ರಾಜಕಾರಣಿಗಳು ತಮ್ಮ ಸಂಪತ್ತು ವೃದ್ದಿಸಲು ಗಮಹರಿಸಿರುವುದು‌ ದೇಶದ ಆರ್ಥಿಕ ಕುಸಿತಕ್ಕೆ ಕಾರಣ: ಕೋಟ್ಯಾರ್

ಉಡುಪಿ: ರಾಜಕಾರಣಿಗಳು ದೇಶದ ಆರ್ಥಿಕ ಸುಧಾರಣೆ ಮಾಡುವ ಬದಲು ತಮ್ಮ ಸಂಪತ್ತು ವೃದ್ಧಿಸುವ ಕಡೆಗೆ ಹೆಚ್ಚು ಗಮನಹರಿಸುತ್ತಿದ್ದು, ಇದೇ ಭಾರತದ ಇಂದಿನ ಆರ್ಥಿಕತೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾಸ್‌ ಇಂಡಿಯಾ ಎನ್‌ಜಿಓ ಕರ್ನಾಟಕ ಇದರ ಅಧ್ಯಕ್ಷ ಜಿ.ಎ. ಕೋಟ್ಯಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶದ ಆರ್ಥಿಕತೆಯೂ ಶೇ. 50ರಷ್ಟು ಕುಸಿದಿದೆ. ಆದರೆ ಸರ್ಕಾರದ ಒತ್ತಡ ಹಾಗೂ ಬೆದರಿಕೆಯಿಂದ ಅರ್ಥಶಾಸ್ತ್ರಜ್ಞರು, ಹಣಕಾಸಿನ ತಜ್ಞರು ಈ ಬಗ್ಗೆ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಕಳೆದ ಕೆಲವು ವರ್ಷಗಳಿಂದ […]

ಮಕ್ಕಳನ್ನು ಪ್ರತಿಭಾವಂತರಾಗಿ ರೂಪಿಸಲು‌ ಮೌಲ್ಯಗಳನ್ನು ಕಲಿಸಿಕೊಡಬೇಕು: ಡಾ. ನಿಕೇತನ

ಉಡುಪಿ: ಪ್ರಸ್ತುತ ಮಕ್ಕಳನ್ನು ಪ್ರತಿಭಾವಂತ ವ್ಯಕ್ತಿಗಳನ್ನಾಗಿ ರೂಪಿಸಬೇಕಾದರೆ ಒಳ್ಳೆಯ ಶಿಕ್ಷಣದ ಜತೆಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಹಿರಿಯಡಕ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನಾ ಹೇಳಿದರು. ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಆಶ್ರಯದಲ್ಲಿ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭವದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಪ್ರೀತಿಸುವ ಮನೋಭಾವ ಬೆಳೆಸುವುದು ಬಹಳ ಉತ್ತಮವಾದ ಮೌಲ್ಯ. ಅಪ್ಪ–ಅಮ್ಮ,‌ ಸಹೋದರ–ಸಹೋದರಿ, […]

ಸಿದ್ದರಾಮಯ್ಯ ರ ವಿರುದ್ದ ಬಾಲಿಶ ಹೇಳಿಕೆ ಸಲ್ಲದು: ಐವನ್

ಮಂಗಳೂರು: ಡಿಕೆ ಶಿವಕುಮಾರ್ ಬಂಧನಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾರಣ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಐವನ್ ಡಿ’ ಸೋಜಾ, ನಳಿನ್ ಕುಮಾರ್ ಕಟೀಲ್ ಢಮ್ಮಿ ರಾಜ್ಯಾಧ್ಯಕ್ಷನಾಗಿದ್ದು, ಬಿಜೆಪಿ – ಆರ್ ಎಸ್ ಎಸ್ ಒಳಜಗಳದಿಂದಾಗಿ ನಳಿನ್ ನೇಮಕವಾಗಿದೆ ಅಷ್ಟೇ. ರಾಜ್ಯಾಧ್ಯರಾಗಿ ಈ ರೀತಿಯ ಹೇಳಿಕೆ ನೀಡಿವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಿದ್ಧರಾಮಯ್ಯ ವಿರುದ್ಧ ನಳಿನ್ ಲಘವಾಗಿ ಮಾತನಾಡುತ್ತಿದ್ದಾರೆ. […]

ಕುಂದಾಪುರ: ತ್ರಿವಳಿ ತಲಾಖ್ ವಿರುದ್ದ ಮೊದಲ ಪ್ರಕರಣ ದಾಖಲು

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣಕ್ಕೆ ಕುಂದಾಪುರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯಾದ ಮೂಡುಗೋಪಾಡಿಯ ನಿವಾಸಿ  ಅಲ್ಫಿಯಾ ಅಖ್ತರ್ (29) ಎನ್ನುವಾಕೆ ತನ್ನ ಪತಿ ಹಾಗೂ ಆತನ ಕುಟುಂಬಿಕರ ವಿರುದ್ದ ದೂರು ನೀಡಿದ್ದಾರೆ. ಹಿರಿಯಡ್ಕ ನಿವಾಸಿಗಳಾದ ಸಂತ್ರಸ್ತೆ  ಪತಿ ಹನೀಫ್ ಸಯ್ಯದ್(32), ಮಾವ ಅಬ್ಬಾಸ್ ಸಯ್ಯದ್, ಅತ್ತೆ ಜೈತುನ್ ಹಾಗೂ ಪತಿಯ ಅಕ್ಕ ಆಯೇಷಾ […]

ಮುಂಬಯಿ “ಬೊಂಬಾಯಿಡ್ ತುಳುನಾಡ್”ವಿಶ್ವ ಮಟ್ಟದ ತುಳುಸಮ್ಮೇಳನದ ಅಧ್ಯಕ್ಷರಾಗಿ ಡಾ।ಸುನೀತಾ ಎಂ. ಶೆಟ್ಟಿ ಆಯ್ಕೆ

ಮುಂಬಯಿ: ಕಲಾಜಗತ್ತು ಮುಂಬಯಿ ಆಶ್ರಯದಲ್ಲಿ ನವೆಂಬರ್ 8-10ರ ವರೆಗೆ ಮಹಾರಾಷ್ಟ್ರ ಮತ್ತು ಗುಜರಾತ್ ತುಳುವರ ಕೂಡುವಿಕೆಯೊಂದಿಗೆ ಮುಂಬೈನಲ್ಲಿ ನಡೆಯಲಿರುವ “ಬೊಂಬಾಯಿಡ್ ತುಳುನಾಡ್ “ವಿಶ್ವಮಟ್ಟದ ತುಳುಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿಯ ಹಿರಿಯ ಸಾಹಿತಿ ಡಾ ।ಸುನೀತಾ ಎಂ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಮುಂಬಯಿಯ ಕಾಂದಿವಿಲಿ ಪಶ್ಚಿಮದ ಪೊಯ್ಸರ್ ಜಿಮ್ಖಾನ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತುಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ತುಳು ನಾಟಕ, ಜಾನಪದ ನೃತ್ಯಗಳು, ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, ಕೊರಗರ ಡೋಲು, ತುಳುನಾಡ ಪ್ರಾಚೀನ ಕ್ರೀಡೆಗಳ […]