ಕುಂದಾಪುರ: ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಸಚಿವರಿಗೆ ಮನವಿ

ಕುಂದಾಪುರ: ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯಿಂದ ರೈಲು ನಿಲ್ದಾಣ ಮೇಲ್ದರ್ಜೆಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈಲ್ವೆ ಇಲಾಖೆಗೆ ನಿರ್ದೇಶನ ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಧಾರ್ಮಿಕ ಯಾತ್ರಾಸ್ಥಳ ಕೇಂದ್ರಿತ ನಿಲ್ದಾಣವಾಗಿ ಬೆಳೆದಿರುವ ಕುಂದಾಪುರ ರೈಲು ನಿಲ್ದಾಣಕ್ಕೆ ಅಂತ್ಯದ ತುರ್ತಾಗಿ ಬೇಕಿರುವ ಸ್ನಾನಗೃಹ  ಸಹಿತ ಪ್ರತ್ಯೇಕ ಪುರುಷ ಮತ್ತು ಸ್ತ್ರೀಯರ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲು ಧಾರ್ಮಿಕ ದತ್ತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಅನುಧಾನವನ್ನ ಒದಗಿಸಲು ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವರು ,ರೈಲ್ವೆ ಇಲಾಖೆ ಸಚಿವರಾದ ಸುರೇಶ್ ಅಂಗಡಿ  ಸೇರಿದಂತೆ ಪ್ರವಾಸೋದ್ಯಮ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳವ ಬಗ್ಗೆ ಭರವಸೆ ನೀಡಿದರು.
ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಪದ್ಮನಾಭ ಶೆಣೈ, ಸಂಚಾಲಕ ವಿವೇಕ್ ನಾಯಕ್, ಕೋಶಾಧಿಕಾರಿ ಉದಯ ಭಂಡಾರ್ಕರ್, ಗೌರವ ಸಲಹೆಗಾರರಾದ ಜಾಯ್ ಕರ್ವೆಲ್ಲೋ, ರಾಘವೇಂದ್ರ ಶೇಟ್, ಸದಾಶಿವ ಶೆಣೈ, ಲೋಹಿತ್ ಬಂಗೇರ, ಭರತ್ ಬಂಗೇರ, ಹಂಗಳೂರು ಪಂಚಾಯತ್ ಸದಸ್ಯ ನಾಗರಾಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.