ಮಂಗಳೂರು: ಮೀನುಗಾರಿಕಾ ಬಂದರು ಅಭಿವೃದ್ಧಿಗೆ 50 ಲಕ್ಷ ಅನುದಾನ 

ಮಂಗಳೂರು: ಶಾಸಕ ವೇದವ್ಯಾಸ್ ಕಾಮತ್ ಅವರ ನಿರಂತರ ಪ್ರಯತ್ನದಿಂದ ಮೀನುಗಾರಿಕಾ ಇಲಾಖೆಯಿಂದ 50 ಲಕ್ಷ ರೂಪಾಯಿ ಮಂಜೂರಾಗಿದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಇದನ್ನು ಮನಗಂಡು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಕಳೆದ ತಿಂಗಳು ಜೂ.19ರಂದು ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದರು. ಅನಂತರ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಹೀಗಾಗಿ ನಡೆಯಬೇಕಾದ ಕೆಲಸ ಕಾರ್ಯಗಳ ಬಗ್ಗೆ […]

ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ `ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಜು.24 ರಂದು ರಘುರಾಮ ಶೆಟ್ಟರ ವಡ್ಡರ್ಸೆಯ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು ಆಮಂತ್ರಣ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮಾತನಾಡಿ, ರಘುರಾಮ ಶೆಟ್ಟರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮ ಅನುಕರಣೀಯ, ಇದೊಂದು […]

ಉಡುಪಿ: ಜುಲೈ 27ರಂದು ಕಾರ್ಗಿಲ್ ಯುದ್ಧಕ್ಕೆ 20 ವರ್ಷ- ವಿಶೇಷ ಕಾರ್ಯಕ್ರಮ

ಉಡುಪಿ: ಕಾರ್ಗಿಲ್ ಯುದ್ದ  ಜು. 27ರಂದು 20 ವರ್ಷ ತುಂಬಲಿದ್ದು ಈ ಸವಿ ನೆನೆಪಿಗೆ, ಸಂಚಲನ ಸ್ವಯಂ ಸೇವಾ ಸಂಸ್ಥೆಯು ಉನ್ನತಿ ಕ್ಯಾರಿಯರ್ ಅಕಾಡೆಮಿ ಸಹಯೋಗದೊಂದಿಗೆ ನಿರ್ಮಿತಿ ಕೇಂದ್ರ ಕಚೇರಿ (ಬಯಲು ರಂಗ ವೇದಿಕೆ) ಇಲ್ಲಿ ಬೆಳಿಗ್ಗೆ 8 ರಿಂದ 9.30 ರ ವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಣಿಪಾಲ ಹೆಸರಿನ ಮೂಲ ‘ಮಣ್ಣಪಳ್ಳ ಕೆರೆ’ ದಂಡೆಯಲ್ಲಿ  527 ಹುತಾತ್ಮ ಯೋಧರ  ಹೆಸರಿನಲ್ಲಿ 527 ಗಿಡಗಳನ್ನು ನೆಡುವ ಕಾರ್ಯಕ್ರಮ ಇದೆ ಎಂದು ಪ್ರಕಟನೆ ತಿಳಿಸಿದೆ.    

ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ

ಉಡುಪಿ: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಜು.24ರಂದು ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಲಾತೂರು ಜಿಲ್ಲೆಯ ಅವಿನಾಶ್ ದಿಗಂಬರ್ ಲೋಖಂಡೆ(28) ಬಂಧಿತ ಆರೋಪಿ. ಈತನಿಂದ 40ಸಾವಿರ ರೂ. ವೌಲ್ಯದ 2.40ಕೆ.ಜಿ. ಗಾಂಜಾ ಮತ್ತು 5000ರೂ. ವೌಲ್ಯದ ಮೊಬೈಲ್ ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ […]

ಶಾಲಾ‌ ಮಕ್ಕಳ ಚಾಲಕರ ಸಂಘದಿಂದ ಸ್ವಚ್ಚತಾ ಕಾರ್ಯ

ಮಂಗಳೂರು: ದ.ಕ.ಜಿಲ್ಲಾ ಶಾಲಾ ಮಕ್ಕಳ ಚಾಲಕರ ಸಂಘ ಮಂಗಳೂರು ಇದರ ವತಿಯಿಂದ ಕೋಡಿಕಲ್ ಕ್ರಾಸ್‌ ಬಳಿ ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಚ್ಚತಾ ಕಾರ್ಯಕ್ರಮ‌ ನಡೆಯಿತು. ಹಲವು ಸಮಯದಿಂದ ಕೆಸರು ತುಂಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇದನ್ನು ಗಮನಿಸಿ ಸಂಘದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಜರುಗಿತು. ರಸ್ತೆಯ ಬದಿಯಲ್ಲಿದ್ದ ಕೆಸರು, ಕಸವನ್ನು ಸ್ವಚ್ಛ ಗೊಳಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮೋಹನ್ ಅತ್ತಾವರ, ಕುಮಾರ್ ಮಾಲೆಮಾರ್, ಕಿರಣ್ ಲೇಡಿಹಿಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಸತೀಶ್ ಪೂಜಾರಿ, ಶಂಕರ್ ಶೆಟ್ಟಿ, […]