ಕಲ್ಲಡ್ಕ ಶಾಲಾ‌ ಕ್ರೀಡೋತ್ಸವದಲ್ಲಿ ಬಾಬರಿ‌ ಮಸೀದಿ ಘಟನೆ ಮರುಸೃಷ್ಟಿ ವಿವಾದ: ಡಾ. ಪ್ರಭಾಕರ ಭಟ್ ಸ್ಪಷ್ಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಕಡ್ಕ ಶಾಲಾ ಮಕ್ಕಳ ಕ್ರೀಡೋತ್ಸವದಲ್ಲಿ ಬಾಬ್ರಿ ಮಸೀದಿ ಘಟನೆ ಮರುಸೃಷ್ಠಿಯ‌ ವಿಷಯಕ್ಕೆ ಸಂಬಂಧಿಸಿ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಸ್ಪಷ್ಟನೆ ನೀಡಿದ್ದಾರೆ.
ನಾವು ಹಲವು ವರ್ಷಗಳಿಂದ ಪ್ರಮುಖ ಘಟನೆಗಳನ್ನು ಇಲ್ಲಿ ಪ್ರದರ್ಶನ ಮಾಡ್ತಿದ್ದೇವೆ. ಸರ್ಜಿಕಲ್ ಸ್ಟ್ರೈಕ್, ಮಂಗಳಯಾನ ಮೊದಲ ಪ್ರತೀ ಘಟನೆ ತೋರಿಸಿದ್ದೇವೆ.
ಈ ಬಾರಿ ರಾಮಮಂದಿರ ವಿಷಯವೇ ಪ್ರಮುಖವಾಗಿದ್ದು, ಅದನ್ನ ತೋರಿಸಲಾಗಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಹೇಳಿದ ಐತಿಹಾಸಿಕ ಘಟನೆಯನ್ನ ನಾವು ತೋರಿಸಿದ್ದೇವೆ ಅಷ್ಟೇ, ಕೋಮುಭಾವನೆ ಪ್ರಚೋದಿಸೋ ಯಾವುದೇ ಕೆಲಸ ನಾವು ಮಾಡಿಲ್ಲ.
ಬಾಬರ್ ಒಬ್ಬ ವಿದೇಶಿಗ, ಅವನಲ್ಲಿ ಆಸಕ್ತಿ ಯಾಕೆ? ಆ ಘಟನೆ ಸಮರ್ಥನಿಯ ಅಂತ ಹೇಳಿಲ್ಲ, ಐತಿಹಾಸಿಕ ಘಟನೆ ತೋರಿಸಿದ್ದೇವೆ. ಆ ಬಗ್ಗೆ ನನಗೆ ಸಮಾಧಾನವಿದೆ, ಐತಿಹಾಸಿಕ ಘಟನೆ ಮುಂದಿನ ಪೀಳಿಗೆಗೆ ತೋರಿಸಬೇಕಿದೆ. ನೈಜ ಘಟನೆ ತೋರಿಸಿದ್ದೇವೆ. ಅದರಲ್ಲಿ ಎಲ್ಲೂ ನಾವು ಸುಳ್ಳು ಹೇಳಿಲ್ಲ. ನಮಗೆ ಮುಸಲ್ಮಾನರು ವಿರೋಧಿಗಳಲ್ಲ, ಅವರ ಬಗ್ಗೆ ವಿರೋಧವಿಲ್ಲ. ನಮಗೆ ಅಬ್ದುಲ್ ಕಲಾಂ, ಚಾರ್ಜ್ ಫೆರ್ನಾಂಡಿಸ್ ಸಂತಾನ ಬೆಳೆಯಬೇಕು. ಅಜ್ಮಲ್ ಕಸಬ್, ಅಫ್ಜರ್ ಗುರುನಂಥವರು ನಮಗೆ ಬೇಡ ಅಂತ ಹೇಳಿದ್ದಾರೆ. ಈ ದೇಶದಲ್ಲಿ ಪಾಕಿಸ್ತಾನ, ಬಾಂಗ್ಲಾ ಪರವಾಗಿ ಮಾತನಾಡೋರು ನಮಗೆ ಬೇಡ. ಐತಿಹಾಸಿಕ ಘಟನೆ ತೋರಿಸಿದ್ದೇವೆ, ಅದನ್ನ ನಾವು ತಿರುಚಿಲ್ಲ. ಕಿರಣ್ ಬೇಡಿ ಕೂಡ ನಮ್ಮ ಈ ಕಾರ್ಯಕ್ರಮ ನೋಡಿ ಮೆಚ್ಚಿದ್ದಾರೆ. ಕೋಮುಭಾವನೆ ಕೆರಳಿಸುವವರ ಕೃತ್ಯಗಳಿಗೆ ನಮ್ಮ ಧಿಕ್ಕಾರವಿದೆ ಎಂದು ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಹೇಳಿದ್ದಾರೆ