ಶ್ರೀರಾಮ್ ಕ್ರಿಕೆಟರ್ಸ್ ಹೆಮ್ಮಾಡಿ: ಸಂಪತ್ ಟ್ರೋಫಿ ಉದ್ಘಾಟನೆ

ಕುಂದಾಪುರ: ಗ್ರಾಮೀಣ ಭಾಗದ ಪ್ರತಿಭೆಗಳು ದೇಶಮಟ್ಟಕ್ಕೆ ಪರಿಚಯವಾಗುವುದು ಇಂತಹ ಕ್ರೀಡಾಕೂಟಗಳಿಂದಲೇ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಇಂತಹ ಕ್ರೀಡಾಕೂಟಗಳು ಹೆಚ್ಚೆಚ್ಚಾಗಿ ನಡೆಯುತ್ತಿರಲಿ ಎಂದು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಆರ್ ನಾಯ್ಕ್ ಹೇಳಿದರು.
ಅವರು ಭಾನುವಾರ ಇಲ್ಲಿನ ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಗಲಿದ ಗೆಳೆಯನ‌ ನೆನಪಿಗಾಗಿ ಶ್ರೀರಾಮ್ ಕ್ರಿಕೆಟರ್ಸ್ ಹೆಮ್ಮಾಡಿ ಆಯೋಜಿಸಿದ ಸಂಪತ್ ಟ್ರೋಫಿ-2020 ರ ಕ್ರಿಕೆಟ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ದೇಶವನ್ನು ಪ್ರತಿನಿಧಿಸಿ ಕ್ರಿಕೆಟ್ ಆಡುತ್ತಿರುವ ಆಟಗಾರರು ಇಂತಹ ಮೈದಾನದಲ್ಲಿ ಆಡಿ ಸಾಧನೆ ಮಾಡಿ ಈ ಹಂತಕ್ಕೆ ತಲುಪಿದ್ದಾರೆ. ಇಂತಹ ಅವಕಾಶವನ್ನು ಎಲ್ಲಾ ಕ್ರೀಡಾಪಟುಗಳು ಚೆನ್ನಾಗಿ ಬಳಸಿಕೊಳ್ಳಬೇಕು. ತನ್ಮೂಲಕ ತಮ್ಮೊಳಗಿರುವ ಒಬ್ಬ ಉತ್ತಮ ಅಟಗಾರನನ್ನು ಹೊರತರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮೈಕಲ್ ಸಾಸ್ತಾನ, ನಿವೃತ್ತ ಶಿಕ್ಷಕ ಶಂಕರ ಮಡಿವಾಳ, ನಿತೇಶ್ ಪೂಜಾರಿ, ಶಿಕ್ಷಕ‌ ಉದಯ್ ಬಳೆಗಾರ್, ಉದಯ್ ದೇವಾಡಿಗ ಕಟ್ಟು, ಸಂತೋಷ್ ಪೂಜಾರಿ ಚಕ್ರೇಶ್ವರಿ, ಶ್ರೀರಾಮ್ ಕ್ರಿಕೆಟ್ ತಂಡದ ನಾಯಕ ಸುರೇಶ್ ಪೂಜಾರಿ ಅರೆಕಲ್ಲುಮನೆ ಉಪಸ್ಥಿತರಿದ್ದರು.
ಶ್ರೀಕಾಂತ ಹೆಮ್ಮಾಡಿ ಪ್ರಸ್ತಾಪಿಸಿ ಸ್ವಾಗತಿಸಿದರು, ಶ್ರೀರಾಮ್’ನ ನಾಗೇಂದ್ರ ಧನ್ಯವಾದವಿತ್ತರೆ, ವಸಂತ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿದರು.