ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ: ಹಿರಿಯ ವಿದ್ಯಾರ್ಥಿ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ
ಹಿರಿಯಡಕ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಭೆಯು ಫೆ.16 ರಂದು ಹಿರಿಯ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುರೇಶ್ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ವಿವರಗಳು: ಗೌರವ ಸಲಹೆಗಾರರು: ಅಶೋಕ ಆಚಾರ್ಯ, ಸಂದೇಶ.ಟಿ.ವಿ, ರವೀಂದ್ರ, ವಿಘ್ನೇಶ್. ಅಧ್ಯಕ್ಷರು: ಸುರೇಶ್ ನಾಯ್ಕ್, ಉಪಾಧ್ಯಕ್ಷರು: ಅಶ್ವಿನಿ, ಪ್ರಧಾನ ಕಾರ್ಯದರ್ಶಿ: ದೀಪಕ್, ಕೋಶಾಧಿಕಾರಿ: ಚಂದ್ರಶೇಖರ, ಆಂತರಿಕ ಲೆಕ್ಕ ಪರಿಶೋಧಕರು: ದೀಪಾ, […]
ಫೆ.23: ಕೃಷಿಕ ಸಂಘದ ಆಶ್ರಯದಲ್ಲಿ 24ನೇ ‘ರೈತ ಸಮಾವೇಶ–2020’
ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ 24ನೇ ‘ರೈತ ಸಮಾವೇಶ–2020’ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಫೆ. 23ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾವೇಶದಲ್ಲಿ ಕೃಷಿ ಮಾಹಿತಿ ಶಿಬಿರ ಹಾಗೂ ಆಧುನಿಕ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ, ಸಲಕರಣೆ, ವಿವಿಧ ತಳಿಯ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಳಿಗ್ಗೆ 10ಗಂಟೆಗೆ ಸಮಾವೇಶವನ್ನು ಉದ್ಘಾಟಿಸುವರು ಎಂದರು. ಕರ್ಣಾಟಕ […]
ಫೆ.19: ಛತ್ರಪತಿ ಶಿವಾಜಿ ಜಯಂತಿ
ಉಡುಪಿ ಫೆಬ್ರವರಿ 17: ಜಿಲ್ಲಾಡಳಿತದ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಜಯಂತಿ ಕಾರ್ಯಕ್ರಮವು ಫೆಬ್ರವರಿ 19 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮೀಡಿಯಾ ಮಂಥನ್’ ಮಾಧ್ಯಮೋತ್ಸವದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್ಸ್
ಮೂಡಬಿದ್ರೆ:ಸೈಂಟ್ಅಲೋಷಿಯಸ್ ಕಾಲೇಜು ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ‘ಮೀಡಿಯಾ ಮಂಥನ್’ ಮಾಧ್ಯಮೋತ್ಸವದಲ್ಲಿ ಸತತವಾಗಿ ಮೂರನೇ ಬಾರಿ ಆಳ್ವಾಸ್ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ವರದಿಗಾರಿಕೆಯಲ್ಲಿ ದುರ್ಗಾಪ್ರಸನ್ನಾ ಪ್ರಥಮ, ಆರ್.ಜೆ ಸ್ಪರ್ಧೆಯಲ್ಲಿ ದಿಶಾ ಶೆಟ್ಟಿ ದ್ವಿತೀಯ, ಪಿ ಟು ಸಿಯಲ್ಲಿ ಚೈತ್ರಾ ಪ್ರಥಮ, ನೃತ್ಯದಲ್ಲಿ ವೀಕ್ಷಿತಾ ಶೆಟ್ಟಿ ಮತ್ತು ತಂಡ ಪ್ರಥಮ, ಫೊಟೋಗ್ರಾಫಿಯಲ್ಲಿ ಶರದ್ಆಚಾರ್ ದ್ವಿತೀಯ, ಮೇಕಿಂಗ್ ಎ ಪ್ರೊಡಕ್ಟ್ ಶ್ರೀಲಕ್ಷ್ಮಿ ಘಾಟೆ ಮತ್ತು ತಂಡ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಪಡೆದುಕೊಂಡರು.
ಕುಂದಾಪುರ: ಹಿಂದೂ ರುದ್ರಭೂಮಿಯಲ್ಲಿ ಸಾರ್ವಜನಿಕ ತೆರೆದ ಬಾವಿ ನಿರ್ಮಾಣ: ಸ್ಥಳೀಯರಿಂದ ಭಾರೀ ವಿರೋಧ
ಕುಂದಾಪುರ: ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ಇಲ್ಲಿನ ಹೆಮ್ಮಾಡಿ ಸಮೀಪದ ಸಂತೋಷನಗರ ಹಿಂದೂ ರುದ್ರಭೂಮಿ ಆವರಣದೊಳಗೆ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ತೆರೆದ ಬಾವಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಮ್ಮಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ತೆರೆದ ಬಾವಿಗೆ ಇದೀಗ ಅಪಸ್ವರಗಳು ಎದ್ದಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ಸೋಮವಾರ ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. […]