ಆ.2: ಉಡುಪಿಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ

ಉಡುಪಿ: ಚಿತ್ರದುರ್ಗ ಸಾಣೆಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆ ಮತ್ತು ಉಡುಪಿ ಬಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಆ.2ರಂದು ನಡೆಯಲಿದೆ ಎಂದು ಮತ್ತೆ ಕಲ್ಯಾಣ ಉಡುಪಿ ಸಂಯೋಜನ ಸಮಿತಿ ಅಧ್ಯಕ್ಷ ಯು.ಸಿ. ನಿರಂಜನ್‌ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂತಾವರ ಅಲ್ಲಮಪ್ರಭು ಪೀಠದ ನಿರ್ದೇಶಕ ಡಾ. ನಾ. ಮೊಗಸಾಲೆ,‌ ಬಾಲಕಿಯರ ಪಿಯು ಕಾಲೇಜು ಪ್ರಾಧ್ಯಾಪಕ ಜೆ.ಎಂ. ನಾಗರಾಜ […]

ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ನಿಧನ: ಪೇಜಾವರ ಶ್ರೀ ಸಂತಾಪ

ಉಡುಪಿ: ಸಾಹಿತ್ಯ ಕ್ಷೇತ್ರ ಮತ್ತು ವಿಶ್ವಹಿಂದೂ ಪರಿಷತ್ ನಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ ನಮ್ಮ ಅತ್ಯಂತ ಆಪ್ತರೂ, ಆತ್ಮೀಯರೂ ಆದ ಏರ್ಯ ಲಕ್ಮೀನಾರಾಯಣ ಆಳ್ವರ ನಿಧನದ ಸುದ್ದಿಯನ್ನು ತಿಳಿದು ನಮಗೆ ಅತ್ಯಂತ ಸಂತಾಪವಾಗಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲರ ಗೌರವ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ನ್ಯಾಯ, ಧರ್ಮಗಳಿಗೆ ಅನ್ಯಾಯವಾದರೆ ವಿರೋಧವಾದ ಘಟನೆಗಳಾದರೆ ನಿರ್ದಾಕ್ಷಿಣ್ಯವಾಗಿ ಅದನ್ನು ಪ್ರತಿಭಟಿಸುವ ಹೋರಾಟಗಾರರೂ ಆಗಿದ್ದರು. ನನಗಂತೂ ಉತ್ತಮ ಸಲಹೆಗಾರರೂ ಆಗಿದ್ದರು. ಅವರ ಆತ್ಮಕ್ಕೆ ಭಗವಂತನ ಅನುಗ್ರಹ ನಿರಂತರವಾಗಿ ಇರಲೆಂದು ನಾನು ಪ್ರಾರ್ಥಿಸುತ್ತೇನೆ. ಅದರಂತೆ ನಮ್ಮ […]

ಉಡುಪಿಯಲ್ಲಿ ಇಂದ್ರಾಣಿ ನದಿ ಉಳಿಸಿ ಬೃಹತ್ ಅಭಿಯಾನಕ್ಕೆ ಚಾಲನೆ, ಇಂದ್ರಾಣಿ ಶುದ್ಧವಾದರೆ ನಗರದ ಸಮಸ್ಯೆಗಳಿಗೆ ಪರಿಹಾರ: ಶ್ಯಾನ್ ಭಾಗ್

ಉಡುಪಿ ನಗರದಲ್ಲಿ ಇಂದ್ರಾಣಿ ನದಿಯ ಉಳಿವಿಗೆ ಪರಿಸರಾಸಕ್ತ ಯುವಕರ ತಂಡ ಹಮ್ಮಿಕೊಂಡ ಇಂದ್ರಾಣಿ ನದಿ ಉಳಿಸಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಇಂದ್ರಾಳಿ ಆಂಜನೇಯ ದೇವಳದ ಕೆರೆಯ ಬಳಿ ವಾಹನ ಜಾಥಕ್ಕೆ ಚಾಲನೆ ನೀಡಿದ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನ್ ಭಾಗ್ ಅವರು ಮಾತನಾಡಿ, ಇಂದ್ರಾಣಿ ನದಿ ಶುದ್ಧವಾದಲ್ಲಿ ನಗರದ ಹಲವು ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಲಿದೆ. ಹಿಂದೆ ಇಂದ್ರಾಣಿ ನದಿ ಉಗಮದಿಂದ ಕಡಲು ಸೇರುವ ಮೊದಲು 8 ದೇಗುಲಗಳ ಸರೋವರವನ್ನು ತುಂಬಿಕೊಂಡು […]

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ಖ್ಯಾತಿಯ ಸಾಹಿತಿ ಸೀತಾರಾಮ ಕುಲಾಲ್ ವಿಧಿವಶ

ಮಂಗಳೂರು: ‘ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ’, ‘ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ’ ಹೀಗೆ ತುಳುನಾಡಿನ ಜನತೆಯ ಮನಸ್ಸಲ್ಲಿ ಅಚ್ಚಳಿಯದೇ ಉಳಿಯುವ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್ ಭಾನುವಾರ ವಿಧಿವಶರಾಗಿದ್ದಾರೆ. ತುಳು ಸಾಹಿತ್ಯ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಅವರು, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ/ ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ […]

ನೀವಿಷ್ಟು ಮಾಡಿದರೆ ಸಾಕು, ಡೆಂಗ್ಯೂ ಜ್ವರದ ಬಗ್ಗೆ ಹೆದರಬೇಕಿಲ್ಲ:ಇಲ್ಲಿದೆ ಸಿಂಪಲ್ ಸಲಹೆಗಳು

ಇದೀಗ  ಎಲ್ಲೆಲ್ಲೂ ಡೆಂಗ್ಯೂ ಜ್ವರದ ಸುದ್ದಿ ಕೇಳಿಸುತ್ತಿದೆ. ಡೆಂಗ್ಯೂ ಎಂದರೆ ಬೆಚ್ಚಿ ಬೀಳುವವರ ಸಂಖ್ಯೆ ಜಾಸ್ತಿಯಾಗಿದೆ. ಡೆಂಗ್ಯೂ ಜ್ವರ ಬರದಂತೆ ನಾವು ಮೊದಲೇ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಯಾವ ಜ್ವರಕ್ಕೂ ಹೆದರಬೇಕಿಲ್ಲ. ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್: ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?* ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ * ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ * ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ.  * ತೆಂಗಿನ ಚಿಪ್ಪು, ಟಯರ್ […]