ಕಾರ್ಕಳ: ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಉಪ ಸಮಿತಿಯ ಸಭೆ

ಕಾರ್ಕಳ: ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಇದರ ಕಾರ್ಕಳ ತಾಲೂಕಿನ ಉಪ ಸಮಿತಿಯ ಸಭೆಯು ಕಾರ್ಕಳದ ಕಿಸಾನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ, ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ವಹಿಸಿದ್ದರು. ಉದ್ಯಮಿ ಜೆರಾಲ್ಡ್ ಡಿ’ಸಿಲ್ವ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕಲಾವಿದರಿಗೆ ಸರಸ್ವತಿ ಒಲಿಯುತ್ತಾರೆ. ವಿನ ಲಕ್ಷ್ಮೀ ಒಲಿಯುವುದು ಅಪರೂಪ, ಈ ನಿಟ್ಟಿನಲ್ಲಿ ಕಲಾವಿದರ ಭದ್ರತೆಗಾಗಿ ಸಂಘಟನೆ ಅಗತ್ಯ. ಇದರೊಂದಿಗೆ ಹವ್ಯಾಸಿ ಕಲಾವಿದರನ್ನು ಸೇರಿಸಬೇಕಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಮಿಯ್ಯಾರು ಪ. ಸದಸ್ಯರಾದ […]

ಕಂಬಳ ವೀರ ಶ್ರೀನಿವಾಸ ಗೌಡರಿಗೆ ಮುಖ್ಯಮಂತ್ರಿ ಗಳಿಂದ ಗೌರವ

ಉಡುಪಿ: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಓಟ ಓಡಿರುವ ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಸೋಮವಾರ ಕಾರ್ಮಿಕ ಇಲಾಖೆಯಿಂದ 3 ಲಕ್ಷ ರೂ. ಚೆಕ್ ಮುಖ್ಯಮಂತ್ರಿ  ಬಿ‌.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಮುಳ್ಳೂರು-ಕುದುರೆಮುಖ ರಸ್ತೆ ಅಗಲೀಕರಣ ಮಾಡಿ,ಬಂಡೆ ಒಡೆದರೆ ಕುದುರೆಮುಖವೂ ಚಾರ್ಮಾಡಿಯಂತಾಗುತ್ತೆ ಎಚ್ಚರ !

ಮೊನ್ನೆ ಕುದುರೆಮುಖದ ರಾಷ್ಟ್ರೀಯ ಉದ್ಯಾವನದ  ರಸ್ತೆಯಲ್ಲಿ ಬಂಡೆಗೆ ಬಸ್ ಹೊಡೆದು ಅಫಘಾತ ನಡೆದದ್ದೇ ತಡ, ಈ ಬಂಡೆಗಳನ್ನು ತೆಗೆದು ಇಡೀ ರಸ್ತೆ ಅಗಲೀಕರಣ ಮಾಡಬೇಕು ಎಂದು ಬೊಬ್ಬಿಡುವವರು ಜಾಸ್ತಿಯಾಗಿದ್ದಾರೆ. ಕೆಲವೊಂದು ಪತ್ರಿಕಾ ಮಾಧ್ಯಮಗಳಂತೂ ಆ ಬಂಡೆಗಲ್ಲಿನ ಹಿಂದೆ ಬಿದ್ದು ಅಗಲೀಕರಣ ಆಗದಿದ್ದರೆ  ವಾಹನ ಚಾಲಕರೆಲ್ಲಾ ಸಾಯುತ್ತಾರೆ ಎನ್ನುವ ಧ್ವನಿಯಲ್ಲಿ ವರದಿ ಬರೆಯುತ್ತಿವೆ. ಆದರೆ ಇಲ್ಲಿ ಅಗಲೀಕರಣವಾದರೆ, ರಕ್ಷಾಕವಚವಾದ ಬಂಡೆ ತೆಗೆದರೆ ಇಡೀ ಕುದುರೆಮುಖ ಯಾಕೆ?ಕುದುರೆಮುಖ ಸುತ್ತಲಿನ ಊರುಗಳಿಗೆ ಆಪತ್ತು ಕಾದಿದೆ ಎಂದು ಎಚ್ಚರಿಸುವುದನ್ನು ಆ ಮಾಧ್ಯಮಗಳು ಮರೆತಿವೆ. […]

ಸಾಣೂರು: ಜಿಲ್ಲಾ ಮಟ್ಟದ ಅಂತರ್ ಯುವ ಮಂಡಲಗಳ ಕ್ರೀಡಾಕೂಟ

ಕಾರ್ಕಳ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಿಲ್ಲಾ ಯುವ ಪ್ರಶಸ್ತಿ ವಿಜೇತ ಯುವಕ ಮಂಡಲ ಸಾಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಂತರ್ ಯುವ ಮಂಡಲಗಳ ಕ್ರೀಡಾಕೂಟ ಪ್ರಕೃತಿ ನ್ಯಾಷನಲ್ ಸ್ಕೂಲ್ ಮೈದಾನ ಸಾಣೂರು ಇಲ್ಲಿ ಪೆಬ್ರವರಿ 16 ರಂದು ನಡೆಯಿತು. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರು ಅಂತರಾಷ್ಟ್ರೀಯ  ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಕ್ರೀಡಾಕೂಟವನ್ನು ಉದ್ಘಾಟಿಸಿ […]

ಐಪಿಎಲ್ 2020: ಆರ್ ಸಿಬಿ ಹೊಸ ಲೋಗೋ ಬಿಡುಗಡೆ

ಐಪಿಎಲ್ 2020 ಆವೃತ್ತಿ ಮಾರ್ಚ್ 29 ರಿಂದ ಪ್ರಾರಂಭವಾಗುತ್ತಿದ್ದು. ಇದಕ್ಕೆ ಮುನ್ನ ಆರ್. ಸಿ.ಬಿ. ತನ್ನ ಹೊಸ ಲೋಗೋವನ್ನು ಬಿಡುಗಡೆಗೊಳಿಸಿದೆ. ಈ ಬಗ್ಗೆ ಆರ್ ಸಿಬಿಯ ಅಧ್ಯಕ್ಷ ಸಂಜೀವ್ ಚುರಿವಾಲ ಮಾತನಾಡಿದ್ದು, ನಮ್ಮ ಲೋಗೋವಿನಲ್ಲಿ ತಂಡದ ಆಕ್ರಮಣಕಾರಿ ಕ್ರೀಡಾ ಮನೋಭಾವ, ಕ್ರೀಡಾಭಿಮನಿಗಳನ್ನು ನಿರಂತರವಾಗಿ ರಂಜಿಸುವ ಅಂಶಗಳು ಕಾಣಸಿಗುತ್ತವೆ ಎಂದು ಹೇಳಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗಿ 12 ವರ್ಷ ಕಳೆದರು, ಇದುವರೆಗೂ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ. ಶುಕ್ರವಾರ ಆರ್‌ಸಿಬಿ ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಿದ್ದು, ತನ್ನ […]