ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇನ್ನಿಲ್ಲ

ಮಂಗಳೂರು: ಕರಾವಳಿಯ ಹಿರಿಯ ಸಾಹಿತಿ ಏರ್ಯಲಕ್ಷೀನಾರಾಯಣ ಆಳ್ವ(94)ಅವರು ಹೃದಯಘಾತದಿಂದ ಶನಿವಾರ ಸಂಜೆ ಏರ್ಯಬೀಡು ಅವರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಏರ್ಯ ಅವರು ಪತ್ನಿ ಹಾಗೂ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿ, ಸಾಹಿತ್ಯ ದಲ್ಲಿ ವಿಶೇಷ ಸಾಧನೆಗೈದ ಹಿರಿಯ ಚೇತನ ಲಕ್ಷೀನಾರಾಯಣ ಆಳ್ವ ಅವರು ಆರೋಗ್ಯವಾಗಿಯೇ ಇದ್ದರು. ಸಂಜೆಯ ವೇಳೆ ಅವರು ಮನೆಯಲ್ಲಿಯೇ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ. ಗಣ್ಯರ […]

ಸರಕಾರಿ ಯೋಜನೆಗಳ ವಿಫಲತೆಗೆ ಜ‌ನರ ಮಾಹಿತಿ ಕೊರತಯೂ ಕಾರಣ: ಕುದಿ ಶ್ರೀನಿವಾಸ ಭಟ್

ಉಡುಪಿ: ಕೃಷಿಕರು ತಮ್ಮ ಜಮೀನನ್ನು ಪಾಳು ಬಿಡಬಾರದು, ಸರಕಾರ‌ ನೀಡುತ್ತಿರುವ ಹಲವಾರು ಕೃಷಿ ಸೌಲಭ್ಯಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳ ವಿಫಲತೆಗೆ ಅಧಿಕಾರಿಗಳು, ಜನಪ್ರತಿನಿಧಿಳು‌ ಮಾತ್ರವಲ್ಲದೇ ಜನರಲ್ಲಿರುವ ಮಾಹಿತಿ ಕೊರತೆ ಕೂಡಾ ಕಾರಣವಾಗಿದೆ ಎಂದು ಸಾಧನಶೀಲ ಕೃಷಿಕ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಕುದಿ ಶ್ರೀನಿವಾಸ ಭಟ್ ಹೇಳಿದರು. ಅವರು ಶನಿವಾರ ಉಡುಪಿ ಜಿಲ್ಲಾ ಕೃಷಿಕ ಸಂಘ ಉಡುಪಿ ರೆಸಿಡೆನ್ಸಿ ಹೋಟೆಲ್ ರೂಫ್ ಟಾಪ್ ಸಭಾಂಗಣದಲ್ಲಿ  ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ಬಳಸಿಕೊಂಡು […]

ಕಾಡು ಬೆಳೆಸುವುದು ನಮ್ಮ ಸಂಸ್ಕೃತಿ: ಉದಯ ಕುಮಾರ್ ಶೆಟ್ಟಿ

ಉಡುಪಿ: ಪ್ರತಿಯೊಂದು ಮರವನ್ನು ಕೂಡ ನೂರಾರು ಸಂಖ್ಯೆಯ ಜೀವಿಗಳು ಅವಲಂಬಿಸಿಕೊಂಡಿರುತ್ತದೆ. ಮರಗಳನ್ನು, ಕಾಡನ್ನು ಬೆಳೆಸುವುದು ನಮ್ಮ ಸಂಸ್ಕೃತಿ.  ಅದು‌ ಪಾಶ್ಚಿಮಾತ್ಯರಿಂದ ಆಮದು‌ ಮಾಡಿಕೊಂಡಿರುವ ಗಾರ್ಡನ್‌ ವ್ಯವಸ್ಥೆ ಅಲ್ಲ  ಎಂದು ಪಿಲಿಕುಲ ಔಷಧಿ ವನದ ಮೇಲ್ವಿಚಾರಕ ಉದಯ ಕುಮಾರ್‌ ಶೆಟ್ಟಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಒಂದು ಸಾವಿರ ಸಸಿಗಳನ್ನು ನೆಟ್ಟು ಮತ್ತು ಮುಂದಿನ ಐದು ವರ್ಷಗಳ ಕಾಲ ಅವುಗಳನ್ನು ಪೋಷಿಸುವ […]

ವಿಶೇಷ ಮಕ್ಕಳ‌ ಸೇವೆ ದೇವರು ನೀಡಿದ ಅವಕಾಶ: ಮ್ಯಾಥ್ಯೂವಾಸ್

ಉಡುಪಿ: ‌ವಿಶೇಷ ಮಕ್ಕಳನ್ನು ನೋಡಿಕೊಳ್ಳುವವರು ಸೇವಾ ಮನೋಭಾವನೆ ಹೊಂದಬೇಕು. ಇಲ್ಲದಿದ್ದರೆ ಆ ಕಾರ್ಯವನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ವಿಶೇಷ ಮಕ್ಕಳ ಸೇವೆ ಮಾಡುವುದು ವೃತ್ತಿಯಲ್ಲ, ಅದೊಂದು ದೇವರು ನೀಡಿದ ಅವಕಾಶ ಎಂದು ಕಿನ್ನಿಗೋಳಿ ಸೇಂಟ್‌ ಮೇರಿಸ್‌ ವಿಶೇಷ ಶಾಲೆಯ ಸಂಚಾಲಕ ಹಾಗೂ ಧರ್ಮಗುರು ಮ್ಯಾಥ್ಯೂವಾಸ್‌ ಹೇಳಿದರು. ಕರ್ನಾಟಕ ರಾಜ್ಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಮಾವೇಶವನ್ನು […]

ಬಿಜೆಪಿ ಸರಕಾರ ರಚನೆ ಸಂವಿಧಾನಕ್ಕೆ ಮಾಡಿದ ಅಪಚಾರ: ಐವನ್ ಡಿಸೋಜ

ಮಂಗಳೂರು: ‌ಯಡಿಯೂರಪ್ಪ ಅವರಿಗೆ  ಬಹುಮತ ಇಲ್ಲ, ಅಲ್ಪ ಮತದ ಸರಕಾರವಾಗಿದ್ದು, ಸಂವಿಧಾನದ ನಿಯಮ ಗಾಳಿಗೆ ತೂರಿ ಸರಕಾರ ರಚಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ, ದೇಶದಲ್ಲಿ ಎಲ್ಲೂ ನಡೆಯಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ರಾಜ್ಯಪಾಲರು ಪಕ್ಷಪಾತ ಮಾಡಿದ್ದಾರೆ. ಯಾರಾದರೂ ಇದರ ವಿರುದ್ಧ ಕೊರ್ಟ್ ಹೋದರೆ ಈ ಸರ್ಕಾರ ಬಿದ್ದು ಹೋಗುತ್ತದೆ. ಸದನದ ಸದಸ್ಯರ ಸಂಖ್ಯೆ ಕೂಡ ಗಣನೆಗೆ ತೆಗೆದುಕೊಳ್ಳಲಿಲ್ಲ.‌ ಬಿಜೆಪಿಯದ್ದು, ಸಂಖ್ಯಾಬಲ‌ ಇಲ್ಲದ, […]