ಉಡುಪಿಯಲ್ಲಿ ಕೊರೊನ ಶಂಕಿತರ ಸಂಖ್ಯೆ ದಿಢೀರ್ ಏರಿಕೆ

ಉಡುಪಿ: ಶಂಕಿತ ಕೊರೊನಾ ಸೋಂಕಿತರ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಒಂದೇ ದಿನ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಹೆಚ್ಚಿನ ಶಂಕಿತರು ಆಸ್ಪತ್ರೆಗೆ ದಾಖಲಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಜಪಾನ್‌, ಸೌದಿ ಅರೇಬಿಯಾ, ಸಿಂಗಪುರ, ಮಸ್ಕತ್, ಅಬುದಾಬಿ, ಮುಂಭೈ, ತೆಲಂಗಾಣದಿಂದ ಈಚೆಗೆ ಜಿಲ್ಲೆಗೆ ಮರಳಿದ್ದ 10 ಹಾಗೂ ಸ್ಥಳೀಯರಾದ 6 ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತರಲ್ಲಿ 11 ಪುರುಷರು ಹಾಗೂ […]

‘ಜನತಾ ಕರ್ಫ್ಯೂ’ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಹಮತ 

ಮಂಗಳೂರು: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ‘ಜನತಾ ಕರ್ಫ್ಯೂ’ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಹಮತ ದೊರೆತಿದೆ. ಜನತೆ ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ನೀಡಿದ್ದರಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯು ಸ್ತಬ್ಧಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಬೆಳಗ್ಗೆ 7ರಿಂದಲೇ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ವಾರದ ಹಿಂದೆಯೇ ಮಾಲ್‌ಗಳು, ಚಲನಚಿತ್ರ ಮಂದಿರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರಕಾರ […]

ಮಾ.23 ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಮಾ.23 ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನುಕರ್ಫ್ಯೂನಿಂದ ಮುಂದೂಡಲಾಗಿದೆ. ಸೋಮವಾರ ಪರೀಕ್ಷೆ ನಡೆಯಬೇಕಿತ್ತು. ನಾಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೊನೆಯ ಇಂಗ್ಲಿಷ್ ಪರೀಕ್ಷೆ ನಡೆಯಬೇಕಿತ್ತು. ಆದರೆ ಕರ್ಫ್ಯೂನಿಂದ ನಾಳೆ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ವಿದ್ಯಾರ್ಥಿಗಳಿಗೆ ಯಾವ ತೊಂದರೆಯಾಗಬಾರದು ಅಂತ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ನಾಳೆ ಬಸ್ ಸೇವೆಗಳನ್ನು ಸರ್ಕಾರ ಸ್ಥಗಿತಗೊಲಿಸಿದ್ದು, ಹೀಗಾಗಿ ಸರ್ಕಾರಿ ಬಸ್ಸುಗಳ ಸ್ಥಗಿತದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುಬಹುದು ಎಂದು ಶಿಕ್ಷಣ ಸಚಿವರು […]

ಕುಂದಾಪುರ: ಒಂದು ದಿನವೂ ಅಂಗಡಿ ಬಂದ್ ಮಾಡದ ಆಚಾರ್ಯರ ಪೇಪರ್ ಅಂಗಡಿಯೂ ಬಂದ್!

ಶ್ರೀಕಾಂತ ಹೆಮ್ಮಾಡಿ ಕುಂದಾಪುರ: ಮೂರುವರೆ ದಶಕಗಳ ಸುದೀರ್ಘ ಸೇವೆಯಲ್ಲಿ ಒಂದು ದಿನವೂ ತಮ್ಮ ಅಂಗಡಿಯನ್ನು ಬಂದ್ ಮಾಡದ ಪೇಪರ್ ಏಜೆನ್ಸಿಯ ಶಂಕರ್ ಆಚಾರ್ಯರು ಸ್ವತಃ ಅಂಗಡಿಯನ್ನು ಬಂದ್ ಮಾಡಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿ ವಿಶೇಷ ಗಮನಸೆಳೆದಿದ್ದಾರೆ. ೧೯೮೫ ರಲ್ಲಿ ಕುಂದಾಪುರದ ಹಳೆ ಬಸ್ ಸ್ಟ್ಯಾಂಡ್ ಬಳಿಯ ಕಟ್ಟಡದಲ್ಲಿ ಪೇಪರ್ ಏಜೆನ್ಸಿಯ ಅಂಗಡಿ ಆರಂಭಿಸಿದ ಶಂಕರ ಆಚಾರ್ಯರು ಅಂದಿನಿಂದಲೂ ಯಾವುದೇ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಏನೇ ಮುಖ್ಯವಾದ ಬೇಡಿಕೆ ಇಟ್ಟು ಬಂದ್ ನಡೆಸಿದರೂ ಬೆಂಬಲ […]

ಮಂಗಳೂರಲ್ಲಿ ಕೊರೊನ ಪತ್ತೆ: ವಿಮಾನದಲ್ಲಿದ್ದ 165 ಪ್ರಯಾಣಿಕರ ಮೇಲೂ ನಿಗಾ: ಜಿಲ್ಲಾಧಿಕಾರಿ

ಮಂಗಳೂರು: ವಿಶ್ವವನ್ನೇ ತಲ್ಲಣ ಮೂಡಿಸಿರೋ ಕೊರೊನಾ ಮಹಾಮಾರಿ ಇದೀಗ ಕರಾವಳಿಗೂ ಕಾಲಿಟ್ಟಿದೆ. ಮಂಗಳೂರಿನಲ್ಲಿ ಯುವಕನಿಗೆ ಕೊರೊನಾ ಇರೋದು ದೃಢಪಟ್ಟಿದೆ. ಭಟ್ಕಳ ಮೂಲದ 22 ವರ್ಷದ ಯುವಕನಲ್ಲಿ ಕೊರೊನಾವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿ ಮಾರ್ಚ್ 19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5:45ಕ್ಕೆ ದುಬೈಯಿಂದ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ […]