ಕಾರಿನಲ್ಲಿ‌ ಗಾಂಜಾ ‌ಸಾಗಾಟ: ಇಬ್ಬರು ವಶ

ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ನೆಕ್ರಾಜೆ ಲಕ್ಷಂಬೀಡು ಕಾಲೋನಿ ನಿವಾಸಿ ಮಹಮ್ಮದ್ ಇಕ್ಬಾಲ್ ಮತ್ತು ಕಾಸರಗೋಡು ಎರಿಯಾಲ್ ಲೈಟ್ ಹೌಸ್ ಬೀಚ್ ರೋಡ್ ನಿವಾಸಿ ಫಜಲ್ ಎ.ಎಂ. ಬಂಧಿತ ಆರೋಪಿಗಳು.
ಕೇರಳ ನೋಂದಣಿ ಸಂಖ್ಯೆಯ ಮಾರುತಿ ಕಾರಿನಲ್ಲಿ ಮಣಿಪಾಲದ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾವೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಪದವಿನಂಗಡಿಯಿಂದ ಬೋಂದೆಲ್ ಕಡೆಗೆ ಹೋಗುವ ಈಶ್ವರಕಟ್ಟೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 41.1 ಕೆ.ಜಿ. ಗಾಂಜಾ, ಸಾಗಾಟ ಮಾಡಲು ಬಳಸಿದ 50,000 ಮೌಲ್ಯದ ಕಾರು, ಗಾಂಜಾ ತೂಕ ಮಾಡಲು ಬಳಸುವ ತೂಕದ ಯಂತ್ರ, ಎರಡು ಮೊಬೈಲ್‍ ಫೋನ್‌ಗಳು ಸೇರಿದಂತೆ ಒಟ್ಟು  12,55,260 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.