ಕಾರ್ಕಳ:ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಶಿವರಾತ್ರಿ

ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಆದ್ಯಾತ್ಮಿಕ ಕಾರ್ಯಕ್ರಮವು ಆನೆಕೆರೆಯ ಸದ್ಯೋಜಾತ ಉದ್ಯಾನವನದಲ್ಲಿಜರಗಿತು. ಪರಮಾತ್ಮನ ಅವತರಣೆಯೆ ಸತ್ಯ ಶಿವರಾತ್ರಿ ಎಂದು ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಕಳದ ಶ್ರೀ ಸಾಯಿ ಡಿಗ್ರಿ ಕಾಲೇಜಿನ ಸಂಸ್ಥಾಪಕರು, ಉದ್ಯಮಿ ಚಂದ್ರಹಾಸ ಸುವರ್ಣ, ಸತತ ಪರಿಶ್ರಮದಿಂದ ಹಾಗೂ ದೇವರ ಅನುಗ್ರಹದಿಂದ ಜೀವನದಲ್ಲಿ ಪ್ರಗತಿಯನ್ನು ಹೊಂದಬಹುದು ಎಂದು ತಿಳಿಸಿದರು. ಕಾರ್ಕಳ ಜೇಸಿಐ ಇದರ ಅಧ್ಯಕ್ಷರಾದ ದಿವಾಕರ್ ಎಂ. ಬಂಗೇರ […]

ಶ್ರೀರಾಮ್ ಕ್ರಿಕೆಟರ್ಸ್ ಹೆಮ್ಮಾಡಿ: ಸಂಪತ್ ಟ್ರೋಫಿ ಉದ್ಘಾಟನೆ

ಕುಂದಾಪುರ: ಗ್ರಾಮೀಣ ಭಾಗದ ಪ್ರತಿಭೆಗಳು ದೇಶಮಟ್ಟಕ್ಕೆ ಪರಿಚಯವಾಗುವುದು ಇಂತಹ ಕ್ರೀಡಾಕೂಟಗಳಿಂದಲೇ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಇಂತಹ ಕ್ರೀಡಾಕೂಟಗಳು ಹೆಚ್ಚೆಚ್ಚಾಗಿ ನಡೆಯುತ್ತಿರಲಿ ಎಂದು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಆರ್ ನಾಯ್ಕ್ ಹೇಳಿದರು. ಅವರು ಭಾನುವಾರ ಇಲ್ಲಿನ ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಗಲಿದ ಗೆಳೆಯನ‌ ನೆನಪಿಗಾಗಿ ಶ್ರೀರಾಮ್ ಕ್ರಿಕೆಟರ್ಸ್ ಹೆಮ್ಮಾಡಿ ಆಯೋಜಿಸಿದ ಸಂಪತ್ ಟ್ರೋಫಿ-2020 ರ ಕ್ರಿಕೆಟ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ದೇಶವನ್ನು ಪ್ರತಿನಿಧಿಸಿ ಕ್ರಿಕೆಟ್ ಆಡುತ್ತಿರುವ ಆಟಗಾರರು ಇಂತಹ ಮೈದಾನದಲ್ಲಿ […]

ಉಡುಪಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಜಿಲ್ಲಾಧ್ಯಕ್ಷರ ಪದಗ್ರಹಣಕ್ಕೆ ಇಬ್ಬರು ಶಾಸಕರು ಗೈರು

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇಂದು ನಗರದ ಕಿದಿಯೂರು ಹೋಟೆಲ್ ನಲ್ಲಿ ನಡೆದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯ ಐವರು ಶಾಸಕರ ಪೈಕಿ  ಇಬ್ಬರು ಶಾಸಕರು ಗೈರಾಗುವ ಮೂಲಕ ಬಹಿರಂಗವಾಗಿಯೇ  ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಮಾರಂಭಕ್ಕೆ ಗೈರಾಗಿದ್ದು, ಆ ಮೂಲಕ ತಮ್ಮೊಳಗೆ ಕುದಿಯುತ್ತಿದ್ದ ಅಸಮಾಧಾನದ ಜ್ವಾಲೆಯನ್ನು ಹೊರಹಾಕಿದ್ದಾರೆ. […]

ದಕ್ಷ, ಪ್ರಾಮಾಣಿಕ ಅರಣ್ಯ ಅಧಿಕಾರಿಗೆ ಉಡುಪಿ ತಾ.ಪಂ‌ಸಭೆಯಲ್ಲಿ ಅಗೌರವ “ದುರಹಂಕಾರಿ” ಎಂದ್ರು ಶಾಸಕರು!-ಅಧಿಕಾರಿಯ ಧ್ವನಿ ಹತ್ತಿಕ್ಕಲು ಸಭೆಯಲ್ಲಿ ಪ್ರೀ ಪ್ಲಾನ್, ಮೂರೇ ತಿಂಗಳಲ್ಲಿ ಅಧಿಕಾರಿಯ ವರ್ಗಾವಣೆ

ಪ್ರಾಮಾಣಿಕವಾಗಿ ಜಿಲ್ಲೆಯ ಅರಣ್ಯ ಸಂಪತ್ತು ಉಳಿಸಬೇಕು, ಅರಣ್ಯ ಹಾಳು ಮಾಡುವ ಎಲ್ಲರಿಗೂ ಶಿಕ್ಷೆಯಾಗಬೇಕು ಎನ್ನುವ ಕಾಳಜಿಯಿಂದ ಕೆಲಸ ಮಾಡುವ ಅಧಿಕಾರಿಗೆ, ಮೀಸಲು ಅರಣ್ಯವನ್ನು ಅಭಿವೃದ್ಧಿಯ ನೆಪ ಹೇಳಿ ಹಾಳು ಮಾಡಲು ಓರ್ವ ಅರಣ್ಯ ಅಧಿಕಾರಿಯಾಗಿ ಕಾನೂನಿನ ಪ್ರಕಾರ ನಾನು ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂದು ಅರಣ್ಯ ಸಂರಕ್ಷಣೆಯೇ ತನ್ನ ಧ್ಯೇಯ ಎನ್ನುವ ಅಧಿಕಾರಿಗೆ ಸೋಮವಾರ ತಾ.ಪಂ ಸಭೆಯಲ್ಲಿ ಶಾಸಕರು ಮತ್ತು ಸದಸ್ಯರಗಳು ಸೇರಿ ಅವಮಾನಿದ ವಿಡಿಯೋ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ. ದುರಹಂಕಾರಿ,ಬೇಜವಾಬ್ದಾರಿ,ಎಂದು ಅಧಿಕಾರಿಯ ಮೇಲೆ […]

ಮರ ತೆರವು ವಿಚಾರ: ಅರಣ್ಯಾಧಿಕಾರಿ- ಶಾಸಕರ ಮಧ್ಯೆ‌ ಮಾತಿನ ಚಕಮಕಿ, ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಬಿಜೆಪಿ ಟಾರ್ಗೆಟ್?

ಉಡುಪಿ: ಬ್ರಹ್ಮಾವರ ವ್ಯಾಪ್ತಿಯ ಕುಂಜಾರು ರಸ್ತೆ ಅಗಲೀಕರಣ ಮತ್ತು ಮರ ತೆರವು ವಿಚಾರಕ್ಕೆ ಸಂಬಂಧಿಸಿ ಶಾಸಕರು ಮತ್ತು ಅರಣ್ಯಾಧಿಕಾರಿ ನಡುವೆ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಅರಣ್ಯ ಇಲಾಖೆಯ ಮರ ತೆರವು ಮಾಡುವ ವಿಚಾರ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಮತ್ತು ಶಾಸಕ ರಘುಪತಿ ಭಟ್  ನಡುವೆ ವಾಕ್ಸಾಮರಕ್ಕೆ ಕಾರಣ ವಾಯಿತು. ಸಭೆಯಲ್ಲಿ ಅಗೌರವ ತೋರಿದ್ದಾರೆ ಎಂದು ಶಾಸಕ ರಘುಪತಿ ಭಟ್ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದರು. ನಾನು ಅಗೌರವ […]