ಕೋಟಿ ಚೆನ್ನಯರು ಕರಾವಳಿಯ ವೀರ ಪುರುಷರು: ಎಂ. ಎನ್. ರಾಜೇಂದ್ರಕುಮಾರ್

ಬೈಂದೂರು: ಕೋಟಿ ಚೆನ್ನಯರು ಕರಾವಳಿಯ ವೀರ ಪುರುಷರಾಗಿದ್ದು ಅವರು ನೆಲೆಸಿ, ನಡೆದಾಡಿದ ಸಾನಿಧ್ಯವೆಲ್ಲವೂ ಇಂದು ಶಕ್ತಿಸ್ಥಳವಾಗಿ ಮಾರ್ಪಟ್ಟಿದೆ. ಅವರ ಕೊನೆಯ ಗರಡಿಯಾಗಿರುವ ನಾಕಟ್ಟೆ ಗರಡಿಯೂ ಕೂಡ ಜೀರ್ಣೋದ್ಧಾರಗೊಳ್ಳುತ್ತಿದ್ದಂತೆ ಇಡಿ ಊರಿಗೆ ಚೈತನ್ಯ ತಂದುಕೊಡಲಿದೆ ಎಂದು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಹೇಳಿದರು. ಅವರು ಬೈಂದೂರು ತಾಲೂಕು ಯಡ್ತರೆ ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ ಬಳಿಕ ಮಾತನಾಡಿ ಬಹಳ ವರ್ಷಗಳ ಬಳಿಕ ಜೀರ್ಣೋದ್ಧಾರ […]

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಿ: ಅಪರ ಜಿಲ್ಲಾಧಿಕಾರಿ

ಉಡುಪಿ ಮಾ.3: ಮಾರ್ಚ್ 4 ರಿಂದ ಮಾರ್ಚ್ 23 ರ ರವರೆಗೆ 2020 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ನಡೆಯಲಿದ್ದು, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ, ಯಾವುದೇ ಪರೀಕ್ಷೆಗಳನ್ನು ಲೋಪದೋಷಗಳಾಗದಂತೆ ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನೇಮಕಾತಿ ಮಾಡಿದ ಪರೀಕ್ಷಾ ಕೇಂದ್ರಗಳ ವೀಕ್ಷಕರು ಗಮನ ಹರಿಸಬೇಕು. ಪರೀಕ್ಷಾ ವಿಚಾರದಲ್ಲಿ ಜಿಲ್ಲೆಗೆ ಕಪ್ಪು ಚ್ಯುತಿ ಬಾರದಂತೆ ಎಚ್ಚರ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, […]

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು: 2020 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ. 4 ರಿಂದ ಮಾ. 23 ರ ರವರೆಗೆ ನಡೆಯಲಿದ್ದು, ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶುಭಕೋರಿದ್ದಾರೆ. ಸಿಎಂ ಅವರು ಟ್ವೀಟರ್ ನಲ್ಲಿ “ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟವಾದ ದ್ವಿತೀಯ ಪಿಯು ಅಂತಿಮ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು. ನಿಮ್ಮೆಲ್ಲರ ಅಗಣಿತ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ, ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಈಗಾಗಲೇ […]

ಪ್ರಧಾನಿ ಮೋದಿ ಭಾನುವಾರ ಸೋಶಿಯಲ್ ಮೀಡಿಯಾ ವೇದಿಕೆಯಿಂದ ದೂರ..

ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾ ವೇದಿಕೆಯಿಂದ ಹೊರ ಹೋಗುತ್ತಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಅಚ್ಚರಿಯ ವಿಷಯವನ್ನು ತಿಳಿಸಿದ್ದಾರೆ. ಅವರು ತಮ್ಮ ಟ್ವೀಟರ್ ನಲ್ಲಿ, ಈ ಭಾನುವಾರದಿಂದ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ದೂರ ಉಳಿಯಲು ಚಿಂತಿಸುತ್ತಿದ್ದೇನೆ. ಹಾಗೇ ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ , ಯೂಟ್ಯೂಬ್‍ಗಳಿಂದ ದೂರ ಉಳಿಯಲು ಚಿಂತಿಸಿದ್ದೆನೆ. ಮುಂದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಬರೆದು ಹೇಳಿದ್ದಾರೆ. ಈ ಎರಡು ಸಾಲುಗಳನ್ನು ಬರೆಯುವ ಮೂಲಕ ತಮ್ಮ ವಿಚಾರವನ್ನು ಹಿಂಬಾಲಕರೊಂದಿಗೆ ಮೋದಿ ಹಂಚಿಕೊಂಡಿದ್ದಾರೆ.