ರಾಣಿ-ಪಕ್ಷಿಗಳು ಈ ಸಂದರ್ಭದಲ್ಲಿ ಮನುಷ್ಯರಿಗಿಂತಲೂ ಜಾಸ್ತಿ ಒದ್ದಾಡುತ್ತದೆ.ನೀರು ಸಿಗದೇ ಬೇಸಗೆಯಲ್ಲಿ ಬಳಲಿ ಬೆಂಡಾಗುತ್ತದೆ. ಆದರೆ ಇದೀಗ ರಾಜ್ಯದಲ್ಲಿ ಲೋಕ್ ಡೌನ್ ಜಾರಿಯಲ್ಲಿರುದರಿಂದ  ಪ್ರಾಣಿಗಳಿಗೆ, ಬೀದಿನಾಯಿಗಳಿಗೆ ಆಹಾರ ಸಿಗುತ್ತಿಲ್ಲ  ಈ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳಿಗೆ ನಿಮ್ಮ ಕೈಲಾಗುವಷ್ಟು ಆಹಾರ ನೀರು ನೀಡಿ ಅವುಗಳ ದಾಹ, ಹಸಿವು ನೀಗಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಟ್ವೀಟರ್ ಖಾತೆಯಲ್ಲಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.”ಬಿಸಿಲು ಮತ್ತು ಲಾಕ್ ಡೌನ್ ಪರಿಣಾಮ ಪಕ್ಷಿ-ಪ್ರಾಣಿಗಳಿಗೆ […]