ಭಾಷೆಯ ಮೇಲಿನ ಪ್ರೀತಿ ಅಭಿಮಾನ ಭಾಷಾ ಬೆಳವಣಿಗೆಗೆ ಪೂರಕ: ರಜನಿ ವಿ. ಪೈ
ಉಡುಪಿ: ಮಾತೃಭಾಷೆಯ ಮೇಲಿನ ಪ್ರೀತಿ ಹಾಗೂ ಆಡು ಭಾಷೆಯ ಮೇಲೆ ಅಭಿಮಾನ ಭಾಷಾ ಬೆಳವಣಿಗೆ ಪೂರಕ ಎಂದು ಮುಂಬೈ ಕನ್ನಡ ಸಂಘದ ಕಾರ್ಯಾಧ್ಯಕ್ಷೆ ರಜನಿ ವಿ. ಪೈ ಹೇಳಿದರು. ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ, ಪುತ್ತೂರು ಸಾಹಿತ್ಯ ವೇದಿಕೆ ಮತ್ತು ಟೈಮ್ಸ್ ಆಫ್ ಕುಡ್ಲ ಹಾಗೂ ಕಥಾಬಿಂದು ಪ್ರಕಾಶನದ ಸಹಯೋಗದೊಂದಿಗೆ ಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬಹುಭಾಷಾ ಕವಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಪಿ ಇಲ್ಲದೇ ಭಾಷೆ, ಸಾಹಿತ್ಯ ಬೆಳೆಯುವುದಿಲ್ಲ ಎನ್ನುವುದು […]
ಕುಂದಾಪುರ: ಶಿಕ್ಷಕಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ: ಎಸ್ಡಿಎಂಸಿ ಅಧ್ಯಕ್ಷ ಸೆರೆ
ಕುಂದಾಪುರ: ಇಲ್ಲಿನ ಉಪ್ಪುಂದ ಸರ್ಕಾರಿ ಉರ್ದು ಶಾಳಾ ಶಿಕ್ಷಕಿ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪುಂದ ನಿವಾಸಿ, ಪ್ರಸ್ತುತ ಉಪ್ಪುಂದ ಸರ್ಕಾರಿ ಉರ್ದು ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಮೋಹನ್ ಚಂದ್ರ (೪೧) ಬಂಧಿತ ಆರೋಪಿ. ಆರೋಪಿಗೆ ತಲೆಮರೆಸಿಕೊಳ್ಳಲು ಸಹಾಯ ನೀಡಿದ ಆರೋಪದ ಮೇಲೆ ಗಂಗಾಧರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಪ್ರಕರಣದ ವಿವರ: ಇಲ್ಲಿನ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಅವರಿಗೆ ಆರೋಪಿ ಮೋಹನ್ಚಂದ್ರ ಅವ್ಯಾಚ್ಯ ಶಬ್ದಗಳಿಂದ […]
ಕುಂದಾಪುರ: ಹಾಡಹಗಲೇ ಮಾರಕಾಯುಧಗಳಿಂದ ಕೊಚ್ಚಿ ಬರ್ಬರ ಹತ್ಯೆ
ಕುಂದಾಪುರ: ಮಟಮಟ ಮಧ್ಯಾಹ್ನ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಕೊಲೆಗೈದ ದಾರುಣ ಘಟನೆ ಇಲ್ಲಿನ ಹಟ್ಟಿಯಂಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲ್ಕಂಬ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಕಂಡ್ಲೂರು ಸಮೀಪದ ವಾಲ್ತೂರು ಗ್ರಾಮದ ಜೋರ್ಮಕ್ಕಿಯ ನರಸಿಂಹ ಶೆಟ್ಟಿಯವರ ಪುತ್ರ ಬಾಬು ಶೆಟ್ಟಿ (೫೫) ಕೊಲೆಯಾದ ದುರ್ದೈವಿ. ಟೆಂಪೋ ಮಾಲಕರಾಗಿರುವ ಬಾಬು ಶೆಟ್ಟಿ ಕೃಷಿಚಟುವಟಿಕೆಗಳಿಗೆ ಗೊಬ್ಬರ ಸಾಗಾಟ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಮನೆಯ ತೋಟಗಳಿಗೆ ನೀರು ಹಾಯಿಸಿ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ […]
ಆಚಾರ್ಯ ಏಸ್ ನಲ್ಲಿ ಫೆ. 25ರಿಂದ ಪಿಯುಸಿ ವೆಕೇಶನ್ ಬ್ಯಾಚ್ ಆರಂಭ
ಉಡುಪಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ, ತರಬೇತಿ ನೀಡುತ್ತಿರುವ ಆಚಾರ್ಯ ಏಸ್ ಸಂಸ್ಥೆಯಿಂದ ಪ್ರೌಢಶಾಲೆ ಮತ್ತು ಪಿಯುಸಿ ತರಗತಿಗಳಿಗೆ ಸಂಬಂಧಿಸಿದ ವೇಕೇಶನ್ ಬ್ಯಾಚ್ ಫೆ.25ರಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳ ವಾರ್ಷಿಕ ರಜಾದಿನಗಳಲ್ಲಿ ಈ ತರಬೇತಿ ಜರಗಲಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ. ಯಾವಾಗ ತರಗತಿ? ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಫೆ. 25ರಿಂದ ಆರಂಭವಾಗಿ ಮೇ ತಿಂಗಳವರೆಗೆ ಜರಗಲಿದೆ. ಹಾಗೆಯೇ ಜೆಇಇ ಮತ್ತು ನೀಟ್ ತರಗತಿಯು ಮಾರ್ಚ್ ಮೊದಲ […]
ಕಲ್ಲಡ್ಕ ಶಾಲಾ ಕ್ರೀಡೋತ್ಸವದಲ್ಲಿ ಬಾಬರಿ ಮಸೀದಿ ಘಟನೆ ಮರುಸೃಷ್ಟಿ ವಿವಾದ: ಡಾ. ಪ್ರಭಾಕರ ಭಟ್ ಸ್ಪಷ್ಟನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಕಡ್ಕ ಶಾಲಾ ಮಕ್ಕಳ ಕ್ರೀಡೋತ್ಸವದಲ್ಲಿ ಬಾಬ್ರಿ ಮಸೀದಿ ಘಟನೆ ಮರುಸೃಷ್ಠಿಯ ವಿಷಯಕ್ಕೆ ಸಂಬಂಧಿಸಿ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಸ್ಪಷ್ಟನೆ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಪ್ರಮುಖ ಘಟನೆಗಳನ್ನು ಇಲ್ಲಿ ಪ್ರದರ್ಶನ ಮಾಡ್ತಿದ್ದೇವೆ. ಸರ್ಜಿಕಲ್ ಸ್ಟ್ರೈಕ್, ಮಂಗಳಯಾನ ಮೊದಲ ಪ್ರತೀ ಘಟನೆ ತೋರಿಸಿದ್ದೇವೆ. ಈ ಬಾರಿ ರಾಮಮಂದಿರ ವಿಷಯವೇ ಪ್ರಮುಖವಾಗಿದ್ದು, ಅದನ್ನ ತೋರಿಸಲಾಗಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಹೇಳಿದ ಐತಿಹಾಸಿಕ ಘಟನೆಯನ್ನ ನಾವು ತೋರಿಸಿದ್ದೇವೆ ಅಷ್ಟೇ, […]