ರೊಸಾರಿಯಾ ಹಾಗೂ ಸೈಂಟ್ ಆ್ಯನ್ಸ್ ಶಿಕ್ಷಣ ಸಮೂಹದ ವಿದ್ಯಾರ್ಥಿಗಳಿಂದ ಆತ್ಮಹತ್ಯೆ ತಡೆ ಅಭಿಯಾನ

ಮಂಗಳೂರು: ಆತ್ಮಹತ್ಯೆ ಮಹಾಪಾಪ, ವರ್ಷಕ್ಕೆ ಸಾವಿರಾರು ಮಂದಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಾರೆ.. ಅದರಲ್ಲಿ ಯುವಜನತೆಯ ಸಂಖ್ಯೆಯೇ ಹೆಚ್ಚು.. ಮನೆಗೆ ಆಧಾರ ಸ್ತಂಭವಾಗಿರುವರು ಆತ್ಮಹತ್ಯೆ ಮಾಡಿಕೊಂಡರೇ ಇಡೀ ಕುಟುಂಬದ ಸಂಕಷ್ಟ ಎದುರಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ನ್ನು ತಡೆಗಟ್ಟಲು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವತಿಯಿಂದ ನಗರದ ರೊಸಾರಿಯಾ ಶಿಕ್ಷಣ ಸಮೂಹದ ಹಾಗೂ ಸೈಂಟ್ ಆ್ಯನ್ಸ್ ಶಿಕ್ಷಣ ಸಮೂಹದ ವಿದ್ಯಾರ್ಥಿಗಳು ಆತ್ಮಹತ್ಯೆ ತಡೆ ಅಭಿಯಾನ ನಡೆಸಿದ್ದರು. ನನ್ನ ಜೀವ ನನ್ನ ಆತ್ಮ ಉಳಿಸಿಕೊಳ್ಳುವುದು ನನ್ನ […]

ಕುಡ್ಲ ಸಿಟಿಗೆ ಬಂತು ಹೊಗೆ ಬಿಡದ ಆಟೋ ರಿಕ್ಷಾ: ನೋ ಪೊಲ್ಯೂಷನ್, ಇಲ್ಲ ಶಬ್ದದ ಟೆನ್ಶನ್

ಮಂಗಳೂರು: ದಿನನಿತ್ಯ ನೂರಾರು ಆಟೋ ರಿಕ್ಷಾಗಳು ಓಡಾಡು ನಡೆಸುತ್ತಿರುವ ಕಡಲ ನಗರ ಮಂಗಳೂರಿನಲ್ಲಿ ಈಗ ಹೊಸ ರೀತಿಯ ರಿಕ್ಷಾವೊಂದು ಎಲ್ಲರ ಗಮನ ಸೆಳೆಯುತ್ತಿದೆ… ವಿಶೇಷ ಅಂದ್ರೆ ಈ ಆಟೋ ರಿಕ್ಷಾ ಹೊಗೆ ಬಿಡುವುದಿಲ್ಲ, ಶಬ್ದ ಮಾಲಿನ್ಯ ಮಾಡುವುದಿಲ್ಲ,  ಯಸ್ ಯಾಕಂದ್ರೆ ಇದು ಎಲೆಕ್ಟ್ರಿಕ್ ರಿಕ್ಷಾ.. ವಿಶೇಷ ಬಣ್ಣದಿಂದಲೂ ಗಮನ ಸೆಳೆಯುತ್ತಿರುವ ಈ ಎಲೆಕ್ಟ್ರಿಕ್ ರಿಕ್ಷಾ ಪ್ರಯಾಣಿಕರ ಹಾಗೂ ನೋಡುಗರ ಕುತೂಹಲಕ್ಕೆ ಕಾರಣವಾಗಿದೆ. ಮಂಗಳೂರಿನ ಮೊದಲ ಎಲೆಕ್ಟ್ರಿಕ್ ರಿಕ್ಷಾವನ್ನು ಓಡಿಸುತ್ತಿರುವವರು ರಾರ್ಬಟ್ ಉಳ್ಳಾಲ ಎಂಬುವವರು. ಮಂಗಳೂರಿನಲ್ಲಿ ವಾಹನಗಳು ಅಧಿಕವಾಗಿ […]

ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು: ಈಶಪ್ರಿಯ ಶ್ರೀ

ಉಡುಪಿ: ಇಂದು ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಅವುಗಳ ಬಳಕೆ ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹೇಳಿದರು. ಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ಕೃಷಿಕ ಅಬೂಬಕ್ಕರ್‌ ಮತ್ತು ನೇಕಾರ ಸಂಜೀವ ಶೆಟ್ಟಿಗಾರ್‌ ಕೊರಂಗ್ರಪಾಡಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ, ಕಲೆ, ಪರಂಪರೆಯನ್ನು ಉಳಿಸಬೇಕಾದರೆ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು. ಯುವಜನರಿಗೆ ದೇಶೀಯ ಉತ್ಪನ್ನಗಳ ಮಹತ್ವವನ್ನು ತಿಳಿಸಬೇಕು. ಆಗ ನಮ್ಮ ತನವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು. ನೇಕಾರಿಕೆ ಬಹಳ […]

ಪಡುಬಿದ್ರಿ: ನ್ಯಾಯಾಲಯದ ಆದೇಶದಂತೆ ಗಾಂಜಾ ನಾಶ

ಉಡುಪಿ: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಪಡುಬಿದ್ರಿ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಸೋಮವಾರ ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಯಿತು. ಜಿಲ್ಲೆಯ ಸೆನ್‌ ಅಪರಾಧ ಠಾಣೆಯ 11 ಪ್ರಕರಣಗಳಲ್ಲಿ 31.84 ಕೆ.ಜಿ., ಮಣಿಪಾಲ ಠಾಣೆಯ ನಾಲ್ಕು ಪ್ರಕರಣಗಳಲ್ಲಿ 1.56 ಕೆ.ಜಿ. ಹಾಗೂ ಉಡುಪಿ ನಗರ ಠಾಣೆಯ ಎರಡು ಪ್ರಕರಣಗಳಲ್ಲಿ 1.67 ಕೆ.ಜಿ. ಸೇರಿದಂತೆ ಒಟ್ಟು 17 ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಒಟ್ಟು 32 ಕೆ.ಜಿ 883 ಗ್ರಾಂ ಗಾಂಜಾವನ್ನು ನಾಶಪಡಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಗಾಂಜಾ ವಿಲೇವಾರಿ ಸಮಿತಿ […]

ಮಾರಣಾಂತಿಕ ಕೊರೊನಾ: ಮಂಗಳೂರು ವಿಮಾನ‌ ನಿಲ್ದಾನದಲ್ಲಿ ಕಟ್ಟೆಚ್ಚರ

ಮಂಗಳೂರು: ಮಾರಣಾಂತಿಕ ಕೊರೊನಾ ವೈರಸ್ ಭೀತಿ ಇದೀಗ ಕರ್ನಾಟಕವನ್ನೂ ಆವರಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರಿನ ಏರ್​ಪೋರ್ಟ್​ ಹಾಗೂ ಹಡಗಿನ ಮೂಲಕ ಬರುವವರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬೇರೆ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ದುಬೈ ಸೇರಿದಂತೆ ಎಲ್ಲಾ ದೇಶಗಳಿಂದ ಬರುವ ಫ್ಲೈಟ್ ನಲ್ಲಿ ಹೆಚ್ಚುವರಿ ತಪಾಸಣೆ ಮಾಡಲಾಗ್ತಿದೆ. ಅತ್ತ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಟರ್ ವಾರ್ಡ್ ನಿರ್ಮಾಣ ಕೂಡಾ ಮಾಡಲಾಗಿದೆ.