ದ.ಕ. ಜಿಲ್ಲೆಯಲ್ಲಿ ಮಳೆ ಚುರುಕು: 2-3 ದಿನ‌ ಮುಂದುವರಿಯುವ ಸಾಧ್ಯತೆ

ಮಂಗಳೂರು: ದ.ಕ.‌ಜಿಲ್ಲೆಯಲ್ಲಿ  ಮಳೆ ಕೊಂಚ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸಾಧಾರಣ ಮಳೆಯಾಗುತ್ತಿದ್ದು, ಗುರುವಾರವೂ‌‌ ಮುಂದುವರಿದಿದೆ. ಗುರುವಾರ ಮಧ್ಯಾಹ್ನದ ಬಳಿಕ ಉತ್ತಮ ‌ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಯ್ತು. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದೆ.‌ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನೂ 3, 4 ದಿನಗಳ ಕಾಲ ಭಾರಿ […]

ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ಮಂಗಳೂರು: ವಿದ್ಯುತ್ ಸ್ಪರ್ಶಿಸಿ‌ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ಸಂಭವಿಸಿದೆ. ರೆಂಕೆದಗುತ್ತು ನಿವಾಸಿ ದಿ.ಸಂಜೀವ ಎಂಬವರ ಪತ್ನಿ ಸುಂದರಿ (55), ಮೃತಪಟ್ಟವರು ಮಧ್ಯರಾತ್ರಿ ಹಟ್ಟಿಯಲ್ಲಿ ದನ, ಕರುಗಳು ಜೋರಾಗಿ ಕೂಗಿಕೊಂಡಿತ್ತು. ಹಟ್ಟಿಗೆ ತೆರಳಿದಾಗ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ. ಹಟ್ಟಿಯಲ್ಲಿ ವಿದ್ಯುತ್ ವೈರ್ ನಿಂದ ಕಬ್ಬಿಣದ ಕಂಬಕ್ಕೆ ವಿದ್ಯುತ್ ಹರಿದಿತ್ತು ಎನ್ನಲಾಗಿದೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಪೊಲೀಸ್ […]

ಕಾರಿನಲ್ಲಿ‌ ಗಾಂಜಾ ‌ಸಾಗಾಟ: ಇಬ್ಬರು ವಶ

ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನೆಕ್ರಾಜೆ ಲಕ್ಷಂಬೀಡು ಕಾಲೋನಿ ನಿವಾಸಿ ಮಹಮ್ಮದ್ ಇಕ್ಬಾಲ್ ಮತ್ತು ಕಾಸರಗೋಡು ಎರಿಯಾಲ್ ಲೈಟ್ ಹೌಸ್ ಬೀಚ್ ರೋಡ್ ನಿವಾಸಿ ಫಜಲ್ ಎ.ಎಂ. ಬಂಧಿತ ಆರೋಪಿಗಳು. ಕೇರಳ ನೋಂದಣಿ ಸಂಖ್ಯೆಯ ಮಾರುತಿ ಕಾರಿನಲ್ಲಿ ಮಣಿಪಾಲದ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾವೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಪದವಿನಂಗಡಿಯಿಂದ ಬೋಂದೆಲ್ ಕಡೆಗೆ ಹೋಗುವ ಈಶ್ವರಕಟ್ಟೆ ಬಳಿ ಆರೋಪಿಗಳನ್ನು […]

ಅಮೂಲ್ ಐಸ್ ಕ್ರೀಂ ವಾಹನದಲ್ಲಿ‌ ಗೋಕಳ್ಳತನ:  ವಾಹನ ಪೊಲೀಸ್ ವಶ ಆರೋಪಿಗಳು ಪರಾರಿ

ಮಂಗಳೂರು: ಅಮುಲ್ ಐಸ್‌ಕ್ರೀಂ ಎಂಬ ಹೆಸರಿನ ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಮೂರು ದನಗಳನ್ನು ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ವಿಟ್ಲ ಪೊಲೀಸರ ತಂಡ ಮೂರು ದನಗಳನ್ನು ಹಾಗೂ ವಾಹನವನ್ನು ವಿಟ್ಲ ಸಮೀಪದ ಸಾಲೆತ್ತೂರು ಕಟ್ಟತ್ತಿಲ ಬಳಿ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಸಾಲೆತ್ತೂರು ರಸ್ತೆ ಮೂಲಕ ಕೇರಳದಲ್ಲಿರುವ ಕಸಾಯಿಖಾನೆಗೆ ಮೂರು ದನಗಳನ್ನು ಅಮುಲ್ ಐಸ್‌ಕ್ರೀಂನ ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಾಲೆತ್ತೂರು ಕಟ್ಟತ್ತಿಲ ಎಂಬಲ್ಲಿ ವಿಟ್ಲ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ […]

ವಿಶ್ವಾಸಮತ ಸಾಬೀತಿಗೆ ನಾಳೆ ಡೆಡ್‌ಲೈನ್‌:ರಾಜ್ಯಪಾರಿಂದ ಸಿ.ಎಂಗೆ ಆದೇಶ:

ಬೆಂಗಳೂರು :  ಶುಕ್ರವಾರ ಮಧ್ಯಾಹ್ಹ 1.30ರೊಳಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಮಾಡಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಆದೇಶ ನೀಡಿದ್ದಾರೆ. ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ಒಂದು  ಮುಹೂರ್ತ ನಿಗಧಿ ಮಾಡಿದ್ದಾರೆ. ಸದನ ನಡೆಯುತ್ತಿರುವಾಗ ಸದನದ ಒಳಗಡೆ ರಾಜ್ಯಪಾಲರು ಪ್ರವೇಶ ಮಾಡಬಹುದೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ರಾಜ್ಯಪಾರಿಂದ ಸಿ.ಎಂಗೆ ಆದೇಶ: ಸಾಂವಿಧಾನಿಕ ಬಿಕ್ಕಟ್ಟು ಕಾಣಿಸಿಕೊಂಡಾಗ ರಾಜ್ಯಪಾಲರು ಮಧ್ಯಪ್ರವೇಶಿಸಿ  ಸಿಎಂಗೆ ಆದೇಶ ನೀಡಿದ್ದಾರೆ. ಗಮನಿಸಬೇಕಾದ ಅಂಶ ಎಂದರೆ ಇಲ್ಲಿ ಆದೇಶ ನೀಡಿರುವುದು ಸಿಎಂಗೆ ಹೊರತು ಸ್ಪೀಕರ್ ಗೆ ಅಲ್ಲ ಎನ್ನುವುದು […]