ಬಸವಣ್ಣರ ಸಂದೇಶ ಜನತೆಗೆ ತಲುಪಿಸಲು ಸಂಕಲ್ಪ, ಬೆಂಬಲ ಅಗತ್ಯ: ಜಿ. ರಾಜಶೇಖರ್
ಉಡುಪಿ: ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಪ್ರವಾಹ, ಪ್ರವೃತಿ ಹಾಗೂ ಬಹುಜನರ ಸಂಕಲ್ಪದ ವಿರುದ್ಧ ಈಜಿ ಅಸಮಾನತೆಯ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದರು. ಇಂದು ಸಾಣೆಹಳ್ಳಿ ಸ್ವಾಮೀಜಿ ಕಾಲದ ಪ್ರವಾಹದ ವಿರುದ್ಧ ಈಜಲು ಹೊರಟಿದ್ದು, ಆ ಮೂಲಕ ಬಸವಣ್ಣರ ಸಂದೇಶಗಳನ್ನು ಜನರಿಗೆ ಮುಟ್ಟಿಸಲು ಸಂಕಲ್ಪಿಸಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲ ನೀಡಬೇಕಾಗಿದೆ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆ ಮತ್ತು ಉಡುಪಿ ಬಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ […]
ಪಕ್ಷ ಹಾಗೂ ವರಿಷ್ಠನ ತೀರ್ಮಾನದಂತೆ ನಡೆದುಕೊಳ್ಳುವೆ: ಹಾಲಾಡಿ ಶ್ರೀನಿವಾಸ ಶೆಟ್ಟಿ
ಕುಂದಾಪುರ: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜನರ ಆಶೋತ್ತರಗಳನ್ನು ಪೂರೈಸುತ್ತದೆ. ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದು ಉತ್ತಮ ಆಡಳಿತ ನೀಡಲಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. ಸಚಿವ ಸ್ಥಾನದ ಆಂಕಾಕ್ಷೆ ಬಗ್ಗೆ ಕುಂದಾಪುರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿರುವೆ. ಹಾಗಾಗಿ ಪಕ್ಷದ ಮಾರ್ಗಸೂಚಿಗಳನ್ನು ನಾವು ಒಪ್ಪಬೇಕಿದೆ. ಪಕ್ಷ ಹಾಗೂ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿರುವೆ ಎಂದರು. ಕರಾವಳಿ ಜಿಲ್ಲೆಯಲ್ಲಿಯೇ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೆಚ್ಚು […]
ನಾಗಸಾಧುಗಳಿಗೆ ಅವಮಾನ ಉಡುಪಿಯಲ್ಲಿ ‘ಲಾಲ್ ಕಪ್ತಾನ್’ ಸಿನಿಮಾ ನಿಷೇಧಕ್ಕೆ ಆಗ್ರಹ
ಉಡುಪಿ: ಹಿಂದಿ ಭಾಷೆಯ ‘ಲಾಲ್ ಕಪ್ತಾನ್’ ಸಿನಿಮಾದಲ್ಲಿ ನಾಗ ಸಾಧುಗಳನ್ನು ಅವಮಾನ ಮಾಡಲಾಗಿದ್ದು, ಇದರಿಂದ ಹಿಂದು ಧಾರ್ಮಿಕ ಭಾವನೆಗೆ ದಕ್ಕೆಯಾಗುತ್ತದೆ. ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ರಮೇಶ ಪೆಲತ್ತೂರು ಆಗ್ರಹಿಸಿದರು. ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಭಾನುವಾರ ಹಿಂದು ಜನಜಾಗೃತಿ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಚಲನಚಿತ್ರದಲ್ಲಿ ನಾಗಾ ಸಾಧುಗಳಿಗೆ ಸಂಬಂಧಪಟ್ಟ ಕೆಲವು ವಿಕೃತ ದೃಶ್ಯಗಳಿವೆ. ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ರಕ್ಷಣೆಗಾಗಿ ನಾಗಾಸಾಧುಗಳ ಸೇನೆ ನಿರ್ಮಿಸಿದ್ದರು. […]
ಗಾಂಜಾ ಎಳೆಯುತಿದ್ದ ಆರು ಯುವಕರು ಅರೆಸ್ಟ್
ಉಡುಪಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಳೆಯುತಿದ್ದ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಾರಯಣ ಗುರು ಮಂದಿರದ ಹಿಂಭಾಗದ ನಿವಾಸಿ ಚೇತನ್ (26), ಕೊಳಲಗಿರಿ ಚಕ್ಕುಲಿಕಟ್ಟೆ ನಿವಾಸಿ ಪವಡಪ್ಪ ನಿ.ಬಿಳಗಲ್ (25),ಅಲೆವೂರು ನಿವಾಸಿ ಸತೀಶ್.ಎಸ್(32), ಕಲ್ಮಾಡಿ ನಿವಾಸಿ ದೀಕ್ಷಿತ್ ಪೂಜಾರಿ (28), ಅಜ್ಜರಕಾಡು ಡಿಸಿ ಆಫಿಸ್ ಕ್ವಾಟರ್ಸ್ ನಿವಾಸಿ ಪುನೀತ್(18), ಯತೀಶ್(19) ಬಂಧಿತ ಆರೋಪಿಗಳು. ಆರು ಮಂದಿಯನ್ನು ಮಣಿಪಾಲ ಕೆಎಂಸಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ವಿವಿಧ […]
ಕಡಿಯಾಳಿ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ
ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಡಿಯಾಳಿ ದೇವಸ್ಥಾನ ವಠಾರದಲ್ಲಿ ಭಾನುವಾರ ‘ಕೆಸರು ಗದ್ದೆ’ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ಗದ್ದೆಗೆ ಇಳಿದ ನೂರಾರು ಮಂದಿ ಕೆಸರು ನೀರಿನಲ್ಲಿ ಮಿಂದೆದ್ದರು. ಒಬ್ಬರ ಮೇಲೊಬ್ಬರು ಕೆಸರು ಎರಚಿಕೊಂಡು ಸಂಭ್ರಮಿಸಿದರು. ಹಿರಿಯರು ಕಿರಿಯರೊಂದಿಗೆ ಸೇರಿಕೊಂಡು ಕೆಸರಿನಲ್ಲಿ ಕೆಲ ಸಮಯ ಕಳೆದರು. ಕಡಿಯಾಳಿ ದೇಗುಲದ ವಠಾರದ ಗದ್ದೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು. ಕ್ರೀಡಾಕೂಟದ ಅಂಗವಾಗಿ ಹಗ್ಗಜಗ್ಗಾಟ, ವಾಲಿಬಾಲ್, ಕೆಸರು ಗದ್ದೆ ಓಟ, ಹಿಮ್ಮುಖ ಓಟ, ಹಾಳೆ ಎಳೆತ, ಜೋಡಿ ಓಟ, […]