ನಿಟ್ಟೆ ಹಾಗೂ ಆವಿಷ್ಕ್ ಸಂಸ್ಥೆ ನಡುವೆ ಶೈಕ್ಷಣಿಕ ಒಪ್ಪಂದ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಆವಿಷ್ಕ್ ಸಸ್ಟೈನೇಬಲ್ ಸೊಲ್ಯೂಶನ್ ಪ್ರೈ.ಲಿ ನಡುವಿನ ಶೈಕ್ಷಣಿಕ ಒಪ್ಪಂದದ ಹಸ್ತಾಂತರ ಕಾರ್ಯಕ್ರಮವು ಡಿ.17 ರಂದು ಕಾಲೇಜಿನಲ್ಲಿ ನಡೆಯಿತು. ಒಪ್ಪಂದದ ಪ್ರಮಾಣಪತ್ರಕ್ಕೆ ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ಪ್ರಾಂಶುಪಾಲ ಡಾ| ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಆವಿಷ್ಕ್ ಸಸ್ಟೈನೇಬಲ್ ಸೊಲ್ಯೂಶನ್ ಪ್ರೈ.ಲಿ ವತಿಯಿಂದ ಸಂಸ್ಥೆಯ ಸ್ಥಾಪಕ ತೇಜಸ್ ಎಂ ಸಾತಿ ಸಹಿಹಾಕಿದರು. ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ.ಆರ್, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ಲೇಸ್ಮೆಂಟ್ […]

ಶ್ರೀ ಕೃಷ್ಣ ಮಠ:ಕವಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪುತ್ತೂರು ಸಾಹಿತ್ಯ ವೇದಿಕೆ,ಟೈಮ್ಸ್ ಆಫ್ ಕುಡ್ಲ,ಕಥಾಬಿಂದು ಪ್ರಕಾಶನದವರು ಪ್ರಸ್ತುತ ಪಡಿಸಿದ ವಿಶ್ವ ಬಹುಭಾಷಾ ಕವಿ ಸಾಹಿತ್ಯ ಸಮ್ಮೇಳನವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು.

ಉಡುಪಿ: ಅಂಗನವಾಡಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಅಂಗನವಾಡಿ ಒಳಗೆ ಶಿಸ್ತಿನಿಂದ ಒಳಬಂದವರನ್ನು ಪಿಳಿಪಿಳಿ ಕಣ್ಣಿಬಿಟ್ಟು ನೋಡುತ್ತಿದ್ದ ಮುದ್ದುಮಕ್ಕಳು ಒಂದೆಡೆಯಾದರೆ, ಒಳಬಂದ ಅಧಿಕಾರಿಯನ್ನು ಕಂಡು ಹೆದರಿ ಬೆವರುತ್ತಿದ್ದ ಅಂಗನವಾಡಿ ಸಹಾಯಕಿ ಇನ್ನೊಂದೆಡೆ, ಈ ದೃಶ್ಯ ಕಂಡು ಬಂದದ್ದು, ಕಾರ್ಕಳ ತಾಲೂಕಿನ ಸೂಡ ಗ್ರಾಮದ ಕಾಪಿಕಾಡು ಅಂಗನವಾಡಿ ಕೇಂದ್ರದಲ್ಲಿ, ಈ ಅಂಗನವಾಡಿಯೊಳಗೆ ಶಿಸ್ತಿನಿಂದ ಬಂದ ಅಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು. ಮಂಗಳವಾರ ಕಾರ್ಕಳ ತಾಲೂಕಿನ ಸೂಡದಲ್ಲಿ ಸ್ಥಳ ಪರಿಶೀಲನೆಗಾಗಿ, ಉಡುಪಿಯಿಂದ ಬೆಳಗ್ಗೆಯೇ ತೆರಳಿದ್ದ, ಜಿಲ್ಲಾಧಿಕಾರಿ ಜಿ.ಜಗದೀಶ್, ತಮ್ಮ ಬಿಡುವಿಲ್ಲದ ಕಾರ್ಯದ ನಡುವೆಯೇ, ಮಾರ್ಗಮಧ್ಯೆ […]