ದಕ್ಷ, ಪ್ರಾಮಾಣಿಕ ಅರಣ್ಯ ಅಧಿಕಾರಿಗೆ ಉಡುಪಿ ತಾ.ಪಂ‌ಸಭೆಯಲ್ಲಿ ಅಗೌರವ “ದುರಹಂಕಾರಿ” ಎಂದ್ರು ಶಾಸಕರು!-ಅಧಿಕಾರಿಯ ಧ್ವನಿ ಹತ್ತಿಕ್ಕಲು ಸಭೆಯಲ್ಲಿ ಪ್ರೀ ಪ್ಲಾನ್, ಮೂರೇ ತಿಂಗಳಲ್ಲಿ ಅಧಿಕಾರಿಯ ವರ್ಗಾವಣೆ

ಪ್ರಾಮಾಣಿಕವಾಗಿ ಜಿಲ್ಲೆಯ ಅರಣ್ಯ ಸಂಪತ್ತು ಉಳಿಸಬೇಕು, ಅರಣ್ಯ ಹಾಳು ಮಾಡುವ ಎಲ್ಲರಿಗೂ ಶಿಕ್ಷೆಯಾಗಬೇಕು ಎನ್ನುವ ಕಾಳಜಿಯಿಂದ ಕೆಲಸ ಮಾಡುವ ಅಧಿಕಾರಿಗೆ, ಮೀಸಲು ಅರಣ್ಯವನ್ನು ಅಭಿವೃದ್ಧಿಯ ನೆಪ ಹೇಳಿ ಹಾಳು ಮಾಡಲು ಓರ್ವ ಅರಣ್ಯ ಅಧಿಕಾರಿಯಾಗಿ ಕಾನೂನಿನ ಪ್ರಕಾರ ನಾನು ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂದು ಅರಣ್ಯ ಸಂರಕ್ಷಣೆಯೇ ತನ್ನ ಧ್ಯೇಯ ಎನ್ನುವ ಅಧಿಕಾರಿಗೆ ಸೋಮವಾರ ತಾ.ಪಂ ಸಭೆಯಲ್ಲಿ ಶಾಸಕರು ಮತ್ತು ಸದಸ್ಯರಗಳು ಸೇರಿ ಅವಮಾನಿದ ವಿಡಿಯೋ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ. ದುರಹಂಕಾರಿ,ಬೇಜವಾಬ್ದಾರಿ,ಎಂದು ಅಧಿಕಾರಿಯ ಮೇಲೆ ತನಗಿರುವ ವೈಯಕ್ತಿಕ ಧ್ವೇಷವನ್ನೇಲ್ಲಾ ಸಭೆಯಲ್ಲಿ ಹೊರಚೆಲ್ಲಿದ  ಶಾಸಕ ರಘುಪತಿ ಭಟ್  ಅವರು ಮಾತನಾಡುವ ವಿಡಿಯೋ ನೋಡಿದ ಜನತೆ “ಇದೊಂದು ಶಾಸಕ ಮಾಡನಾಡಬೇಕಾದ ರೀತಿಯೇ? ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ.ಇದೊಂದು ಸಭೆಯಲ್ಲ ದ್ವೇಷ ಕಾರುವ, ಅಧಿಕಾರಿಯನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡಿದ ನಾಟಕ ಎಂದು ಹೇಳುತ್ತಿದ್ದಾರೆ.
ಆಗಿದ್ದೇನು?
ತಾ.ಪಂಚಾಯತ್ ಸಭೆಯಲ್ಲಿ ಹೆಬ್ರಿ ಅರಣ್ಯ ಅಧಿಕಾರಿ ಮುನಿರಾಜು ಅವರಿಗೆ ಮೊದಲೇ ಆಹ್ವಾನವಿತ್ತು. ತನ್ನ ಕರ್ತವ್ಯ ನಿರ್ವಹಿಸಲೆಂದು‌ ಅಧಿಕಾರಿ ಮುನಿರಾಜು ಅವರು ಸಭೆಗೆ ಹೋಗಿದ್ದರು. ಸಭೆಯಲ್ಲಿ ಬ್ರಹ್ಮಾವರ ವ್ಯಾಪ್ತಿಯ ಕುಂಜಾರು ರಸ್ತೆ ಅಗಲೀಕರಣ ಮತ್ತು ಮರ ತೆರವು ವಿಚಾರಕ್ಕೆ ಸಂಬಂಧಿಸಿ ಶಾಸಕರು ಮಾತನಾಡಿದಾಗ, ಸಹಜವಾಗಿ ಅಧಿಕಾರಿ ಮುನಿರಾಜು ಅವರು ಮೀಸಲು ಅರಣ್ಯದಲ್ಲಿರುವ ಮರಗಳನ್ನು ತೆರವು ಮಾಡಲು ಸಾಧ್ಯವೇ ಇಲ್ಲ ಅಂದಿದ್ದಾರೆ. ಅಷ್ಟಕ್ಕೆ ಶಾಸಕರು ರೇಗಿ, “ಅರಣ್ಯ ಇಲಾಖೆಯ ಅಧಿಕಾರಿಗಳದ್ದು ಸರ್ವಾಧಿಕಾರ ,ಸಭೆಯಲ್ಲಿ ಹಿಂದೆ ಕೂತು ಮಾತನಾಡುತ್ತೀರಾ ಮುಂದೆ ಬನ್ನಿ ಅಂದಿದ್ದಾರೆ.
ಅಧಿಕಾರಿ ಮುಂದೆ ಹೋಗಿ ಕೂತಾಗ ” ಅರಣ್ಯ ಇಲಾಖೆ ಹಾಗೂ ಅಧಿಕಾರಿ ಮುನಿರಾಜು ಅವರನ್ನು ಟಾರ್ಗೆಟ್ ಮಾಡಿದ ಶಾಸಕ, “ದುರಹಂಕಾರಿ” ಅಧಿಕಾರಿ ಎನ್ನುವ ಪದ ಬಳಸಿದ್ದಾರೆ. ಈ ಪದ ಕೇಳುತ್ತಿದ್ದಂತೆಯೇ ಆ ಪದ ಬಳಸಬೇಡಿ ಎಂದು ಸಹಜ ಧ್ವನಿಯಲ್ಲಿ ಅಧಿಕಾರಿ ಮುನಿರಾಜು ಎದ್ದು ನಿಂತು ಹೇಳಿದ್ದಕ್ಕೆ “ನಿಮಗ್ಯಾರ್ರಿ ಇಲ್ಲಿ ಮುಂದೆ ಕೂರೋಕೆ ಹೇಳಿದ್ದು ಎಂದು ಮಾತಿನ ಮಧ್ಯೆ  ಏಕವಚನದಲ್ಲೂ ಬೈದು ಸರಕಾರಿ ಅಧಿಕಾರಿಗೆ ಸಭೆಯಲ್ಲೇ ಅವಮಾನಿಸಿದ್ದಾರೆ. ಇದೊಂದು ಫ್ರೀ ಪ್ಲಾನ್ ಅನ್ನಿಸುವಂತಿದೆ. ಅಧಿಕಾರಿಯನ್ನು ಬೇಕಂತಲೇ ಮುಂದೆ‌ ಕರೆಸಿ ಅವಮಾನಿಸಿದಂತಿದೆ. ಒಂಟಿಯಾಗಿರುವ ಅಧಿಕಾರಿಯ ಮೇಲೆ ಸಭೆಯಲ್ಲಿರುವವರು ಸಹಜವಾಗಿಯೇ ತಿರುಗಿಬಿದ್ದು ಅಧಿಕಾರಿಯನ್ನು ಅಪರಾಧಿ ಎನ್ನುವಂತೆ ಬಿಂಬಿಸಿದ್ದಾರೆ.
ಅರಣ್ಯ ವಿರೋಧಿ ರಾಜಕಾರಣಿಗಳಿಂದ ಅಧಿಕಾರಿಯ ವರ್ಗಾವಣೆ? ಅದೂ ಮೂರೇ ತಿಂಗಳಲ್ಲಿ?
ಅರಣ್ಯಾಧಿಕಾರಿ ಮುನಿರಾಜು ತಮ್ಮ ಪ್ರಾಮಾಣಿಕ ಪರಿಸರ ಪ್ರೀತಿಯಿಂದ ಕೆಲಸ ಮಾಡುತ್ತಿರುವವರು. ಇತ್ತೀಚೆಗೆ ಅಕ್ರಮ ಮರದ ದಂಧೆಯಲ್ಲಿ ನಿರತರಾಗಿದ್ದ ಬಿಜೆಪಿ‌ ರಾಜಕಾರಣಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದರು. ಈಗ ಇದನ್ನೇ ತಲೆಯಲ್ಲಿಟ್ಟುಕೊಂಡು  ಸಭೆಯಲ್ಲಿ ಒಗ್ಗಟ್ಟಾಗಿ ಅಧಿಕಾರಿಯನ್ನು ಸಮಸ್ಯೆಯ ಸುಳಿಯಲ್ಲಿ‌ ಸಿಲುಕಿಸಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ವರ್ಗಾವಣೆ ಕೂಡ ಮಾಡಲಾಗಿದೆ.
ಮರದ ದಂಧೆಯಲ್ಲೇ ಬೆಳೆಯುತ್ತಿರುವ ಸ್ಥಳೀಯ ರಾಜಕಾರಣಿಗಳಿಂದಲೇ ದಕ್ಷ ಅಧಿಕಾರಿಯ ವರ್ಗಾವಣೆಯಾಗಿದೆ ಎನ್ನುವುದು ಮಾತ್ರ ನಿಜ. ಉಡುಪಿ ಜಿಲ್ಲೆ ಅಭಿವೃದ್ದಿಯಾಗೋದು ಅಂದರೆ ಇದ್ದ ಮರಗಳನ್ನು ಅರಣ್ಯಗಳನ್ನು ಬೋಳು ಮಾಡಿ ಅಭಿವೃದ್ದಿ ಮಾಡುವುದಲ್ಲ. ಅರಣ್ಯಗಳನ್ನು ಉಳಿಸಿಕೊಂಡೇ ಅಭಿವೃದ್ದಿ ಮಾಡಬೇಕು ಎನ್ನುವ ಕನಿಷ್ಟ ಅರಿವು ಇಲ್ಲದ ಇಂತಹ ರಾಜಕಾರಣಿಗಳಿಂದ‌, ಜಿ.ಪಂ ಸದಸ್ಯರುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?ಎನ್ನುವುದು ಪರಿಸರ ಪ್ರಿಯರ ಆಕ್ರೋಶ. ಪ್ರಾಮಾಣಿಕ‌ ದಕ್ಷ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಬೆಲೆ ಇಲ್ಲ ಎನ್ನುವುದು ಸಾಬೀತಾಗಿದೆ. ಅಧಿಕಾರ ಸ್ವೀಕರಿಸಿದ ಮೂರೇ ತಿಂಗಳಲ್ಲಿ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡುತ್ತಾರೆಂದಾದರೆ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಅನ್ನುವುದು ಅರಿವಿಗೆ ಬರುತ್ತದೆ.