ಬ್ರಹ್ಮಾವರದಲ್ಲಿ ಶಿಕ್ಷಕರ ಸಹಕಾರಿ ಸಂಘದ ನವೀಕೃತ ಶಾಖಾ ಕಚೇರಿ ಶುಭಾರಂಭ

ಉಡುಪಿ, ಜುಲೈ 8: ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ ಇದರ ಶಾಖೆಯು ಬ್ರಹ್ಮಾವರದ ಸೈಂಟ್ ಅಂತೋನಿ ಪ್ರೆಸ್ ಪಾಯಿಂಟ್‍ನ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದು, ಈ ಶಾಖೆಯ ಸಂಘದ ಅಧ್ಯಕ್ಷರಾದ ಸಿ. ಪ್ರಭಾಕರ ಶೆಟ್ಟಿಯವರ ನೇತೃತ್ವದಲ್ಲಿ ನೂತನ ವಿನ್ಯಾಸದೊಂದಿಗೆ ನವೀಕರಣಗೊಂಡು ಜೂನ್ 16 ರಂದು ಶುಭಾರಂಭಗೊಂಡಿರುತ್ತದೆ. ಶಾಖೆಯಲ್ಲಿ 528 ಸದಸ್ಯರಿದ್ದು, ಸಂಘದಲ್ಲಿ ಒಟ್ಟು 4146 ಸದಸ್ಯರಿದ್ದಾರೆ. ಸಂಘದ ಒಟ್ಟು ವ್ಯವಹಾರ ಸುಮಾರು 65 ಕೋಟಿ ರೂ. ಆಗಿರುತ್ತದೆ. ಇದೀಗ ನವೀಕರಣಗೊಂಡಿರುವ ಸಂಘದ ಶಾಖಾ ಕಚೇರಿಯಲ್ಲಿ ಜಿಲ್ಲೆಯ ಶಿಕ್ಷಕ […]

ಸೈಂಟ್ ಮೇರಿಸ್ ದ್ವೀಪಕ್ಕೆ ಬೋಟ್ ವ್ಯವಸ್ಥೆ ಹೊಸದಾಗಿ ಟೆಂಡರ್: ಜಿಲ್ಲಾಧಿಕಾರಿ

ಉಡುಪಿ, ಜುಲೈ 8: ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ಮಲ್ಪೆ ಬೀಚ್‍ನಿಂದ ಮತ್ತು ಜೆಟ್ಟಿಯಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬೋಟ್‍ಗಳಿಗೆ ನೀಡಿರುವ ಪರವಾನಗಿ ಅವಧಿಯು ಮುಗಿದಿರುವುದರಿಂದ, ಹೊಸದಾಗಿ ಟೆಂಡರ್ ಕರೆಯುವಂತೆ, ಮಲ್ಪೆ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು, ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಲು, ಬೀಚ್‍ನಿಂದ 4 ಬೋಟ್‍ಗಳು ಮತ್ತು ಜೆಟ್ಟಯಿಂದ 3 ಬೋಟ್‍ಗಳಿಗೆ ಈಗಾಗಲೇ ಅನುಮತಿ […]

ಮಂಗಳೂರು: ಔಷಧಿಗೆ ತೆರಳಿದ ಮಹಿಳೆಗೆ ಸಹಾಯ ಮಾಡಿದ ಎಎಸ್ಐಗೆ ಅಭಿನಂದನೆ

ಮಂಗಳೂರು: ಮಧ್ಯರಾತ್ರಿ ವೇಳೆ ಒಂಟಿ ಮಹಿಳೆಯೊಬ್ಬರು ತಂದೆಗೆ ಔಷಧಿ ತರಲು ಹೋದ ವೇಳೆ ಮಹಿಳೆಗೆ ಸಹಾಯ ಮಾಡಿದ ಕದ್ರಿ ಪೊಲೀಸ್ ಠಾಣೆಯ ಎಎಸ್ಐ ಸಂತೋಷ್ ಕುಮಾರ್ ಅವರ ಕಾರ್ಯವನ್ನು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಗುರುತಿಸಿ ಅಭಿನಂದಿಸಿದ್ದಾರೆ. ಮಹಿಳೆ ತನ್ನ ತಂದೆಗೆ ನಡುರಾತ್ರಿ ಒಂದು ಗಂಟೆಯ ವೇಳೆಗೆ ಅನಾರೋಗ್ಯ ಉಂಟಾದಾಗ ಮೆಡಿಕಲ್ ಶಾಪ್ ಹುಡುಕಿಕೊಂಡು ಹೊರ ಬಂದಿದ್ದರು. ಇ ವೇಳೆ ಮಹಿಳೆಯನ್ನು ಗಮನಿಸಿದ ಎಎಸ್​ಐ ಸಂತೋಷ್ ಅವರು ಮಹಿಳೆಯನ್ನು ತಮ್ಮ ​ವಾಹನದಲ್ಲಿ ಮೆಡಿಕಲ್ ಶಾಪ್​ಗೆ […]

ಮಂಗಳೂರು: ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ ನಿಧನ

ಮಂಗಳೂರು: ಪ್ರಗತಿಪರ ಕೃಷಿಕ, ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ (94 )  ಅಲ್ಪ ಕಾಲದ ಅಸೌಖ್ಯದಿಂದ ಭಾನಿವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಗಂಡು, ಓರ್ವ ಹೆಣ್ಣು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ದೇವಣ್ಣ ಶೆಟ್ಟಿ ಅವರು ಯಕ್ಷಗಾನ ಕಲಾವಿದರಾಗಿದ್ದು ಸುರತ್ಕಲ್ ಮಹಮ್ಮಾಯಿ ಮೇಳ ಸಹಿತ ಬೇರೆ ಬೇರೆ ಮೇಳಗಳಲ್ಲಿ ಕಲಾ ಸೇವೆ‌ ಮಾಡಿದ್ದಾರೆ. ತಾಲೂಕು ಬೋಡ್೯ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸುರತ್ಕಲ್ ಪಟ್ಟಣ ಪ್ರದೇಶ ಗ್ರೇಟರ್ ಮಂಗಳೂರಿಗೆ […]

ಸಸಿಹಿತ್ಲು: ನೀರು‌ ಪಾಲದ ಇಬ್ಬರಲ್ಲಿ ಓರ್ವನ ‌ಶವ ಪತ್ತೆ

ಮಂಗಳೂರು: ಜುಲೈ 7ರಂದು‌ ಭಾನುವಾರ ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ಸಮುದ್ರಪಾಲಾಗಿದ್ದ ಇಬ್ಬರಲ್ಲಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ. ಪತ್ತೆಯಾದ ಶವವನ್ನು ಬಜ್ಪೆ ಸಿದ್ಧಾರ್ಥ ನಗರ ನಿವಾಸಿ ಸುಜಿತ್ ಅವರದ್ದು ಎಂದು ಗುರುತಿಸಲಾಗಿದೆ.‌ ಸಸಿಹಿತ್ಲು ಸಮೀಪ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ಏಳು ಮಂದಿಯ ತಂಡದ ನಾಲ್ವರು ಯುವಕರು ನಿನ್ನೆ ಸಮುದ್ರಕ್ಕಿಳಿದಿದ್ದರು. ಈ ವೇಳೆ ಇಬ್ಬರು ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು‌. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಾಗಿದೆ.