ಮಂಗಳೂರಲ್ಲಿ ಕೊರೊನಾ ಸೋಂಕು ದೃಢ: ದ.ಕ. ಜಿಲ್ಲೆಯಲ್ಲಿ‌ ಮೊದಲ ಸೋಂಕು ಪತ್ತೆ

ಮಂಗಳೂರು: ಮಂಗಳೂರಿನಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದೆ. ಪತ್ತೆಯಾದ ವ್ಯಕ್ತಿ‌ ಭಟ್ಕಳ ಮೂಲದವರಾಗಿದ್ದು, ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಂದಾಜು 22 ವರ್ಷದ ಯುವಕ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್ ಹೇಳಿಕೆ ನೀಡಿದ್ದಾರೆ.

ಜನತಾ ಕಫ್ರ್ಯೂಗೆ ಜೈ ಎಂದ ಜನತೆ: ಕುಂದಾಪುರ ತಾಲೂಕಿನಾದ್ಯಂತ ಸಂಪೂರ್ಣ ಬಂದ್ ವ್ಯಾಪಾರ, ವಹಿವಾಟು, ವಾಹನ ಸಂಚಾರ, ಮೀನುಗಾರಿಕೆ ಸಂಪೂರ್ಣ ಸ್ತಬ್ಧ

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಕರೋನಾ ವೈರಸ್ ತಡೆಗಾಗಿ ಪ್ರಧಾನಿ ಮೋದಿ ಭಾನುವಾರ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾನುವಾರ ರಜೆಯ ದಿನವಾದ್ದರಿಂದ ಮತ್ತು ಕೊರೋನಾ ವೈರಸ್‍ನಿಂದಾಗಿ ಭಯಭೀತರಾಗಿದ್ದರಿಂದ ಸಾಮಾಜಿಕ ಕಳಕಳಿಗಿಂತಲೂ ಸ್ವಯಂ ರಕ್ಷಣೆ ಅನಿವಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿರುವುದು ಭಾನುವಾರದ ನಡೆದಿರುವ ಬೆಳವಣಿಗೆ ಸಾಕ್ಷೀಕರಿಸಿದೆ. ಕುಂದಾಪುರದ ಪ್ರಮುಖ ಪೇಟೆಗಳಲ್ಲಿನ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಬಾಗಿಲು ತೆರೆಯದೇ ಬಂದ್‍ಗೆ ಬೆಂಬಲ ಸೂಚಿಸಿದ ಪರಿಣಾಮ ಮುಖ್ಯ ಪೇಟೆಯ ರಸ್ತೆಗಳೆಲ್ಲಾ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್ […]

ಮಹಾರಾಷ್ಟ್ರದಲ್ಲಿ ಕೊರೊನಾಗೆ ಮತ್ತೋರ್ವ ಬಲಿ: ಭಾರತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಮಹಾರಾಷ್ಟ್ರ ಮಾ.22: ಕೊರೋನಾ ಮಾಹಮಾರಿಗೆ ಮುಂಬೈನ ಮಹಾರಾಷ್ಟ್ರದಲ್ಲಿ 56 ವರ್ಷದ ವ್ಯಕ್ತಿ ಬಲಿಯಾಗಿರುವುದು ಧೃಡವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ ಎರಡಕ್ಕೇರಿದೆ. ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ನಿನ್ನೆ ರಾತ್ರಿ ಮೃತ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ತಗಲಿದ್ದು ದೃಡಪಟ್ಟಿದೆ. ರೋಗಿಯ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು ಎಂದು ತಿಳಿಸಿದ್ದಾರೆ. ಕೊರೋನಾ ವೈರಸ್ ಅಟ್ಟಹಾಸದಿಂದ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು. ಭಾರತದಲ್ಲಿ ಸಾವಿನ […]