ಅಯೋಧ್ಯೆ ರಾಮ ಜನ್ಮಭೂಮಿ ಕುರಿತು ಸುಪ್ರೀಂ ತೀರ್ಪಿಗೆ ಗೌರವ ನೀಡಬೇಕು: ಪೇಜಾವರ ಶ್ರೀ

ಉಡುಪಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ಪ್ರಕಟಿಸಲಿರುವ ತೀರ್ಪಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ಗೌರವ ನೀಡಬೇಕು. ಶಾಂತಿಗೆ ಭಂಗ ತರುವಂತಹ ವಿಜಯೋತ್ಸವ ಅಥವಾ ಪ್ರತಿಭಟನೆ ಮಾಡಬಾರದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ. ಗುರುವಾರ ಪೇಜಾವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ಇದೇ 15ರೊಳಗೆ ತೀರ್ಪು ಬರುವ ವಿಶ್ವಾಸವಿದೆ. ಅಲ್ಲದೆ, ತೀರ್ಪು ಹಿಂದೂಗಳ ಪರವಾಗಿ ಬರುವ ವಿಶ್ವಾಸವಿದೆ. ಆದರೆ, ಅದನ್ನು ನಿಶ್ಚಿತವಾಗಿ ಹೇಳುವುದು […]

ಕುಂದಾಪುರ: ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಸಚಿವರಿಗೆ ಮನವಿ

ಕುಂದಾಪುರ: ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯಿಂದ ರೈಲು ನಿಲ್ದಾಣ ಮೇಲ್ದರ್ಜೆಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈಲ್ವೆ ಇಲಾಖೆಗೆ ನಿರ್ದೇಶನ ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಧಾರ್ಮಿಕ ಯಾತ್ರಾಸ್ಥಳ ಕೇಂದ್ರಿತ ನಿಲ್ದಾಣವಾಗಿ ಬೆಳೆದಿರುವ ಕುಂದಾಪುರ ರೈಲು ನಿಲ್ದಾಣಕ್ಕೆ ಅಂತ್ಯದ ತುರ್ತಾಗಿ ಬೇಕಿರುವ ಸ್ನಾನಗೃಹ  ಸಹಿತ ಪ್ರತ್ಯೇಕ ಪುರುಷ ಮತ್ತು ಸ್ತ್ರೀಯರ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲು ಧಾರ್ಮಿಕ ದತ್ತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಅನುಧಾನವನ್ನ ಒದಗಿಸಲು ಮನವಿ ಸಲ್ಲಿಸಲಾಯಿತು. […]

ನ.8: “ಜಬರ್ದಸ್ತ್ ಶಂಕರ್” ತುಳುಚಿತ್ರ ಬಿಡುಗಡೆ

ಉಡುಪಿ: ಜಲನಿಧಿ ಫಿಲಂಸ್‌ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ‘ಜಬರ್ದಸ್ತ್‌ ಶಂಕರ್‌’ ತುಳುಚಿತ್ರ ಇದೇ 8ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರಿನ ಬಿಗ್‌ ಸಿನಿಮಾಸ್‌, ಪಿವಿಆರ್‌, ಸಿನಿಪೊಲಿಸ್‌ ಮಲ್ಟಿಪ್ಲೆಕ್ಸ್‌ಗಳು, ಉಡುಪಿಯ ಆಶೀರ್ವಾದ್‌, ಮಣಿಪಾಲದ ಐನಾಕ್ಸ್‌, ಬಿಗ್‌ ಸಿನಿಮಾಸ್‌, ಕಾರ್ಕಳದ ಪ್ಲಾನೆಟ್‌ ಸೇರಿದಂತೆ ಕರಾವಳಿಯ 14 ಕೇಂದ್ರಗಳು ಹಾಗೂ ವಿದೇಶಗಳಾದ ಒಮನ್‌, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳ 14 […]

ಮಂಗಳೂರು: ವಿವಿಧೆಡೆ ಅನಧಿಕೃತ ಅಂಗಡಿಗಳ ತೆರವು

ಮಂಗಳೂರು: ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ರಸ್ತೆಯ ಕಬಕದಲ್ಲಿ ನಡೆಯಿತು. ಅನಧಿಕೃತ ಅಂಗಡಿಗಳ ತೆರವು ಕುರಿತು ಗ್ರಾಮ ಪಂಚಾಯತ್ ಈ ಹಿಂದೆ ನೋಟೀಸ್ ನೀಡಿತ್ತು. ಆದರೆ ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿತ್ತು. ಕೋರ್ಟ್ ಆದೇಶದಂತೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಪುತ್ತೂರು ತಹಶೀಲ್ದಾರ್‌ ರ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿಯಿಂದ ಅಂಗಡಿಗಳ ತೆರವು ಕಾರ್ಯಾಚರಣೆ ಬೆಳಿಗ್ಗೆ ಗಂಟೆ ಆರಕ್ಕೆ ನಡೆಯಿತು. ಸುಮಾರು 12 ಅಂಗಡಿಗಳನ್ನು ತೆರವು […]

ಭಿಕ್ಷೆ ಬೇಡುವ ನೆಪದಲ್ಲಿ ಮನೆಯೊಂದರ ತೆಂಗಿನಕಾಯಿ ಗೋಣಿಯನ್ನೇ ಕದ್ದೊಯ್ಯಿದ ಮಹಿಳೆ!

ಉಡುಪಿ, ನ.7: ಕಾಪು ಪರಿಸರದಲ್ಲಿ ನ.6ರಂದು ಮಧ್ಯಾಹ್ನ ವೇಳೆ ಭಿಕ್ಷೆ ಬೇಡುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ಮನೆಯೊಂದರ ಹೊರಗಡೆ ಇರಿಸಿದ್ದ 20ಕ್ಕೂ ಅಧಿಕ ತೆಂಗಿನ ಕಾಯಿಗಳಿದ್ದ ಗೋಣಿಯನ್ನೇ ಕಳವು ಮಾಡಿಕೊಂಡು ಹೋಗಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಸರದಲ್ಲಿ ಭಿಕ್ಷೆ ಬೇಡಿಕೊಂಡು ಬಂದ ಬುರ್ಖಾ ಧರಿಸಿದ್ದ ಮಹಿಳೆ ಬೀಗ ಹಾಕಿರುವ ಮನೆಯೊಂದನ್ನು ಗಮನಿಸಿದಳು. ಮನೆಯ ಹಿಂಬದಿಯಿಂದ ಬಂದ ಆಕೆ ತನ್ನ ಮುಖಕ್ಕೆ ಪರ್ದಾ ಕಟ್ಟಿಕೊಂಡು ತೆಂಗಿನ ಕಾಯಿ ಇರಿಸಿದ್ದ ಗೋಣಿಯನ್ನು ಹೊತ್ತೊಯ್ದಳು. ಅದನ್ನು ಅಲ್ಲೇ ಸಮೀಪದಲ್ಲಿ ಬೀಗ ಹಾಕಿದ […]