ಪುತ್ತೂರು: ಗದ್ದೆಗಿಳಿದು ಕೃಷಿ ಪಾಠ ಕಲಿತ ಚಿಣ್ಣರ ದಂಡು: ಇಲ್ಲಿದೆ ಶಾಲೆಯಲ್ಲೇ ಪ್ರಾಯೋಗಿಕ‌ ಪಾಠ

ಮಂಗಳೂರು: ಕರಾವಳಿ ಭಾಗದ ಬಹುತೇಕ ಶಾಲೆಗಳಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಕೃಷಿಕರ ಗದ್ದೆಗಳಲ್ಲಿ ಭತ್ತ ಬೇಸಾಯದ ಪ್ರಾಯೋಗಿಕ ಪಾಠ ನಡೆಯುತ್ತಿದೆ. ಆದರೆ ಇದಕ್ಕೆಲ್ಲ ಭಿನ್ನವಾಗಿ ಕಡಬ ತಾಲೂಕಿನ ಹಳೆನೇರಿಂಕಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಆಟದ ಮೈದಾನದ ಒಂದು ಭಾಗವನ್ನು ಗದ್ದೆ ಬೇಸಾಯಕ್ಕೆ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಕೃಷಿ ಪಾಠ ನಡೆಯುತ್ತಿದೆ. ಪಾಠಕ್ಕೂ ಸೈ:ಕೃಷಿ ಪಾಠಕ್ಕೂ ಸೈತುಳುನಾಡ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿಲ್ಲ ಎಂದು  ಆಚರಣೆಗಳನ್ನು ಅನುಕರಣೆ ಮಾಡದಿರುವ ಇಂದಿನ ದಿನಗಳಲ್ಲಿ ಗದ್ದೆ ಬೇಸಾಯ, ಕೊರಳ ಪರ್ಬ, ಹೊಸಕ್ಕಿ ಊಟ […]

ಜನರ ಜೀವದ ಜತೆ ಬಿಜೆಪಿ ಶಾಸಕರ ಚೆಲ್ಲಾಟ: ರಮಾನಾಥ ರೈ 

ಮಂಗಳೂರು: ಅಧಿಕಾರದ ಮದದಲ್ಲಿ ಶಾಸಕರು ಕಾಲಹರಣ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸುತ್ತಿಲ್ಲ. ಜನರ ಜೀವನದ ಜತೆ ಜನಪ್ರತಿನಿಧಿಗಳು ಚೆಲ್ಲಾಟ ಆಡುತ್ತಿದ್ದಾರೆ. ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ‌ ಬಿಜೆಪಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳನ್ನು ಯಾರು ತಡೆಗಟ್ಟಬೇಕು..? ಶಾಸಕರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ಜನರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಮಲದ ಕುದುರೆ ಆಪರೇಶನ್: ಬಹುಮತ […]

ಬಿವಿಟಿ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ ಇನ್ನಿಲ್ಲ

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ಇದರ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ( 82 ) ಅವರು ಶನಿವಾರ ನಿಧನ ‌ಹೊಂದಿದರು.ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಸೆಲ್ಕೋ ಫೌಂಡೇಶನ್ ಇದರ ನಿರ್ದೇಶಕರಾಗಿದ್ದ ಅವರು ವರ್ಷದ ಹಿಂದೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಡಿಜಿಎಮ್‌ ಆಗಿದ್ದರು.ಮೃತರು ಪತ್ನಿ, ಮೂವರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಧಾರ್ಮಿಕ- ವೈಜ್ಞಾನಿಕ ಮಾಹಿತಿ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇವರ ವತಿಯಿಂದ “ಹಾವು -ನಾವು” ತುಳು ನಾಡಿನಲ್ಲಿ ನಾಗಾರಾಧನೆಯ ಹಿಂದಿರುವ ಸತ್ಯಾಂಶಗಳು ಧಾರ್ಮಿಕ ಹಾಗೂ ವೈಜ್ಞಾನಿಕ ಚಿಂತನೆಯ ಮಾಹಿತಿಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ  ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಧರ್ಮ ಹಾಗೂ ವಿಜ್ಞಾನ ಬಗ್ಗೆ ವಿಶಿಷ್ಟ  ಕಾರ್ಯಕ್ರಮ ಇದಾಗಿದೆ. ಧಾರ್ಮಿಕ ಹಿನ್ನಲೆಯುಳ್ಳ ನಾಗಬನ ಪರಿಸರದ ಉಳಿಯುವಿಕೆಗೆ  ಕೊಡುಗೆ ನೀಡಿದೆ. ನಾಗಬನವನ್ನು ವನವನ್ನಾಗಿಸಿ ಪರಿಸರವನ್ನು ರಕ್ಷಿಸಿ, […]

ರೋಪ್ ಸ್ಕಿಪ್ಪಿಂಗ್ : ಮಂಗಳೂರಿನ‌ ನಿಶಾ ಕುಲಾಲ್ ಗೆ 2 ಬೆಳ್ಳಿ 1 ಕಂಚು

ಮಂಗಳೂರು:  ಮಂಗಳೂರು ಕದ್ರಿಯ ನಿಶಾ ಕುಲಾಲ್ ಅವರು ಥೈಲ್ಯಾಂಡ್‌ನಲ್ಲಿ ನಡೆದ ಏಷಿಯನ್ ಕಾಂಟಿನೆಂಟಲ್ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್-ಎಸಿಸಿಯಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ‌ ಪದಕ ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ನಿಶಾ ಕುಲಾಲ್ ಸಿಂಗಲ್ ರೋಪ್ ಸ್ಪೀಡ್ ರಿಲೇಯಲ್ಲಿ ಬೆಳ್ಳಿ, ಡಬಲ್ ಡಚ್ ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ, ಡಬಲ್ ಡಚ್ ಸ್ಪೀಡ್ ರಿಲೇಯಲ್ಲಿ ಕಂಚಿನ‌ ಪದಕ ಗಳಿಸಿದ್ದಾರೆ. ಭಾರತ, ಪಾಕಿಸ್ತಾನ, ಸಿಂಗಾಪುರ, ಹಾಂಕಾಂಗ್, ಫಿಲಿಫೀನ್ಸ್, ಖಜಕಿಸ್ತಾನ್,‌ ಕೊರಿಯಾ, ಥೈಲ್ಯಾಂಡ್ ಸೇರಿ 9 ರಾಷ್ಟ್ರಗಳ ಕ್ರೀಡಾಪಟುಗಳು ಈ […]