ಕೊಲ್ಲೂರಿನ ಮುದ್ದಿನ ಆನೆ ಇಂದಿರಾ ಇನ್ನಿಲ್ಲ!: ಲೋಕ ಬಿಟ್ಟು ಹೋದಳು ಪ್ರೀತಿಯ ಇಂದಿರಾ

ಕುಂದಾಪುರ :ಕೊಲ್ಲೂರು ಶ್ರೀಮುಕಾಂಬಿಕಾ ದೇವಾಲಯದ ಹೆಣ್ಣಾನೆ ಇಂದಿರಾ (62) ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದೆ. ಅತ್ಯಂತ ಸಾಧು ಸ್ವಭಾವದ ಈ ಆನೆ ದೇವಾಲಯಕ್ಕೆ ನಿತ್ಯ ಬರುವ ಸಾವಿರಾರು ಮಂದಿ ಭಕ್ತರ, ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು. ಮಂಗಳವಾರ ಬೆಳಿಗ್ಗೆ ಅದರ ಶೆಡ್ ನಲ್ಲಿ ನಿಂತಲ್ಲಿಯೇ ಕುಸಿದು ಬಿತ್ತು, ತಕ್ಷಣ ಪಶು ವೈದ್ಯರನ್ನು ಕರೆಸಲಾಯಿತು. ಅವರು ಪರೀಕ್ಷಿಸಿ ತಲೆಗೆ ಜ್ವರ ಏರಿದೆ ಎಂದು ಹೇಳಿದ್ದು, ಔಷಧೋಪಚಾರ ನಡೆಸಿದ್ದರು, ಆದರೇ ಮಲಗಿದ್ದಲ್ಲಿಂದ ಏಳದ ಇಂದಿರಾ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ. […]

ನೆರೆ ಬಂದರೂ ಹಾನಿಯಾಗದೇ ಉಳಿದ ದೈವಗುಡಿ: ಬೆಳ್ತಂಗಡಿಯ ದಿಡುಪೆಯಲ್ಲಿ ಪವಾಡ.!

ಮಂಗಳೂರು: ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಘಟ್ಟದಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳು ತತ್ತರಿಸಿ ಹೋಗಿವೆ. ನೆರೆಯ ಅಬ್ಬರಕ್ಕೆ ಊರಿಗೆ ಊರೇ ಮುಳುಗಿದ್ದು, 250ಕ್ಕೂ ಅಧಿಕ‌ ಮನೆಗಳು ನೆಲಕ್ಕೆ ಉರುಳಿವೆ. ಬದುಕಿಗೆ ಮೂಲಾಧರವಾದ ಕೃಷಿ ನೆಲಕಚ್ಚಿದ್ದು ಬದುಕು ಅಕ್ಷರಶ: ಬೀದಿ ಪಾಲಾಗಿವೆ. ಸಾಕಷ್ಟು ಕುಟುಂಬಗಳು ಮನೆಯೂ ಇಲ್ಲದೇ ಹಾಗೂ ಇದ್ದರೂ ವಾಸಿಸಲಾಗದ ಸ್ಥಿತಿ ಬಂದೊಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ದಿಡುಪೆ ಮುಂತಾದ ಗ್ರಾಮದ […]

ಪುತ್ತೂರು: ಅಪಘಾತದ ‌ವೇಳೆ ಕಲ್ಲು ತೂರಾಟ ಐವರ ಬಂಧನ

ಮಂಗಳೂರು: ಅಪಘಾತದ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸಿದ್ದೀಕ್, ಕೆ.ಹಂಝ, ಹಬೀಬ್ ಫೈಸಲ್, ಅಬ್ದುಲ್  ಸಮೀರ್, ಇಸ್ಮಾಯಿಲ್ ಬಂಧಿತರು. ಪುತ್ತೂರು ಕಬಕ ಗ್ರಾಮದ ಪೋಳ್ಯದಲ್ಲಿ ಬಸ್-ಕಾರು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ‌ ಕಾರು ಚಾಲಕ ಅಬ್ದುಲ್‌ ಹಕೀಂ ಎಂಬುವರು ಮೃತಪಟ್ಟಿದ್ದರು.‌ ಅಪಘಾತಕ್ಕೆ ಸಂಬಂಧಿಸಿದಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸ್ ದಾಖಲಾಗಿ ಖಾಸಗಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಘಟನಾ ಸ್ಥಳದಲ್ಲಿ ಉದ್ರಿಕ್ತರು ಖಾಸಗಿ ಬಸ್ ಮೇಲೆ ಕಲ್ಲು ತೂರಿದ್ದರು. ಕಲ್ಲು […]

ಮೂಡಬಿದಿರೆ: ವಿದ್ಯಾರ್ಥಿನಿಗೆ ಕಾರು ಢಿಕ್ಕಿ; ಗಂಭೀರ ಗಾಯ

ಮೂಡುಬಿದಿರೆ: ಮೂಡಬಿದಿರೆಯ ಸಮೀಪದ ಬೆಳುವಾಯಿಯಲ್ಲಿ ಇನ್ನೋವಾ ಕಾರೊಂದು ಕಾಲೇಜು ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಬೆಳುವಾಯಿ ಮುಡಾಯಿ ಕಾಡು ನಿವಾಸಿ ಜಗನ್ನಾಥ ಮಡಿವಾಳರ ಪುತ್ರಿ , ಉಡುಪಿ ಹಿರಿಯಡ್ಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶುಭಲಕ್ಷ್ಮಿ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿ. ಸದ್ಯ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ನಾಲ್ವರು ವಿದ್ಯಾರ್ಥಿಗಳು ಕಾರ್ಕಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದು ಈ ಸಂದರ್ಭದಲ್ಲಿ ಮೂಡುಬಿದಿರೆ ಕಡೆಯಿಂದ ಅತೀ […]

ಬೈಕ್ ರೈಡರ್ ‘ಐಶ್ವರ್ಯ’ಗೆ ವಿಶ್ವ ಕಿರೀಟ..

ವಾರ್ಪಲೋಟಾ: ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ (ಎಫ್‌ಐಎಂ) ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಐಶ್ವರ್ಯ ಮೊದಲ ಸ್ಥಾನ ಪಡೆದು ಇತಿಹಾಸ ಬರೆದಿದ್ದಾರೆ. 4 ಸುತ್ತಿನ ರೇಸ್‌ನಲ್ಲಿ ಒಟ್ಟು 3,200 ಕಿ.ಮೀ. ಕ್ರಮಿಸಿ, 65 ಅಂಕ ಪಡೆದು ಕೂಟದ ಚಾಂಪಿಯನ್‌ ಎನಿಸಿಕೊಂಡರು. ಪೋರ್ಚುಗಲ್ನ ರೀಟಾ ವಿಯೆರಾ 61 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡರು. ಐಶ್ವರ್ಯ ಸಾಧನೆ ಹಿಂದೆ ದೊಡ್ಡ ಸಾಹಸವಿದೆ. ವಿಶ್ವಕಪ್‌ನಲ್ಲಿ  ಅವರು ಕೇವಲ 250 ಸಿಸಿ ಬೈಕ್‌ನಿಂದ ಇಷ್ಟು ದೊಡ್ಡ ಸಾಧನೆ ಮೆರೆದಿದ್ದಾರೆ. ಬೇರೆ ದೇಶದ […]