ಜಲ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದು: ಪುಷ್ಪ ತಾವೂರ್ 

ಉಡುಪಿ: ನೈಸರ್ಗಿಕ ಹಾಗೂ ಜಲ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ ಮಹತ್ತರವಾದುದು ಎಂದು ಉದ್ಯಾವರ ಸಂತ ಫ್ರಾನ್ಸಿಸ್‌ ಝೇವಿಯರ್‌ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪ ತಾವೂರ್‌ ಹೇಳಿದರು. ಉದ್ಯಾವರ ಸಂತ ಫ್ರಾನ್ಸಿಸ್‌ ಝೇವಿಯರ್‌ ಆಂಗ್ಲ ಮಾಧ್ಯಮ ಶಾಲೆ ರೋಟರಿ ಉಡುಪಿ ರಾಯಲ್‌, ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಸಹಕಾರ ಭಾರತಿ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವನಮಹೋತ್ಸವ, ಪರಿಸರ ಮತ್ತು ಜಲ ಸಂರಕ್ಷಣೆ, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಮಾಹಿತಿ […]

ಮಳೆಗಾಲದಲ್ಲೇ ಶುರುವಾಯ್ತು ನೀರಿಗೆ ಬರ:ಇನ್ನು ಬೇಸಿಗೆ ಕತೆ ಏನು?

ರಾಜ್ಯ: ಮಳೆಗಾಲದಲ್ಲಿಯೇ ರಾಜ್ಯದ ವಿವಿದೆಡೆ ನೀರಿನ ಸಮಸ್ಯೆ ಉದ್ಭವಿಸಿದೆ. ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ರಾಜ್ಯದ ಬಹುತೇಕ ಕೆರೆ, ನದಿಗಳು ತುಂಬಿಲ್ಲ. ಶೇ.70ರಷ್ಟುಕೆರೆಗಳು  ನೀರಿಲ್ಲದೇ ಕಂಗಾಲಾಗಿ ಕೂತಂತಿದೆ.  ರಾಜ್ಯದ 25 ಜಿಲ್ಲೆಗಳ 1,323 ಗ್ರಾಮಗಳಿಗೆ ನಿತ್ಯ 2,237 ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ಮಳೆಗಾಲದಲ್ಲಿಯೇ ಈ ರೀತಿ ನೀರಿಗೆ ಬರ ಬಂದರೆ ಬೇಸಿಗೆಯ ಪರಿಸ್ಥಿತಿ ಹೇಗಿರಬಹುದೆನ್ನುವ ಚಿತ್ರಣ ಈಗಾಗಲೇ ಭಯ ಹುಟ್ಟಿಸಿದೆ. ಈಗಲೇ ಹೀಗಾದರೆ? ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು […]

ಪ್ರೊ.‌ ಪಾದೂರು ಶ್ರೀಪತಿ ತಂತ್ರಿ ಅವರ ೮೦ ಸಂವತ್ಸರದ ಹಿನ್ನೆಲೆಯಲ್ಲಿ ವಿಚಾರಗೋಷ್ಠಿ, ಅಭಿನಂದನಾ‌ ಸಮಾರಂಭ

ಉಡುಪಿ: ಹಿರಿಯ ಶಿಕ್ಷಣ ತಜ್ಞ ಪ್ರೊ. ಪಾದೂರು ಶ್ರೀಪತಿ ತಂತ್ರಿ ಅವರು ೮೦ ಸಂವತ್ಸರ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಇದೇ ೨೧ರಂದು ನಗರದ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ ಒಳಾಂಗಣ ಸಭಾಂಗಣದಲ್ಲಿ ವಿಚಾರಗೋಷ್ಠಿ ಹಾಗೂ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಅಭಿನಂದನ ಸಮಿತಿಯ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಗುರುವಾರ ಸುದ್ದಿಗೋಷ್ಢಿಯಲ್ಲಿ‌ತಿಳಿಸಿದರು. ಅಂದು ಬೆಳಿಗ್ಗೆ ೯.೩೦ಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ವಿಚಾರಗೋಷ್ಠಿಯನ್ನು ಉದ್ಘಾಟಿಸುವರು. ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಲ್ಲೇಪುರಂ ವೆಂಕಟೇಶ ಅವರು ಶ್ರೀಪತಿ ತಂತ್ರಿಯವರ […]

ಪಿಎಂಇಜಿಪಿ ಯೋಜನೆ ಅಡಿಯಲ್ಲಿ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

ಉಡುಪಿ, ಜುಲೈ 18: ಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಕಾರ್ಯಕ್ರಮ (ಪಿಎಂಇಜಿಪಿ) ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿ ಮಂಜೂರು ಮಾಡುವುದಾಗಿ ಕೆಲವೊಂದು ಸಂಸ್ಥೆಗಳು ಭರವಸೆ ನೀಡಿ, ಸಾರ್ವಜನಿಕರಿಗೆ ವಂಚಿಸುತ್ತಿರುವುದು ಕಚೇರಿಯ ಗಮನಕ್ಕೆ ಬಂದಿದೆ. ತಮ್ಮ ವೈಯುಕ್ತಿಕ ಲಾಭಕ್ಕಾಗಿ ಮೋಸ ಮಾಡಲು ಪ್ರಯತ್ನಿಸುತ್ತಿರುವ ಇಂತಹ ಮೋಸದ ಅಂಶಗಳಿಗೆ ಉದ್ಯಮಿಗಳು ಬಲಿಯಾಗದಂತೆ ಪಿಎಂಇಜಿಪಿ ಯೋಜನೆಯ ರಾಜ್ಯ ಕಚೇರಿ, ಖಾದಿ ಮತ್ತು ಗ್ರಾಮಾಂತರ ಕೈಗಾರಿಕಾ ಆಯೋಗ, ಸಾರ್ವಜನಿಕರಿಗೆ ತಿಳಿಸಿದೆ. ಅಂತಹ ಯಾವುದೇ ವ್ಯಕ್ತಿಗಳು/ ಸಂಸ್ಥೆಗಳನ್ನು […]

ಹೆಚ್ಚುತ್ತಿದೆ Face App ಹುಚ್ಚು: ಅನುಮಾನ ಮೂಡಿಸಿದೆ App ನ ಷರತ್ತು!!

“ನೀನು ಅಜ್ಜ ಆದ್ರೂ ಭಾರೀ ಚೆಂದಾಗಿ ಕಾಣ್ತಿದ್ದಿ ಮಾರಾಯ”.”ನೀ ಅಜ್ಜಿಯಾದ್ರೂ ಸಖತ್ ಸುಂದರಿಯಾಗಿ ಕಾಣ್ತಿ” ಅಂತೆಲ್ಲಾ ತಮ್ಮ ಗೆಳೆಯರ  ಕುರಿತ ಸ್ಟೇಟಸ್ ಗಳು, ಪೋಸ್ಟ್ ಗಳನ್ನು ಅವರಿಗೆ ವಯಸ್ಸಾದಂತೆ ಕಾಣುವ ಚಿತ್ರಗಳೊಂದಿಗೆ ಹಾಕುತ್ತಿರುವುದು ನೀವು ಮೊನ್ನೆಯಿಂದ ಈ ಕ್ಷಣದವರೆಗೂ ನೋಡೇ ಇರುತ್ತೀರ ಬಿಡಿ. ಇದೆಲ್ಲಾ FaceApp ಮಹಿಮೆ ಮಾರಾರ್ರೆ ಅಂತ ಉದ್ಗಾರ ತೆಗೆಯುತ್ತಿದ್ದೀರಾ? ಯಸ್ ಕರೆಕ್ಟ್. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಚಿತ್ರ ಸಿದ್ಧಪಡಿಸುವ FaceApp  ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದೆ. ಈ ಆ್ಯಪ್ ನ ಮಹಿಮೆಗೆ, […]