ಉಪ್ಪಿನಂಗಡಿ: ಐವರು ಅತ್ಯಾಚಾರ ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಬಂಧಿಸಲಾಗಿದೆ. 5 ಮಂದಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಚಂದ್ರಾಕ್ಷ, ಸಂದೀಪ್ ಕುಮಾರ್, ಹರ್ಷ ಯಾನೆ ರವಿ, ಲವ ಕುಮಾರ್ ಯಾನೆ ಲವ ಹಾಗೂ ಲಕ್ಷ್ಮೀಶ ಯಾನೆ ಚರಣ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. […]

ಬೆಳ್ತಂಗಡಿಯ ಯುವಕ‌ ಕತರ್ ನಲ್ಲಿ ಸಾವು: ಕಂಪ್ರೆಶರ್ ಸಿಡಿದು ದುರ್ಘಟನೆ 

ಮಂಗಳೂರು: ಕತಾರ್ ನಲ್ಲಿ ಕಂಪ್ರೆಶರ್ ಸಿಡಿದು ಮಂಗಳೂರು ಯುವಕ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯ ನಿವಾಸಿ ಸಂದೇಶ್ ಶೆಟ್ಟಿ (30), ಮೃತಪಟ್ಟ ಯುವಕ. ಕತಾರ್ ನ ಕಂಪೆನಿಯೊಂದರಲ್ಲಿ ಎಸಿ ಮತ್ತು ಚಿಲ್ಲರ್ ಪ್ಲಾಂಟ್ ಮೇಲ್ವಿಚಾರಕರಾಗಿದ್ದರು. ಅಲ್-ಸಾದ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಚಿಲ್ಲರ್ ಪ್ಲಾಂಟ್ ದುರಸ್ತಿ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತದೇಹವನ್ನು ಹುಟ್ಟೂರಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಸಂದೇಶ್ ರ ಪತ್ನಿಯೂ ಸಹ ವಿಸಿಟಿಂಗ್ ವಿಸಾದಲ್ಲಿ ಇತ್ತೀಚೆಗಷ್ಟೆ ಕತಾರ್ ಗೆ ತೆರಳಿದ್ದರು.

ಸೈಂಟ್ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ‘ಸಂಜೋಶ್‌’ನಿಂದ ಎಂಜಿನಿಯರಿಂಗ್‌ ಶಿಕ್ಷಣ ತರಬೇತಿ

ಮಂಗಳೂರು: ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬೋಧನೆಮಾಡುವ ಉಪನ್ಯಾಸಕರು ಪರಿಣಾಮಕಾರಿ ಬೋಧನ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲ ವಾಗುವಂತೆ ವಾಮಂಜೂರಿನ ಸೈಂಟ್ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಂಡೊ ಯುನಿವರ್ಸಲ್ ಕೊಲಬರೇಶನ್‌ ಫಾರ್‌ ಎಂಜಿನಿಯರಿಂಗ್‌ ಎಜುಕೇಶನ್‌ (ಐಯುಸಿಇಇ) ಸಹಭಾಗಿತ್ವದಲ್ಲಿ ‘ಸಂಜೋಶ್‌’ ಎಂಬ ಹೆಸರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರ (ಟಿಎಲ್ಸಿ)ವನ್ನು ಆರಂಭಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ವಂ| ವಿಲ್ಫ್ರೆಡ್‌ ಪ್ರಕಾಶ್‌ ಡಿ’ಸೋಜಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೈಂಟ್ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನ 60 ಮಂದಿ ಉಪನ್ಯಾಸಕರು ಈ ಶಿಕ್ಷಣ ತರಬೇತಿಗೆ ಹೆಸರು ನೋಂದಾಯಿಸಿದ್ದು, 25 ಮಂದಿ […]

ಬಾಲ್ಯದಲ್ಲೇ ಯಕ್ಷರಂಗದಲ್ಲಿ ಗೆಜ್ಜೆ ಕಟ್ಟಿದ್ರು ಕಾರ್ಕಳದ ಎಳ್ಳಾರೆ ಹುಡ್ಗ: ಈ ಬಾಲ ಪ್ರತಿಭೆಯ ಕತೆ ಕೇಳಿ

 ಯಕ್ಷಗಾನ  “ಯಕ್ಷಗಾನಂ ವಿಶ್ವಗಾನಂ”  ಎನ್ನುವಂತೆ ಯಕ್ಷಗಾನ ಕಲೆಯು ವಿಶ್ವದಲ್ಲಿ ಅತ್ಯಂತ  ಪ್ರಸಿದ್ದವಾಗಿದೆ. ಯಕ್ಷಗಾನದ ಉಭಯ ತಿಟ್ಟುಗಳಲ್ಲಿ ಹಲವಾರು  ಬಾಲ ಕಲಾವಿದರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.  ಇಂತಹ  ಕಲಾವಿದರಲ್ಲಿ ಅನುಜಿತ್ ನಾಯಕ್ ಎಳ್ಳಾರೆ ಕೂಡ ಒಬ್ಬರು. ಬಾಲ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಮಿಂಚುತ್ತಿರುವ ಅನುಜಿತ್  ಕನಸು ಕಂಗಳ ಹುಡುಗ.   ಕನಸುಕಂಗಳ ಹುಡುಗ:  ಕಾರ್ಕಳ ತಾಲೂಕಿನ ಎಳ್ಳಾರೆಯ ಶ್ರೀ ನಿವಾಸ್ ನಾಯಕ್, ಜ್ಯೋತಿ ನಾಯಕ್ ದಂಪತಿಗಳ  ಪುತ್ರ  ಅನುಜಿತ್, ತನ್ನ ಅಣ್ಣ  ಮುಂಬೈ ಯಕ್ಷರಂಗದ  ಶ್ರೇಷ್ಠ ಕಲಾವಿದ […]

ಕಾರ್ಕಳ: ಭುವನೇಂದ್ರ ಕಾಲೇಜಿನಲ್ಲಿ ಎನ್ನೆಸೆಸ್ ಉದ್ಘಾಟನೆ

ಕಾರ್ಕಳ: ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಎನ್ನೆಸೆಸ್, ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಜೀವನದಲ್ಲಿ ಆದರ್ಶಗಳನ್ನು ಪಾಲಿಸಬೇಕು. ಯಾವುದೇ ಕೆಲಸಗಳನ್ನು ಮಾಡುವ ಮೊದಲು ಅದರಿಂದಾಗುವ ಒಳಿತಿನ ಬಗ್ಗೆ ತಿಳಿದಿರಬೇಕು ಮತ್ತು ಅದರ ಬಗ್ಗೆ ಯೋಚಿಸಬೇಕು. ಖಚಿತವಾದ ಗುರಿಯನ್ನು ಹೊಂದಿರದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕೊಕ್ರಾಡಿ ಸರಕಾರಿ ಕಾಲೇಜಿನ ಪ್ರಾಚಾರ್‍ಯ ರೋಬರ್ಟ್ ಮಾರ್ಟಿಸ್ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ ವರ್ಷದ ಎನ್‌ಎಸ್‌ಎಸ್ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದ ಗುರಿಯನ್ನು ಮುಟ್ಟಲು ರಾಷ್ಟ್ರೀಯ ಸೇವಾ […]