ಬೆಳ್ತಂಗಡಿಯ ಯುವಕ‌ ಕತರ್ ನಲ್ಲಿ ಸಾವು: ಕಂಪ್ರೆಶರ್ ಸಿಡಿದು ದುರ್ಘಟನೆ 

ಮಂಗಳೂರು: ಕತಾರ್ ನಲ್ಲಿ ಕಂಪ್ರೆಶರ್ ಸಿಡಿದು ಮಂಗಳೂರು ಯುವಕ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯ ನಿವಾಸಿ ಸಂದೇಶ್ ಶೆಟ್ಟಿ (30), ಮೃತಪಟ್ಟ ಯುವಕ.
ಕತಾರ್ ನ ಕಂಪೆನಿಯೊಂದರಲ್ಲಿ ಎಸಿ ಮತ್ತು ಚಿಲ್ಲರ್ ಪ್ಲಾಂಟ್ ಮೇಲ್ವಿಚಾರಕರಾಗಿದ್ದರು.
ಅಲ್-ಸಾದ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಚಿಲ್ಲರ್ ಪ್ಲಾಂಟ್ ದುರಸ್ತಿ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ.
ಮೃತದೇಹವನ್ನು ಹುಟ್ಟೂರಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಸಂದೇಶ್ ರ ಪತ್ನಿಯೂ ಸಹ ವಿಸಿಟಿಂಗ್ ವಿಸಾದಲ್ಲಿ ಇತ್ತೀಚೆಗಷ್ಟೆ ಕತಾರ್ ಗೆ ತೆರಳಿದ್ದರು.